Ad Widget .

ಮಾತಿನ‌ ಭರದಲ್ಲಿ ನಾಲಿಗೆ ಹರಿಬಿಟ್ಟ ಅರಗ ಜ್ಞಾನೇಂದ್ರ| ಹೀಗೂ ಮಾತನಾಡಬಹುದೇ ಮಾಜಿ ಸಚಿವರೇ..?

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಡಿದ ಮಾತು ಈಗ ವಿವಾದ ಸೃಷ್ಟಿಸಿದೆ.

Ad Widget . Ad Widget .

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಈಶ್ವರ್ ಖಂಡ್ರೆ ಬಗ್ಗೆ ಮಾತಾಡುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಮರಗಳೇ ಇಲ್ಲದ ಉತ್ತರ ಕರ್ನಾಟಕದ ನಾಯಕರು ಅರಣ್ಯ ಸಚಿವರಾಗಿದ್ದಾರೆ. ಅಲ್ಲಿಯವರೆಲ್ಲ ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆಯವರನ್ನೇ ನೋಡಿದ್ರೆ ಗೊತ್ತಾಗಲ್ವಾ ಎಂದಿದ್ದು, ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಮೂಲಕ ಆರಗ ಜ್ಞಾನೇಂದ್ರ ಪ್ರತಿಭಟನೆ ವೇಳೆ ಯಡವಟ್ಟಿನ ಹೇಳಿಕೆ ನೀಡಿದ್ದಾರೆ. ಮಾಜಿ ಗೃಹ ಸಚಿವರು ಉತ್ತರ ಕರ್ನಾಟಕ ಸಚಿವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *