Ad Widget .

ಸೌಜನ್ಯ ಪರ ದನಿ ಎತ್ತಿದ ನಟ ಕಿಶೋರ್

ಸಮಗ್ರ ನ್ಯೂಸ್: ನಟ ಕಿಶೋರ್ ನಟನೆ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಸಂಭವಿಸುವ ಘಟನೆಗಳಿಂದ ಅನ್ಯಾಯ ಎನಿಸಿದಾಗ ನ್ಯಾಯಕ್ಕಾಗಿ ಧ್ವನಿ ಎತ್ತಲು ಹಿಂದೆ ಮುಂದೆ ನೋಡುವುದಿಲ್ಲ. ಯಾವುದೇ ಘಟನೆ ಇರಲಿ ಅನ್ಯಾಯದ ವಿರುದ್ದ ಮಾತನಾಡುತ್ತಾರೆ.

Ad Widget . Ad Widget .

ಮಣಿಪುರ ಘಟನೆ ಬಗ್ಗೆಯು ಆಡಳಿತ ವ್ಯವಸ್ಥೆ ಬಗ್ಗೆ ಗುಡುಗಿದ್ದ ಕಿಶೋರ್ ಇದೀಗ ಸೌಜನ್ಯ ಕೇಸ್ ಪ್ರಕರ ಸಂಬಂಧ ಪಟ್ಟಂತೆ ಮಾತನಾಡಿದ್ದಾರೆ. ಸೌಜನ್ಯ ಕೇಸ್​,ಮಣಿಪುರ ಘಟನೆ ಈ ಎರಡು ವಿಷಯಗಳು ನೋವಿನ ಸಂಗತಿ. ರಾಜಕೀಯದ ದಾಳಗಳಾಗಿ ಅಪರಾಧ ಪ್ರಕರಣಗಳನ್ನು ತಿರುವುದು ತಪ್ಪುಎಂದಿದ್ದಾರೆ.

Ad Widget . Ad Widget .

ಪ್ರಜಾಪ್ರಭುತ್ವದಲ್ಲಿ ನಾವು ರಾಜರು ಎಂದ ಮೇಲೆ ಅಂದರ ಕೈಯಿಂದ ನ್ಯಾಯ ನಿರೀಕ್ಷಿಸಬಾರದು. ಈ ಘಟನೆ ಸಂಬಂಧಿಸಿದಂತೆ ಯಾರಿಗೊ ಅನ್ಯಾಯ ಆಗಿದೆ. ನಮಗ್ಯಾಕೆ ಎಂದು ಕೂರುವ ಮನಸ್ಥಿತಿ ಮೊದಲು ಬಿಡಬೇಕು. ಅವರಿಗಾದ ಸ್ಥಿತಿ ನಾಳೆ ನಮಗೂ ಆಗಬಹುದು ಹೀಗಾಗಿ ಯಾವುದೇ ಅನ್ಯಾಯ ಎನಿಸಿದರೂ ಧ್ವನಿ ಎತ್ತುವರಾಗಬೇಕು.

ಮಣಿಪುರ ಹಾಗೂ ಸೌಜನ್ಯ ಕೇಸ್ನಂತಹ ಘಟನೆಗಳು ಎಲ್ಲೂ ಸಂಭವಿಸಬಾರದು ಎಂದರು. ಇನ್ನು ಸೌಜನ್ಯ ಪ್ರಕರಣದ ವಿಚಾರವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಇದು ಒಳ್ಳೆಯ ಬೆಳವಣಿಗೆ ಎಂದು ಕಿಶೋರ್ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *