ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಅಲೆಗಳ ರಭಸಕ್ಕೆ 8 ಮಂದಿ ಇದ್ದ ದೋಣಿ ಮುಳುಗಡೆಯಾದ ಘಟನೆ ಜು.31 ರಂದು ನಡೆದಿದೆ, ಈ ವೇಳೆ ಓರ್ವ ಮೀನುಗಾರ ಸಮುದ್ರದಲ್ಲಿ ಮೃತ ಪಟ್ಟಿರುವುದು ತಿಳಿದುಬಂದಿದೆ.
ಈ ದೋಣಿಯು ಸಚಿನ್ ಮೊಗವೀರ ಎಂಬವರಿಗೆ ಸೇರಿದ್ದು, ಮಾಸ್ತಿ ಮರ್ಲ ಚಿಕ್ಕು ಎಂಬ ಹೆಸರನ್ನು ಹೊಂದಿತ್ತು. ನಾಡ ದೋಣಿಯಲ್ಲಿ ಒಟ್ಟು 8 ಮಂದಿ ಮೀನುಗಾರರು ಇದ್ದರು, ಅದರಲ್ಲಿ ಆರು ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ, ಆದರೆ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿದ್ದರು.
ಸಮುದ್ರ ಪಾಲಾದ ಇಬ್ಬರು ಮೀನುಗಾರರ ಹುಡುಕಾಟದ ಪೈಕಿ ಓರ್ವ ಮೀನುಗಾರ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮತ್ತೊಬ್ಬ ಮೀನುಗಾರ ಅಲೆಗಳ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.