ಸುಳ್ಯ:ಪತ್ನಿಯ ಕೊಲೆಗೆ ಯತ್ನಿಸಿದ ಆರೋಪಿಗೆ ನ್ಯಾಯಾಂಗ ಬಂಧನ

ಸಮಗ್ರ ನ್ಯೂಸ್: ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲಿನ ಅಬ್ದುಲ್ ನವಾಝ್ ವಿರುದ್ಧ ಅವರ ಪತ್ನಿ ರಿಹಾ ಫಾತಿಮಾ ಕೊಲೆಗೆ ಯತ್ನಿಸಿದ್ದಾರೆಂದು ಪೋಲೀಸರಿಗೆ ದೂರು ನೀಡಿದ ಘಟನೆ ಆ.2 ರಂದು ವರದಿಯಾಗಿದೆ.

Ad Widget ... ..

ಅಬ್ದುಲ್ ನವಾಝ್ ಅವರು ಮೂರು ವರ್ಷಗಳ ಹಿಂದೆ ರಿಹಾ ಫಾತಿಮ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗೆ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ಪತಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

Ad Widget

ಮಹಿಳೆ ನೀಡಿದ ದೂರಿನಲ್ಲಿ ವರದಕ್ಷಿಣೆ ಕಿರುಕುಳ, ದಿನನಿತ್ಯವು ಹಲ್ಲೆ ದಿಂಬನ್ನು ಮುಖಕ್ಕೆ ಒತ್ತಿಹಿಡಿದು ಉಸಿರು ಗಟ್ಟಿಸಿ ವಿಕೃತವಾಗಿ ವರ್ತಿಸುವುದು ಹಾಗೂ ತನ್ನ ತಂದೆಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಯ ಠಾಣಾ ಪೋಲಿಸ್ ಅಧಿಕಾರಿಗಳು ಆರೋಪಿ ಯುವಕ ಅಬ್ದುಲ್ ನವಾಝ್ ನನ್ನು ಬಂಧಿಸಿ, ಆ.3 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *