July 2023

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌

ಸಮಗ್ರ ನ್ಯೂಸ್: ವಾಟ್ಸಾಪ್‌ ಇದೀಗ ವಿಂಡೋಸ್‌ನಲ್ಲಿ ಟೆಕ್ಸ್ಟ್‌ ಗಾತ್ರವನ್ನು ಅಡ್ಜಸ್ಟ್‌ ಮಾಡುವ ಹೊಸ ಫೀಚರ್‌ ಲಾಂಚ್‌ ಮಾಡಲು ಹೊರಟಿದೆ. ಈ ಹೊಸ ಫೀಚರ್ಸ್ ಬಳಕೆದಾರರಿಗೆ ತಮ್ಮ ವಿಂಡೋಸ್ ಡೆಸ್ಕ್‌ಟಾಪ್‌ ಸ್ಕ್ರೀನ್‌ ಮೇಲೆ ಪ್ರದರ್ಶಿಸಲಾದ ಟೆಕ್ಸ್ಟ್‌ ಗಾತ್ರವನ್ನು ಕಸ್ಟಮೈಸ್‌ ಮಾಡಲು ಅನುಮತಿಸುವ ಮೂಲಕ ಯೂಸರ್‌ಗಳಿಗೆ ಹೆಚ್ಚಿನ ಅನುಕೂಲ ಮಾಡಲಿದೆ. ಸೆಟ್ಟಿಂಗ್‌ನ ಪರ್ಸನಲೈಜೇಷನ್‌ ಮೆನು ಅಡಿಯಲ್ಲಿ ಹೊಸ ಆಯ್ಕೆ ಲಭ್ಯವಿದೆ. ಈ ಹೊಸ ಫೀಚರ್ ನೊಂದಿಗೆ , ಟೆಕ್ಸ್ ಗಾತ್ರವನ್ನು ಸರಿ ಹೊಂದಿಸಲು ಕೆಲವು ಮಹತ್ವದ ಶಾರ್ಟ್ ಕಟ್ ಗಳನ್ನು […]

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌ Read More »

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಪ್ರಯಾಣಕ್ಕೆ ಇವರು 1,000 ತೆರಲೇ ಬೇಕು| ಹೊಸ ಆದೇಶ, ವ್ಯಾಪಕ ಟೀಕೆ !

ಸಮಗ್ರ ನ್ಯೂಸ್ : ಮರಣದ ಮಾರ್ಗ ಎಂದೇ ಕರೆಸಿಕೊಂಡಿರುವ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳಿದ್ದು ಇದೀಗ ಹಲವು ಭೀಕರ ಅಪಘಾತಗಳು ನಡೆದಿವೆ. ತಡವಾಗಿಯಾದರೂ ಸರ್ಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತೊಡಗಿದೆ. ಇದರ ಮಧ್ಯೆ, ಈ ರಸ್ತೆಯಲ್ಲಿ ಸಂಚರಿಸುವ ಕೆಲವರಿಗೆ 1,000 ರೂಪಾಯಿಗಳ ಬರೆ ಎಳೆಯಲು ಸರ್ಕಾರ ನಿರ್ಧರಿಸಿದೆ. ಕೆಲವರಿಗೆ 1000 ರೂಪಾಯಿ ಫೈನ್ ವಿಧಿಸಲು ಸರ್ಕಾರವು ನಿರ್ಧರಿಸಿದ್ದು, ಅವರಿಗೆ ವೇಗದ ಮಿತಿಯ ಗಡಿ ಅಳವಡಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಪ್ರಯಾಣಕ್ಕೆ ಇವರು 1,000 ತೆರಲೇ ಬೇಕು| ಹೊಸ ಆದೇಶ, ವ್ಯಾಪಕ ಟೀಕೆ ! Read More »

ರಸ್ತೆ ಅಪಘಾತ| ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಮೃತ್ಯು

ಸಮಗ್ರ ನ್ಯೂಸ್: ಬಂಟ್ವಾಳದ ತುಂಬೆಯಲ್ಲಿ ನಡೆದ ರಸ್ತೆ ಅಪಘಾತಕ್ಕೆ ಮಂಗಳೂರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಜು.6 ಬೆಳಿಗ್ಗೆ ಸಂಭವಿಸಿದೆ. ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿ ಪುತ್ರಿ ಹನಾ (19) ಮೃತಪಟ್ಟವರು. ಇವರು ಅಲೋಶಿಯಸ್ ನಲ್ಲಿ ಬಿಬಿಎಂ ವಿದ್ಯಾರ್ಥಿನಿ. ಪುತ್ತೂರಿನಿಂದ ಮಂಗಳೂರು ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ‌. ಚಾಲಕನ ನಿಯಂತ್ರಣ ತಪ್ಪಿದ ಕಾರು, ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ.

ರಸ್ತೆ ಅಪಘಾತ| ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಮೃತ್ಯು Read More »

ಸಹಾಯಕ‌ ಪ್ರಾದ್ಯಾಪಕರ ನೇಮಕಾತಿಗೆ ಪಿ.ಎಚ್.ಡಿ ಮಾನದಂಡವಲ್ಲ – ಯುಜಿಸಿ

ಸಮಗ್ರ ನ್ಯೂಸ್: ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಹೆಚ್.ಡಿ ಮಾನದಂಡ ಅಲ್ಲ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ ತಿಳಿಸಿದೆ. ಈ ಹುದ್ದೆ ನೇಮಕಾತಿಗೆ ಪಿಹೆಚ್.ಡಿ ಕಡ್ಡಾಯಗೊಳಿಸುವ ತನ್ನ ನಿರ್ಧಾರವನ್ನು ಯುಜಿಸಿ ಹಿಂತೆಗೆದುಕೊಂಡಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇರ ನೇಮಕಾತಿಗೆ ನೆಟ್, ಸೆಟ್, ಸ್ಲೆಟ್ ನಂತಹ ಪರೀಕ್ಷೆಗಳು ಕನಿಷ್ಠ ಮಾನದಂಡವಾಗಿರುತ್ತದೆ ಎಂದು ಯುಜಿಸಿ ಮೂಲಗಳು ತಿಳಿಸಿವೆ.

ಸಹಾಯಕ‌ ಪ್ರಾದ್ಯಾಪಕರ ನೇಮಕಾತಿಗೆ ಪಿ.ಎಚ್.ಡಿ ಮಾನದಂಡವಲ್ಲ – ಯುಜಿಸಿ Read More »

Breaking|ಮಂಗಳೂರು: ಕಾಲೇಜು ಮೇಲ್ಚಾವಣಿ ಕುಸಿತ; ತಪ್ಪಿದ ಭಾರೀ ಅನಾಹುತ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರದ ಮಳೆಯಾಗುತ್ತಿದ್ದು, ತಲಪಾಡಿಯಲ್ಲಿರುವ ಕಾಲೇಜಿನ ಮೇಲ್ಚಾವಣಿ ಕುಸಿದಿರುವ ಘಟನೆ ನಡೆದಿದೆ. ತಲಪಾಡಿಯಲ್ಲಿರುವ ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್ ನಲ್ಲಿರುವ ಆರು ಮಹಡಿಯ ಕಾಲೇಜಿನ ಅಳವಡಿಸಲಾಗಿದ್ದ ಶೀಟ್ ಭಾರೀ ಮಳೆ, ಗಾಳಿಗೆ ಕುಸಿದು ಬಿದ್ದಿದೆ. ಮಳೆಯ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಣೆ ಮಾಡಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಬುಧವಾರ ಮತ್ತು ಗುರುವಾರ ರಜೆ

Breaking|ಮಂಗಳೂರು: ಕಾಲೇಜು ಮೇಲ್ಚಾವಣಿ ಕುಸಿತ; ತಪ್ಪಿದ ಭಾರೀ ಅನಾಹುತ Read More »

ಬೆಳ್ತಂಗಡಿಯ ಯುವಕ ದುಬೈ ನಲ್ಲಿ ಅನುಮಾನಾಸ್ಪದ ಸಾವು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ತುರ್ಕಳಿಕೆ ನಿವಾಸಿ ಮುಂಡೊಟ್ಟು ದಾವೂದ್ ಎಂಬವರ ಪುತ್ರ ಮುಹಮ್ಮದ್ ರಾಝಿಖ್ ಎಂಬವರು ದುಬೈನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇವರು ಇತ್ತೀಚೆಗಷ್ಟೇ ಮದುವೆಯಾಗಿದ್ದು, ನಾಲ್ಕು ತಿಂಗಳ ಮಗು ಕೂಡ ಇದೆ ಎನ್ನಲಾಗಿದೆ. ಮೃತರು ಪತ್ನಿ, ತಂದೆ ತಾಯಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ರಾಝಿಖ್ ರವರ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಬೆಳ್ತಂಗಡಿಯ ಯುವಕ ದುಬೈ ನಲ್ಲಿ ಅನುಮಾನಾಸ್ಪದ ಸಾವು Read More »

ಸುಳ್ಯದ ಐವರ್ನಾಡಿನಲ್ಲಿ ಪ್ರಸನ್ನ ಕ್ಲಿನಿಕ್ ಸ್ಥಳಾಂತರಗೊಂಡು ಶುಭಾರಂಭ

ಸಮಗ್ರ ನ್ಯೂಸ್: ಸುಳ್ಯದ ಐವರ್ನಾಡಿನ ನೆಕ್ರಪ್ಪಾಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಗೌರಿಶಂಕರ ಸಿ.ಕೆಯವರ ಮಾಲಕತ್ವದ ಪ್ರಸನ್ನ ಕ್ಲಿನಿಕ್ ಐವರ್ನಾಡು ಮುಖ್ಯ ರಸ್ತೆ ಸಮೀಪ ನೂತನವಾಗಿ ನಿರ್ಮಾಣವಾದ ನೆಕ್ರಪ್ಪಾಡಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಜು.06 ರಂದು ಶುಭಾರಂಭಗೊಂಡಿತು. ವಿಶ್ರಾಂತ ಪ್ರಾಂಶುಪಾಲರಾದ ಡಾ.ವಿಘ್ನೇಶ್ವರ ವರ್ಮುಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಬೆಳಿಗ್ಗೆ ಪುರೋಹಿತ ಉದನೇಶ್ವರ ಭಟ್ ಮಂಜಳಗಿರಿ ಇವರು ಗಣಹೋಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪ್ರಸನ್ನ ಕುಮಾರಿ, ಶ್ರೇಯಸ್ವಿ ಗೌರಿಶಂಕರ್, ಕಾಂಪ್ಲೆಕ್ಸ್ ಮಾಲಕ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಶ್ರೀಮತಿ ಪೂರ್ಣಶ್ರೀ

ಸುಳ್ಯದ ಐವರ್ನಾಡಿನಲ್ಲಿ ಪ್ರಸನ್ನ ಕ್ಲಿನಿಕ್ ಸ್ಥಳಾಂತರಗೊಂಡು ಶುಭಾರಂಭ Read More »

ಗಗನ ಕುಸುಮವಾದ ಟೊಮ್ಯಾಟೊ| ಕೆಲವು ನಗರಗಳಲ್ಲಿ ಪೆಟ್ರೋಲ್ ಗಿಂತಲೂ ರೇಟ್ ಜಾಸ್ತಿ

ಸಮಗ್ರ ನ್ಯೂಸ್: ದೇಶದಲ್ಲಿ ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇನ್ನು ಹಲವು ನಗರಗಳಲ್ಲಿ ಟೊಮ್ಯಾಟೊ ದರ ಪೆಟ್ರೋಲ್ ಬೆಲೆಯನ್ನು ಹಿಮ್ಮೆಟ್ಟಿಸಿದೆ. ಪೆಟ್ರೋಲ್ 102-108 ರೂಪಾಯಿಗೆ ಮಾರಾಟವಾಗುತ್ತಿದೆ. ಇತ್ತ ಮಾರುಕಟ್ಟೆಯಲ್ಲಿ ಈಗ ಪೆಟ್ರೋಲ್‌ಗಿಂತ ಟೊಮ್ಯಾಟೊ 140-150 ರೂ.ಗೆ ಮಾರಾಟವಾಗುತ್ತಿದೆ ಎಂದು ಅನೇಕ ಗ್ರಾಹಕರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 100-125 ರೂ.ಗೆ ಮಾರಾಟವಾಗುತ್ತಿದೆ. ಇತ್ತ ಪೆಟ್ರೋಲ್​​ ಬೆಲೆ 101-108 ರೂ. ಇದೆ. ದಿನನಿತ್ಯ ವಸ್ತುಗಳಲ್ಲಿ ಆಗಿರುವ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗೆಟ್ಟಿದ್ದಾರೆ. ಬಿಹಾರದಲ್ಲಿ

ಗಗನ ಕುಸುಮವಾದ ಟೊಮ್ಯಾಟೊ| ಕೆಲವು ನಗರಗಳಲ್ಲಿ ಪೆಟ್ರೋಲ್ ಗಿಂತಲೂ ರೇಟ್ ಜಾಸ್ತಿ Read More »

ದುಡಿಯಲು ಸಮರ್ಥಳಾದ ಪತ್ನಿ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್ ತೀರ್ಪು

ಸಮಗ್ರ ನ್ಯೂಸ್: ದುಡಿಯಲು ಸಮರ್ಥ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲವೆಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಜತೆಗೆ, ಪ್ರಕರಣವೊಂದರಲ್ಲಿ ಪತ್ನಿಗೆ ಪತಿ ನೀಡಬೇಕಿದ್ದ ಮಾಸಿಕ ಜೀವನಾಂಶದ ಮೊತ್ತವನ್ನು 10 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗಳಿಗೆ ಕಡಿಮೆ ಮಾಡಿದ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ವಿವಾಹಕ್ಕೆ ಮುನ್ನ ಉದ್ಯೋಗದಲ್ಲಿದ್ದ ಪತ್ನಿ ಈಗ ಮತ್ತೆ ಕೆಲಸಕ್ಕೆ ಸೇರದಿರಲು ಸಮರ್ಪಕ ಕಾರಣಗಳಿಲ್ಲ. ಆಲಸ್ಯದಿಂದ ಮನೆಯಲ್ಲಿಯೇ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶ ಕೇಳುವುದು ಸಮಂಜಸವಲ್ಲ. ತನ್ನ ಜೀವನ ನಿರ್ವಹಣೆಗೆ ಪತ್ನಿ ಪ್ರಯತ್ನಿಸಬೇಕು.

ದುಡಿಯಲು ಸಮರ್ಥಳಾದ ಪತ್ನಿ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್ ತೀರ್ಪು Read More »

ಸಕಾಲಿಕ ಚಿಂತನೆ| ವಿಧಾನ ಮಂಡಲ ಅನುಭಾವ ತುಂಬಿದ ಅನುಭವ ಮಂಟಪವಾಗಬೇಕಲ್ಲದೆ ಹುಚ್ಚರ ಸಂತೆಯಾಗಬಾರದು..!

ಸಮಗ್ರ ವಿಶೇಷ: ವಿಧಾನ ಮಂಡಲದ ಉಭಯ ಸದನಗಳ ಕಾರ್ಯಕಲಾಪಗಳನ್ನು ನೇರವಾಗಿ ವೀಕ್ಷಿಸುವ ಯುವ ಜನಾಂಗದ ಮನಸ್ಸುಗಳು ಹೇಗೆ ಯೋಚಿಸಬಹುದು? ಕನಿಷ್ಠ ಶಾಲೆಗಳಲ್ಲಿ ಇರುವಷ್ಟು ಶಿಸ್ತು ಅಥವಾ ಬಸ್ಸು ರೈಲು ನಿಲ್ದಾಣಗಳಲ್ಲಿ ಇರಬಹುದಾದಷ್ಟು ಶಿಸ್ತು, ಮದುವೆಯ ಆರತಕ್ಷತೆಯಲ್ಲಿ ಇರುವ ಶಿಸ್ತು, ಮತದಾನ ಮಾಡುವಾಗ ಇರುವಷ್ಟು ಶಿಸ್ತು, ಉಪನ್ಯಾಸ – ವಿಚಾರ ಸಂಕಿರಣಗಳಲ್ಲಿ ಇರುವ ಶಿಸ್ತು ಅಥವಾ ಸಿನಿಮಾ ಮಂದಿರಗಳಲ್ಲಿ ಇರಬಹುದಾದಷ್ಟು ಶಿಸ್ತು ಕೂಡ ಇವರಲ್ಲಿ ಇಲ್ಲವಾಯಿತೇ? ಎಂದು ಒಂದು ಕ್ಷಣ ಅನಿಸಬಹುದೇ. ಎಷ್ಟೊಂದು ವ್ಯವಸ್ಥಿತವಾಗಿ, ಎಷ್ಟೊಂದು ಬುದ್ದಿವಂತ ಅಧಿಕಾರಿಗಳ

ಸಕಾಲಿಕ ಚಿಂತನೆ| ವಿಧಾನ ಮಂಡಲ ಅನುಭಾವ ತುಂಬಿದ ಅನುಭವ ಮಂಟಪವಾಗಬೇಕಲ್ಲದೆ ಹುಚ್ಚರ ಸಂತೆಯಾಗಬಾರದು..! Read More »