ಸಮಗ್ರ ನ್ಯೂಸ್: ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ( ಏಐ ಎಸ್ ಎಲ್)ಯಲ್ಲಿ ಉತ್ಪಾದನೆಯನ್ನು ಪುನಾರಂಭಿಸಲು ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್)ವು ಒಪ್ಪಿಗೆ ಸೂಚಿಸಿದೆ. ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಭಾರತೀಯ ಉಕ್ಕು ಪ್ರಾಧಿಕಾರದ ಸಭೆಯಲ್ಲಿ ಎಐಎಸ್‌ಎಲ್‌ನಲ್ಲಿ ಉತ್ಪಾದನೆ ಪುನಾರಂಭಕ್ಕೆ ತಕ್ಷಣದಿಂದಲೇ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಕಾರ್ಖಾನೆಯಲ್ಲಿ ಸದ್ಯದ ಮಟ್ಟಿಗೆ ಬಾರ್ ಮಿಲ್ ಮತ್ತು ಪೈಮರಿ ಮಿಲ್ ಘಟಕಗಳನ್ನು ಮಾತ್ರ ಆರಂಭಿಸಬಹುದಾಗಿದೆ. ಹೀಗಾಗಿ ಅವುಗಳನ್ನು ಮಾತ್ರ ಆರಂಭಿಸುವಂತೆ ಸೂಚಿಸಲಾಗಿದೆ.
ಉತ್ಪಾದನಾ ವೆಚ್ಚ ಅಧಿಕವಾದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ಜನವರಿಯಲ್ಲಿ ಕೇಂದ್ರ ಸರ್ಕಾರ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಕಾರ್ಖಾನೆಗೆ ಬೀಗ ಹಾಕಿತ್ತು.ಈ ಸಮಯದಲ್ಲಿ ಸಂಸದ ಬಿ ವೈ ರಾಘವೇಂದ್ರ ಹಾಗೂ ರಾಜ್ಯ ಸರ್ಕಾರದ ಒತ್ತಡದಿಂದ ವಿಧಾನಸಭಾ ಚುನಾವಣೆಯಲ್ಲಿ ಬೀಗ ಮುದ್ರೆ ಹಿಂಪಡೆದಿತ್ತು. ಈಗ ಉತ್ಪಾದನೆಯನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಮುಚ್ಚಿಹೋಗಿದ್ದ ಕಾರ್ಖಾನೆಯಲ್ಲಿ ಉತ್ಪಾದನೆ ಪುನಾರಂಭಿಸುವ ನಿರ್ಧಾರವು ಸದ್ಯದ ಮಟ್ಟಿಗೆ ಮರುಜೀವ ನೀಡಿದಂತಾಗಿದೆ. ಕಾರ್ಖಾನೆಯ ಕಾರ್ಮಿಕರು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. ಈಗ ಉತ್ಪಾದನೆ ಪುನಾರಂಭಗೊಳ್ಳುತ್ತಿರುವುದು ಅವರಲ್ಲಿ ನಿಟ್ಟುಸಿರು ಬಿಡುವಂತಾಗಿದೆ.