July 2023

ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ – ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಐದು ಗ್ಯಾರಂಟಿಗಳನ್ನು ಘೋ‍ಷಣೆ ಮಾಡಿರುವ ಕಾರಣ ಈ ವರ್ಷ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬುಧವಾರ ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಶಾಸಕರಿಗೆ ಸರ್ಕಾರದ ಪರಿಸ್ಥಿತಿ ವಿವರಿಸಿದ ಅವರು, ಐದು ಗ್ಯಾರಂಟಿಗಳ ಕಾರಣದಿಂದಾಗಿ ಸರ್ಕಾರ ಹಣಕಾಸಿನ ಇಕ್ಕಟ್ಟಿನಲ್ಲಿದೆ ಎನ್ನುವುದನ್ನೂ ತಮ್ಮ ಪಕ್ಷದ ಅಸಮಾಧಾನಗೊಂಡಿರುವ ಶಾಸಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎನ್ನುವ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆ ಡಿಕೆ […]

ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ – ಡಿ.ಕೆ ಶಿವಕುಮಾರ್ Read More »

ಮಂಗಳೂರು: ಉಪನ್ಯಾಸಕನಿಂದ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ | ಆರೋಪಿಗೆ ಜೀವಾವಧಿ ಶಿಕ್ಷೆ

ಸಮಗ್ರ ನ್ಯೂಸ್: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಉಪನ್ಯಾಸಕನೋರ್ವನು ಅನೈಸರ್ಗಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ ಟಿಎಸ್‌ಸಿ-1) ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ಕುಳಾಯಿಯ ಪೃಥ್ವಿರಾಜ್‌ (33) ಈತ ಎಸೆಸ್ಸೆಲ್ಸಿ ವಿದ್ಯಾರ್ಥಿಯೋರ್ವನಿಗೆ 2014ರ ಆ. 1ರಿಂದ 2016ರ ಸೆ. 2ರ ವರೆಗೆ ಅನೈಸರ್ಗಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧಿ

ಮಂಗಳೂರು: ಉಪನ್ಯಾಸಕನಿಂದ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ | ಆರೋಪಿಗೆ ಜೀವಾವಧಿ ಶಿಕ್ಷೆ Read More »

ಶಕ್ತಿ ಯೋಜನೆ ಎಫೆಕ್ಟ್​​| ಆದಾಯ ಹೆಚ್ಚಿಸಲು KSRTC ಮಾಸ್ಟರ್ ಪ್ಲಾನ್!

ಸಮಗ್ರ ನ್ಯೂಸ್: ಶಕ್ತಿ ಯೋಜನೆಯ ಎಫೆಕ್ಟ್ ಆದಾಯದ ಮೂಲ ಹೆಚ್ಚಿಸಲು ಕೆಎಸ್​ಆರ್​ಟಿಸಿ ಮಾಸ್ಟರ್ ಪ್ಲಾನ್ ಮಾಡಿದ್ದು, ಬಸ್​​ಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನಲೆ ಒಪ್ಪಂದದ ಮೇರೆಗೆ ಬಸ್ ದರ ಪರಿಷ್ಕರಣೆ ಮಾಡಲಾಗಿದೆ. ಬಸ್​ ದರ ಪರಿಷ್ಕರಣೆ ಮಾಡಿ KSRTC ನಿಗಮ ಆದೇಶ ಹೊರಡಿಸಿದೆ. ಒಪ್ಪಂದದ ಮೇರೆಗೆ ಸಂಚಾರ ಮಾಡುವ KSRTC ಸಾಮಾನ್ಯ ಬಸ್ ಗಳ ದರ ಏರಿಕೆ ಮಾಡಲಾಗಿದೆ. ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ 7 ವಿವಿಧ ರೀತಿಯ ಒಪ್ಪಂದದ ಮೇರೆಗೆ ಸಂಚಾರ ಮಾಡುವ ಬಸ್​​ಗಳ

ಶಕ್ತಿ ಯೋಜನೆ ಎಫೆಕ್ಟ್​​| ಆದಾಯ ಹೆಚ್ಚಿಸಲು KSRTC ಮಾಸ್ಟರ್ ಪ್ಲಾನ್! Read More »

ಮಡಿಕೇರಿ: ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ | ರಾತ್ರೋ ರಾತ್ರಿ ಗಾಯಾಳನ್ನು ಭೇಟಿಯಾದ ಶಾಸಕ ಡಾ. ಮಂಥರ್ ಗೌಡ

ಸಮಗ್ರ ನ್ಯೂಸ್:ನಲ್ಲೂರು ತೋಟದ ಕೂಲಿ ಕಾರ್ಮಿಕ ವಿಜಯ್ ಕುಮಾರ್ ಅವರ ಮೇಲೆ ಜು 26ರಂದು ಕಾಡಾನೆ ದಾಳಿಯಾಗಿದೆ. ಅವರನ್ನು ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರು ಅಂದೇ ರಾತ್ರಿ 12 ಗಂಟೆಗೆ ಮೈಸೂರಿನ ಆಸ್ಪತ್ರೆಗೆ ಆಗಮಿಸಿ ಗಾಯಳು ಯೋಗ ಕ್ಷೇಮ ವಿಚಾರಿಸಿ ಗಾಯಾಳುವಿಗೆ ಧೈರ್ಯ ತುಂಬಿದರು. ರೋಗಿಯ ಕುಟುಂಬಸ್ಥರಿಗೆ ಬೆಟ್ ಶಿಟ್ ಮೂಲಕ ಊಟದ ವ್ಯವಸ್ಥೆ ಮಾಡುವ ಮೂಲಕ ಸ್ಪಂದನೆ ನೀಡಿದರಲ್ಲದೆ, ತುರ್ತು ಚಿಕಿತ್ಸೆಗೆ ರೂ. 10 ಸಾವಿರ ನಗದನ್ನು

ಮಡಿಕೇರಿ: ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ | ರಾತ್ರೋ ರಾತ್ರಿ ಗಾಯಾಳನ್ನು ಭೇಟಿಯಾದ ಶಾಸಕ ಡಾ. ಮಂಥರ್ ಗೌಡ Read More »

Health tips: ಉಪ್ಪು ರುಚಿಯಷ್ಟೇ ಅಲ್ಲ, ಸೌಂಧರ್ಯವರ್ಧಕವೂ ಹೌದು!!

ಸಮಗ್ರ ನ್ಯೂಸ್: ಅಡುಗೆ ಮನೆಯಲ್ಲಿ ರುಚಿ ನಿರ್ಧರಿಸುವ ಮುಖ್ಯ ವಸ್ತು ಉಪ್ಪು. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದು ಹಲವರಿಗೆ ಗೊತ್ತೇ ಇಲ್ಲ. ಎಣ್ಣೆಯುಕ್ತ ತ್ವಚೆಯಿಂದ ಮುಖದಲ್ಲಿ ಉಂಟಾದ ಗುಳ್ಳೆ, ಧೂಳು ಸೇರಿಕೊಂಡು ಹಾಳಾದ ತ್ವಚೆಯನ್ನು ಸರಿಪಡಿಸಲು ಉಪ್ಪನ್ನು ಹೀಗೆ ಬಳಸಬಹುದು. ಪುಡಿ ಉಪ್ಪಿಗೆ ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರಣ ತಯಾರಿಸಿ. ಹದಿನೈದು ನಿಮಿಷ ಕಾಲ ನಿಮ್ಮ ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮೊಡವೆ, ಕಪ್ಪು ಕಲೆ ಹಾಗೂ

Health tips: ಉಪ್ಪು ರುಚಿಯಷ್ಟೇ ಅಲ್ಲ, ಸೌಂಧರ್ಯವರ್ಧಕವೂ ಹೌದು!! Read More »

ಕಾಲೇಜು ವಾಶ್ ರೂಂನಲ್ಲಿ ವಿದ್ಯಾರ್ಥಿನಿಯರಿಂದ ವಿಡಿಯೋ ರೆಕಾರ್ಡ್ ಪ್ರಕರಣ| ಉಡುಪಿಯತ್ತ ಮಹಿಳಾ ಆಯೋಗ ಸದಸ್ಯೆ ಖುಷ್ಬೂ

ಸಮಗ್ರ ನ್ಯೂಸ್: ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರ ವಿಡಿಯೋವನ್ನು ವಿದ್ಯಾರ್ಥಿನಿಯರು ರೆಕಾರ್ಡ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲಿಸಲು ನಾನು ಉಡುಪಿಗೆ ತೆರಳುತ್ತಿದ್ದೇನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರು ಬುಧವಾರ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರಾದ ಶಬ್ನಾಜ್, ಅಲ್ಫಿಯಾ ಮತ್ತು ಅಲೀಮಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಈ ಘಟನೆಯು ಅತ್ಯಂತ ದುಃಖಕರ ಎಂದಿರುವ ಖುಷ್ಬೂ, ಬಾಲಕಿಯರು ವಾಶ್‌ರೂಮ್‌ನಲ್ಲಿ ತಮ್ಮ ಸಹವರ್ತಿಗಳ ವಿಡಿಯೋ ಚಿತ್ರೀಕರಿಸಿದ ವಿಷಯವನ್ನು ಪರಿಶೀಲಿಸಲು ಉಡುಪಿಗೆ ಹೋಗುತ್ತಿದ್ದೇನೆ.

ಕಾಲೇಜು ವಾಶ್ ರೂಂನಲ್ಲಿ ವಿದ್ಯಾರ್ಥಿನಿಯರಿಂದ ವಿಡಿಯೋ ರೆಕಾರ್ಡ್ ಪ್ರಕರಣ| ಉಡುಪಿಯತ್ತ ಮಹಿಳಾ ಆಯೋಗ ಸದಸ್ಯೆ ಖುಷ್ಬೂ Read More »

ನಾಗಾಲೋಟದ ಹಾದಿ ಹಿಡಿದ ಕಾಳುಮೆಣಸು ದರ| ಇತ್ತ ಹೊಸ‌ ಅಡಿಕೆ‌ ಬೆಲೆಯೂ ಏರಿಕೆ|

ಸಮಗ್ರ ನ್ಯೂಸ್: ಸೈಲೆಂಟಾಗಿ‌ ಮಲಗಿದ್ದ ಕಾಳುಮೆಣಸು ‌ದರ ದಿಢೀರ್ ಜಿಗಿತ‌ ಕಂಡಿದ್ದು ವಾರದಲ್ಲಿ ₹100 ರಷ್ಟು ಏರಿಕೆ‌ ಕಂಡಿದೆ. ದರ ಏರಿಕೆ ಸತತವಾಗಿ ಮುಂದುವರೆದಿದ್ದು ದಿನಕ್ಕೆ 10-20 ರಷ್ಟು ಹೆಚ್ಚಾಗುತ್ತಿದೆ. 7 ವರ್ಷಗಳ ಅನಂತರ 600 ರೂ. ಗಡಿ ದಾಟಿದೆ. ಜು. 24ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 590 ರೂ.ನಿಂದ 605 ರೂ. ತನಕವು ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ 550 ರೂ ಗೆ ಖರೀದಿಯಾಗಿದೆ. 2015-16ರಲ್ಲಿ ದಾಖಲಾಗಿದ್ದ 675 ರೂ.ನಿಂದ 700 ರೂ. ಗರಿಷ್ಠ ಧಾರಣೆಯಾಗಿತ್ತು. ಅನಂತರ 300

ನಾಗಾಲೋಟದ ಹಾದಿ ಹಿಡಿದ ಕಾಳುಮೆಣಸು ದರ| ಇತ್ತ ಹೊಸ‌ ಅಡಿಕೆ‌ ಬೆಲೆಯೂ ಏರಿಕೆ| Read More »

ಭಾರೀ ಮಳೆ ಹಿನ್ನೆಲೆ ದ. ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್| ಇಂದು (ಜು.27) ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಕೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ, ಸರಕಾರಿ, ಅನುದಾನಿತ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಗೆ ಜುಲೈ 27 ರಂದು ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿನ ಪದವಿಪೂರ್ವ, ಪದವಿ , ಸ್ನಾತಕೋತ್ತರ, ಇಂಜಿನಿಯರಿಂಗ್‌ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.

ಭಾರೀ ಮಳೆ ಹಿನ್ನೆಲೆ ದ. ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್| ಇಂದು (ಜು.27) ಶಾಲೆಗಳಿಗೆ ರಜೆ Read More »

ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ನೂತನ ಪದಾಧಿಕಾರಿಗಳ ಆಯ್ಕೆ

ಸಮಗ್ರ ಸಮಾಚಾರ:ದಕ್ಷಿಣ ಕನ್ನಡ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಚಾಲಕರ ಹಾಗೂ ಮಾಲಕರ ಸಂಘಟನೆ ನೂತನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಚಾಲಕ ಇಸ್ಮಾಯಿಲ್ ಹಾಜಿಕ್ಕ್, ಅಧ್ಯಕ್ಷ ನಾಗೇಶ್ ಬಿ., ಉಪಾಧ್ಯಕ್ಷ ರಂಜಿತ್, ಪ್ರಧಾನ ಕಾರ್ಯದರ್ಶಿ ನಿಸಾರ್ ಅಹಮದ್, ಉಸ್ತುವಾರಿ ಲೋಹಿತ್, ಗೌರವ ಅಧ್ಯಕ್ಷ ಸುಧಾಕರ ತುಂಬೆ, ಗೌರವ ಅಧ್ಯಕ್ಷರು ಮಹಮ್ಮದ್ ಅಲಿ, ಸಂಘಟನೆ ಕಾರ್ಯದರ್ಶಿ ಪ್ರಜೇಶ್, ಕಾರ್ಯದರ್ಶಿ ತಿಲಕ್ ಪಿ., ಸಹಾಯಕ ಕಾರ್ಯದರ್ಶಿ ಚಿದಾನಂದ, ಕೋಶಾಧಿಕಾರಿ ಮೂಸ ಶೇರಿಫ್ ಮತ್ತು ರೋಷನ್ ಡಿ. ಸೋಜಾ,

ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ನೂತನ ಪದಾಧಿಕಾರಿಗಳ ಆಯ್ಕೆ Read More »

ದ.ಕ: ಜು.27ರಂದು ಶಾಲಾ ಕಾಲೇಜುಗಳಿಗೆ ರಜೆ| ನಕಲಿ ಆದೇಶ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಡಿಸಿ ಗರಂ

ಸಮಗ್ರ ನ್ಯೂಸ್: ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯ ಮೊಹರು, ಸಹಿ ಹೊಂದಿದ ನಕಲಿ ಆದೇಶ ಪತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟ ಪ್ರಸಂಗ ಇಂದು(ಜು.26) ರಾತ್ರಿ ನಡೆದಿದೆ. ಈ ಸಂಬಂಧ ಎಚ್ಚರಿಕೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಇಂತಹ ದುಷ್ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ದ.ಕ: ಜು.27ರಂದು ಶಾಲಾ ಕಾಲೇಜುಗಳಿಗೆ ರಜೆ| ನಕಲಿ ಆದೇಶ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಡಿಸಿ ಗರಂ Read More »