ಸಮಗ್ರ ನ್ಯೂಸ್: ಎರಡು ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕಟಣೆ ಹೊರಡಿಸಿದ್ದು, ಆದಷ್ಟು ಬೇಗ 2000 ಮುಖಬೆಲೆಯ ನೋಟು ಹಿಂತಿರುಗಿಸುವಂತೆ ಮನವಿ ಮಾಡಿದೆ.
2023ರ ಮಾರ್ಚ್ 31ಕ್ಕೆ 3.62 ಲಕ್ಷ ಕೋಟಿ ರೂಪಾಯಿಯಷ್ಟಿದ್ದ 2 ಸಾವಿರ ರೂ ನೋಟುಗಳು ಮೇ 19ಕ್ಕೆ 3.56 ಲಕ್ಷ ಕೋಟಿ ರೂ.ಗೆ ಇಳಿದಿತ್ತು. ಜು. 31ರ ಅಂಕಿ-ಅಂಶದಂತೆ ಎಲ್ಲ ಬ್ಯಾಂಕ್ಗಳಿಗೆ ಒಟ್ಟು 3.14 ಲಕ್ಷ ಕೋಟಿ ಮೊತ್ತದ 2 ಸಾವಿರ ರೂ. ನೋಟುಗಳು ವಾಪಸ್ ಬಂದಿವೆ.
ಅಂದರೆ ಮೇ 19ರ ವರೆಗೆ ಹೊರಗಡೆ ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಶೇ. 88 ಬ್ಯಾಂಕ್ಗೆ ಮರಳಿಸಲ್ಪಟ್ಟಿವೆ. ಅರ್ಥಾತ್, 0.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ನೋಟುಗಳು ಇನ್ನೂ ಚಲಾವಣೆಯಲ್ಲಿವೆ.
ವಾಪಸ್ ಬಂದಿರುವ ನೋಟುಗಳ ಪೈಕಿ ಶೇ. 87 ಠೇವಣಿ ರೂಪದಲ್ಲಿ ಹಾಗೂ ಶೇ. 13 ವಿನಿಮಯ ರೂಪದಲ್ಲಿ ಸಂಗ್ರಹಗೊಂಡಿವೆ. ಅದಾಗ್ಯೂ ಇನ್ನೂ 0.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿದ್ದು, ಅವುಗಳೂ ಬ್ಯಾಂಕ್ಗೆ ಮರಳಬೇಕಾಗಿವೆ. ಹೀಗೆ 2 ಸಾವಿರ ರೂ. ನೋಟು ಹಿಂದಿರುಗಿಸಲು ಸೆ. 30 ಕಡೇ ದಿನವಾಗಿದ್ದು,
ಕೊನೆಯ ಹಂತದ ಗಡಿಬಿಡಿ ಜನಜಂಗುಳಿಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರು ಆದಷ್ಟು ಬೇಗ 2 ಸಾವಿರ ರೂ. ನೋಟುಗಳನ್ನು ಬ್ಯಾಂಕ್ಗಳಿಗೆ ಹಿಂದಿರುಗಿಸಬೇಕು ಎಂದು ಆರ್ಬಿಐ ಮನವಿ ಮಾಡಿಕೊಂಡಿದೆ.