ಸೇತುವೆ ನಿರ್ಮಾಣ ವೇಳೆ ಕುಸಿದ ಕ್ರೇನ್| 14 ಮಂದಿ ಕಾರ್ಮಿಕರು ಸಾವು ; ಹಲವರು ಗಂಭೀರ

ಸಮಗ್ರ ನ್ಯೂಸ್: ಕ್ರೇನ್ ಕುಸಿತಗೊಂಡ ಪರಿಣಾಮ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಇಂದು (ಆ.1) ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

Ad Widget ... ..

ಸಮೃದ್ಧಿ ಎಕ್ಸ್ಪ್ರೆಸ್ವೇಯ ಮೂರನೇ ಹಂತದ ನಿರ್ಮಾಣದ ಸಂದರ್ಭದಲ್ಲಿ ಗರ್ಡರ್ ಯಂತ್ರ ಬಿದ್ದು ಕನಿಷ್ಠ 14 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

ಈ ಯಂತ್ರವು ಸೇತುವೆ ನಿರ್ಮಾಣದಲ್ಲಿ ಬಳಸುವ ವಿಶೇಷ ಉದ್ದೇಶದ ಮೊಬೈಲ್ ಗ್ಯಾಂಟ್ರಿ ಕ್ರೇನ್ ಆಗಿದೆ. ಇದು ದಿಢೀರ್ ಕುಸಿದು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ, 14 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *