ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸಮೀಪದ ಅಲೇಕಾನ್ ಹೊರಟ್ಟಿ, ಮಲೆಮನೆ, ಮೇಗೂರು ಹಟ್ಟಿಹರ, ಮಧುಗುಂಡಿ ಭಾಗದಲ್ಲಿ ಮೂರು ಕಾಡಾನೆಗಳು ಸಂಚರಿಸುತ್ತಿದ್ದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.
20 ಕ್ಕೂ ಹೆಚ್ಚು ರೈತರ ಬೆಳೆಗಳನ್ನು ಕಾಡಾನೆ ತುಳಿದು ನಾಶ ಮಾಡಿವೆ. ಹಟ್ಟಿಹರ ರಾಮಪ್ಪ,ಕೃಷ್ಣಪ್ಪ,ಚಂದ್ರಪ್ಪ, ನರೇಂದ್ರಗೌಡ ಮೇಗೂರು,ಜಯಂತ್ ದಿಲೀಪ್ ಮೇಗೂರು, ಮಂಜುನಾಥ್, ಯೋಗೇಶ್,ಮಧುಗುಂಡಿ ಎಸ್ ಕೆ.ಸುನಿಲ್, ಆಲೇಕಾನ್ ಎಚ್.ಕೆ. ಚಂದ್ರೇಗೌಡ,ಸುನಿಲ್,ವೀರಪ್ಪಗೌಡ ಮತ್ತಿತರ ರೈತರ ಕಾಫಿ ತೋಟ, ಬಾಳೆ ಬೆಳೆಗಳನ್ನು ಕಾಡಾನೆಗಳು ತುಳಿದು ಬೆಳೆ ಹಾನಿ ಮಾಡಿವೆ.
ಬೆಳೆ ಹಾನಿ ಸ್ಥಳಗಳಿಗೆ ಉಪ ವಲಯ ಅರಣ್ಯಾಧಿಕಾರಿ ಬಸವರಾಜ್, ಅರಣ್ಯ ಗಸ್ತು ಅಧಿಕಾರಿ ಪರಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಮೂರು ಕಾಡಾನೆಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಎರಡು ಕಾಡಾನೆಗಳನ್ನು ಚಾರ್ಮಾಡಿ ಅರಣ್ಯಕ್ಕೆ ಓಡಿಸಲಾಗಿದೆ.ಒಂದು ಕಾಡಾನೆ ಅಲೇಕಾನ್ ಭಾಗದ ಸುತ್ತಮುತ್ತ ತಪ್ಪಿಸಿಕೊಂಡಿದೆ.ಆ ಆನೆಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದ್ದೇವೆ’ ಎಂದು ಉಪ ವಲಯ ಅರಣ್ಯಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.