ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಬಿಜೆಪಿಯವರ ಮೌನವೇಕೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,” ದಲಿತ ಹೆಣ್ಣುಮಗಳು ಎಂಬ ಕಾರಣಕ್ಕೆ ಅಸಡ್ಡೆಯೇ? ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಶೋಭಾ ಕರಂದ್ಲಾಜೆ ಅವರ ಬಾಯಿಯನ್ನು ಈಗ ಅದುಮಿ ಹಿಡಿದವರು ಯಾರು?” ಎಂದು ಕೇಂದ್ರ ಸಚಿವೆಯನ್ನು ತರಾಟಗೆ ತೆಗದುಕೊಂಡಿದೆ.
”ಉಡುಪಿಯಲ್ಲಿ ಇಲಿಯನ್ನು ಹುಲಿ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಅದೇ ಕರಾವಳಿಯ ವಿಟ್ಲದಲ್ಲಿಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಮೌನವೇಕೆ?, ಆ ದಲಿತ ಬಾಲಕಿ ಹಿಂದೂ ಅಲ್ಲವೇ?, ಬಿಜೆಪಿಗೆ ನಂಟಿರುವವರು ನಡೆಸುವ ಅತ್ಯಾಚಾರ, ಅನಾಚಾರಗಳಿಗೆ ಬಿಜೆಪಿಯ ಸಮ್ಮತಿ ಇದೆಯೇ?” ಎಂದು ಕಾಂಗ್ರೆಸ್ ಕಿಡಿಕಾರಿದೆ.