ಸಮಗ್ರ ನ್ಯೂಸ್: ಕಳೆದೊಂದು ದಶಕದ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್‌ನಿಂದ ಜಡ್ಜ್‌ಮೆಂಟ್ ಬಂದಿದೆ. ಈ ಬಗ್ಗೆ ನಾನು ಲಾಯರ್ ಆಗಿ ಹೇಳೋದಾದರೆ ಹೈಕೋರ್ಟ್‌ಗೆ ಅಪೀಲ್ ಹೋಗಬೇಕು. ಸಿಬಿಐ ಕೋರ್ಟ್ ಜಡ್ಜ್‌ಮೆಂಟ್ ಕಾಪಿಯನ್ನು ಓದಿ ಅಪೀಲ್‌ಗೆ ಹೋಗಲು ಅವಕಾಶವಿದೆಯೇ ಎಂಬುದನ್ನು ನೋಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೊಟ್ಟಿತ್ತು. ಆದರೆ, ಸೌಜನ್ಯಾಳ ಪೋಷಕರು ಮರು ತನಿಖೆ ಮಾಡುವಂತೆ ಸರ್ಕಾರಕ್ಕೆ ಬಮದು ಮನವಿ ಮಾಡಿದ್ದಾರೆ. ಆದರೆ, ಕಾನೂನು ಪ್ರಕಾರ ಏನಾಗಬೇಕು ಅಂತ ನೋಡಿ ಮುಂದಿನ ನಿರ್ಧಾರವನ್ನು ಮಾಡುತ್ತೇವೆ. ನಾನು ಲಾಯರ್ ಆಗಿ ಹೇಳೋದಾದರೆ ಇದರ ಬಗ್ಗೆ ಹೈಕೋರ್ಟ್‌ಗೆ ಅಪೀಲ್ ಹೋಗಬೇಕಾಗುತ್ತದೆ ಎಂದು ತಿಳಿಸಿದರು.
ಇನ್ನು ಸೌಜನ್ಯ ಕೇಸ್ ಬಗ್ಗೆ ನಾನು ಈವರೆಗೂ ಸಿಬಿಐ ಕೋರ್ಟ್ ಜಡ್ಜ್‌ಮೆಂಟ್ ಕಾಪಿಯನ್ನು ನೋಡಿಲ್ಲ. ಸೌಜನ್ಯಾಳ ಪೋಷಕರು ಕೋರ್ಟ್‌ನ ಆದೇಶ ಪ್ರತಿಯನ್ನು ತಂದು ಕೊಟ್ಟಿದ್ದಾರೆ. ಈಗ ನಾನು ಒಬ್ಬ ಲಾಯರ್ ಆಗಿ ಜಡ್ಜ್‌ಮೆಂಟ್ ಕಾಪಿಯನ್ನು ಓದಿ ಓಡುತ್ತೇನೆ. ಹೈಕೋರ್ಟ್‌ಗೆ ಮೇಲ್ಮನವಿಗೆ ಹೋಗಲು ಅವಕಾಶ ಇದೆಯೇ ಎಂಬುದನ್ನು ನೋಡುತ್ತೇನೆ ಎಂದು ಹೇಳಿದರು. ಈ ಮೂಲಕ ಸೌಜನ್ಯ ಕೇಸ್ ಬಗ್ಗೆ ಮರು ತನಿಖೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳಿವು ನೀಡಿದ್ದಾರೆ.