July 2023

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ| ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಸಮ ನ್ಯೂಸ್ : ಕರಾವಳಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.4 ಮತ್ತು 5 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು, ಜು. 5 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಫ್ ಮುಗಿಲನ್ ಆದೇಶಿಸಿದ್ದಾರೆ.

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ| ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ Read More »

ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿಯುತ್ತಾರಾ ಶೋಭಾ ಕರಂದ್ಲಾಜೆ!? ಯಡಿಯೂರಪ್ಪ ಹೈಕಮಾಂಡ್ ಗೆ ಹೇಳಿದ ಆ ಗುಟ್ಟೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ…

ಸಮಗ್ರ ವಾರ್ತೆ: ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ನೂತನ ಸರ್ಕಾರ ಆರಂಭವಾಗಿ ಅಧಿವೇಶನ ಶುರುವಾದರೂ ಬಿಜೆಪಿ ಅಧ್ಯಕ್ಷರ ನೇಮಕ ಮಾತ್ರ ಇನ್ನೂ ಬಾಕಿಯಾಗಿ ಉಳಿದಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಕೂಡ ಅಧ್ಯಕ್ಷ ಆಯ್ಕೆ ಬಗ್ಗೆ ತಲೆಕೆಡಿಸಿಕೊಂಡಿದ್ದು, ಈ ಸ್ಥಾನಕ್ಕೆ ಮಹಿಳೆಯೊಬ್ಬರು ಆಯ್ಕೆಯಾಗುವ ಸಾಧ್ಯತೆ ಇದೆ. ಹಾಲಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಅಧಿಕಾರವಧಿ ಮುಗಿದಿದ್ದು ತುರ್ತಾಗಿ ನೂತನ ಅಧ್ಯಕ್ಷ ನೇಮಕವಾಗಬೇಕಿದೆ. ನೂತನ ಅಧ್ಯಕ್ಷರ ಸ್ಥಾನಕ್ಕೆ ಹಲವು ನಾಯಕರ ಹೆಸರುಗಳು ಕೇಳಿ ಬಂದಿದ್ದು, ಮಾಜಿ ಮುಖ್ಯಮಂತ್ರಿ

ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿಯುತ್ತಾರಾ ಶೋಭಾ ಕರಂದ್ಲಾಜೆ!? ಯಡಿಯೂರಪ್ಪ ಹೈಕಮಾಂಡ್ ಗೆ ಹೇಳಿದ ಆ ಗುಟ್ಟೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ… Read More »

ಕೊಟ್ಟಿಗೆಹಾರ:ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ – ಮೋಹನ್ ಕುಮಾರ್

ಸಮಗ್ರ ನ್ಯೂಸ್: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು’ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಬಿ.ಜಿ.ಮೋಹನ್ ಕುಮಾರ್ ಹೇಳಿದರು. ಅವರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಇಚ್ಚಾಶಕ್ತಿಯ ಕೊರತೆಯಿಂದ ವನಮಹೋತ್ಸವವು ತನ್ನ ಮಹತ್ವವನ್ನು ಕಳೆದುಕೊಂಡು ಒಣ ಮಹೋತ್ಸವ ಆಗುತ್ತಿದೆ. ಪ್ರಾಣಿ ಪಕ್ಷಿಗಳಿಗೆ ಉಳಿಸಲು ಉತ್ತಮ ಹಣ್ಣಿನ ಗಿಡಗಳನ್ನು ನೆಡುವ ಅಗತ್ಯ ಹಿಂದಿನಿಗಿಂತಲೂ ಈಗ ಹೆಚ್ಚಾಗಿ ಆಗಬೇಕು’ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ

ಕೊಟ್ಟಿಗೆಹಾರ:ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ – ಮೋಹನ್ ಕುಮಾರ್ Read More »

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ| ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಸಮಗ್ರ ನ್ಯೂಸ್: ಕರಾವಳಿ ಭಾಗದಲ್ಲಿ ತೀವ್ರತೆಯ ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಧಾರಕಾರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.4ರ ಮಧ್ಯಾಹ್ನ ಬಳಿಕ ಮುಂದಿನ ಕೆಲವು ಗಂಟೆಗಳ ಕಾಲ ಬಲವಾದ ಮೇಲ್ಮೈ ಮಾರುತಗಳು ಬೀಸಲಿದ್ದು, ಗುಡುಗು ಮತ್ತು ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ| ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ Read More »

ಮೂಡುಬಿದಿರೆ‌: ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಮೂಡುಬಿದಿರೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.3ರ ರಾತ್ರಿ ನಡೆದಿದೆ. ಮೃತರನ್ನು ಸುಮಂತ್ (21) ಎಂದು ಗುರುತಿಸಲಾಗಿದೆ. ಸುಮಂತ್ ಸೋಮವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣಗಳು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತಿದ್ದಾರೆ.

ಮೂಡುಬಿದಿರೆ‌: ಯುವಕ ಆತ್ಮಹತ್ಯೆ Read More »

ಕುರುಂಜಿಬಾಗ್ ದ ಕೊರಗಜ್ಜ ವಿಡೀಯೋ ತುಳು ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ

ಸಮಗ್ರ ನ್ಯೂಸ್: ಚಿತ್ತೆಶ್ ಕ್ರಿಯೇಷನ್ಸ್ ಸುಳ್ಯ ಅರ್ಪಿಸುವ ಕುರುಂಜಿಬಾಗ್ ದ ಕೊರಗಜ್ಜ ವೀಡಿಯೋ ತುಳು ಭಕ್ತಿಗೀತೆಯನ್ನು ಕುರುಂಜಿಬಾಗ್ ನಲ್ಲಿರುವ ಶ್ರೀ ಕೊರಗಜ್ಜ ದೇವಾಲಯದಲ್ಲಿ ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಅರ್ಚಕರಾಗಿರುವ ಶ್ರೀ ನಾರಾಯಣ ಪೂಜಾರಿ ಯವರು ಭಕ್ತಿಗೀತೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು .ಸುಳ್ಯದ ಖ್ಯಾತ ಜ್ಯೋತಿಷಿ ಹಾಗೂ ಸಾಹಿತಿಗಳು ಮತ್ತು ಗಾಯಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ್ ಪೂಜಾರಿಯವರು ಮುಖ್ಯ ಅತಿಥಿಗಳಾಗಿದ್ದರು . ಈ ಭಕ್ತಿಗೀತೆಗೆ ಸಾಹಿತ್ಯ ರಚಿಸಿ ಹಾಡಿರುವ

ಕುರುಂಜಿಬಾಗ್ ದ ಕೊರಗಜ್ಜ ವಿಡೀಯೋ ತುಳು ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ Read More »

ಸದನದ ಕಲಾಪಕ್ಕೂ ಮೊದಲು ಉಭಯ ಪಕ್ಷಗಳ ನಾಯಕರಿಂದ ಮಾತುಕತೆ

ಸಮಗ್ರ ನ್ಯೂಸ್: ಸದನದ ಕಲಾಪ ಪ್ರಾರಂಭವಾಗುವುದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪೀಕರ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.‌ ಈ ಸಂದರ್ಭ ಮಾಜಿ ಸಚಿವ ಸುನಿಲ್ ಕುಮಾರ್, ಸ್ಪೀಕರ್ ಯು.ಟಿ ಖಾದರ್ ಕೂಡಾ ಉಪಸ್ಥಿತರಿದ್ದರು.

ಸದನದ ಕಲಾಪಕ್ಕೂ ಮೊದಲು ಉಭಯ ಪಕ್ಷಗಳ ನಾಯಕರಿಂದ ಮಾತುಕತೆ Read More »

ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ

ಸಮಗ್ರ ನ್ಯೂಸ್: ಇಲಿ ಜ್ಚರಕ್ಕೆ ಯುವಕನೋರ್ವ ಬಲಿಯಾದ ಘಟನೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಸಂಭವಿಸಿದೆ. ಚೆಂಬೇರಿ ಆನೆಪಾರೆ ನಿವಾಸಿಯ ಕೂಲಿ ಕಾರ್ಮಿಕರಾದ ಬಾಲನ್ ಅವರ ಪುತ್ರ ಲಿಬೀನ್ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ. ಈತ ಜ್ವರ ಪೀಡಿತನಾಗಿ ಕೇರಳದ ಪೆರಿಯಾರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಜಾಂಡೀಸ್ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದ್ದರು. ನಂತರ ಇದರೊಂದಿಗೆ ಇಲಿ ಜ್ವರ ಕೂಡ ಬಾಧಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇಲಿ ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಘಟನೆಯಿಂದ

ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ Read More »

ಪಬ್‌ ಜೀ ಗೇಮ್‌ ಮೂಲಕ ಪರಿಚಯ|ಪ್ರಿಯಕರನಿಗಾಗಿ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ.!

ಸಮಗ್ರ ನ್ಯೂಸ್: ಪಬ್‌ ಜೀ ಗೇಮ್‌ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತಕ್ಕೆ ಬಂದಿರುವ ಘಟನೆ ನಡೆದಿದೆ. ಗ್ರೇಟರ್‌ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್‌ ಜನಪ್ರಿಯ ಮೊಬೈಲ್‌ ಗೇಮ್‌ ಪಬ್‌ ಜೀ ಆಡುತ್ತಾ ಆಡುತ್ತಾ ಅದರ ಮೂಲಕವೇ ಒಬ್ಬ ಮಹಿಳೆಗೆ ಮೆಸೇಜ್‌ ಮಾಡಿ ಆಕೆಯನ್ನೇ ಪ್ರೀತಿಸಲು ತೊಡಗಿದ್ದಾರೆ. ಇನ್ನು ಆ ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದು, ಆಕೆ ಪಾಕಿಸ್ತಾನ ಮೂಲದವಳು ಆಗಿದ್ದಾಳೆ ಎನ್ನುವುದು ಅರಿತುಕೊಂಡಿದ್ದರೂ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್‌ ಮಾಡತೊಡಗಿದ್ದಾರೆ. ಹೀಗೆ

ಪಬ್‌ ಜೀ ಗೇಮ್‌ ಮೂಲಕ ಪರಿಚಯ|ಪ್ರಿಯಕರನಿಗಾಗಿ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ.! Read More »

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಜು. 2ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಪವಿತ್ರಾ ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡ ಎಂಬಾತನನ್ನು ಎರಡನೇ ವಿವಾಹವಾಗಿದ್ದಳು. ಚೇತನ್​ ಕಂಪೆನಿಯೊಂದರ ಮಾಲೀಕನಾಗಿದ್ದು, ಇತ್ತೀಚೆಗೆ ಚೇತನ್​ಗೆ ಮತ್ತೊರ್ವ ಯುವತಿಯ ಸಂಪರ್ಕ ಬೆಳೆದಿದ್ದು, ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ತನ್ನ

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ Read More »