July 2023

ಸ್ಪೀಕರ್ ಟು ಕನ್ನಡ ಆಪ್ ಹಾಕಿಕೊಡಿ: ಯತ್ನಾಳ್ನನ್ನ ಕನ್ನಡ ಹೆಚ್ಚು ಕಡಿಮೆ ಇರ್ಬೋದು, ಆದ್ರೆ ಪ್ರೀತಿಯ ಭಾಷೆ: ಖಾದರ್

ಸಮಗ್ರ ನ್ಯೂಸ್: ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು, ಆದರೆ ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆ. ಅದಕ್ಕೆ ನಾನು ಯತ್ನಾಳ್‌ ಅವರಿಗೆ ಕೃತಜ್ಞತೆ ಹೇಳುತ್ತಿದ್ದೇನೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ. ಸ್ಪೀಕರ್ ಟು ಕನ್ನಡ ಆಪ್ ಹಾಕಿಕೊಡಿ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದ ವಿಧಾನಸಭೆಯಲ್ಲಿ ಖಾದರ್ ಅವರ ಕನ್ನಡದ ಬಗ್ಗೆ ಸ್ವಾರಸ್ಯಕರ ಮಾತು ನಡೆಯಿತು. ಸ್ಪೀಕರ್ ಕನ್ನಡದ ಬಗ್ಗೆ ಚರ್ಚೆಯ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಖಾದರ್, […]

ಸ್ಪೀಕರ್ ಟು ಕನ್ನಡ ಆಪ್ ಹಾಕಿಕೊಡಿ: ಯತ್ನಾಳ್ನನ್ನ ಕನ್ನಡ ಹೆಚ್ಚು ಕಡಿಮೆ ಇರ್ಬೋದು, ಆದ್ರೆ ಪ್ರೀತಿಯ ಭಾಷೆ: ಖಾದರ್ Read More »

ವಿಧಾನಸಭೆಯಲ್ಲಿ ಪ್ರತಿಧ್ನಿಸಿದ ಮಡಿಕೇರಿಯ ತಡೆಗೋಡೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಜಿಲ್ಲಾಡಳಿತ ಭವನದ ತಡೆಗೋಡೆಯ ಕಾಮಗಾರಿಯ ಬಗ್ಗೆ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದೆ. ಸದನದಲ್ಲಿ ತಡೆಗೋಡೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಮಂತರ್ ಗೌಡ ಕಾಮಗಾರಿಕ್ಕೆ ತಂತ್ರಜ್ಞಾನ ಸರಿಯಾಗಿ ಬಳಸಿಲ್ಲ ಅಪಾಯಕಾರಿ ಸ್ಥಿತಿಯಲ್ಲಿದ ತಡೆಗೋಡೆಯನ್ನು ತೆರೆವು ಮಾಡಿ ಮತ್ತೆ ಜೋಡಣೆ ಮಾಡಲಾಗುತ್ತಿದೆ ಗುಡ್ಡ ಕುಸಿಯುವ ಜೊತೆಗೆ ಜಿಲ್ಲಾಡಳಿತ ಕಟ್ಟಡವು ಕೂಡ ಕುಸಿವ ಆತಂಕವಿದೆ ಎಂದು ಗಮನ ಸೆಳೆದರು ಹಾಗೂ ಈ ಕಾಮಗಾರಿ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಸಿದ ಲೋಕೋಪಯೋಗಿ

ವಿಧಾನಸಭೆಯಲ್ಲಿ ಪ್ರತಿಧ್ನಿಸಿದ ಮಡಿಕೇರಿಯ ತಡೆಗೋಡೆ Read More »

ಕರಾವಳಿಯಲ್ಲಿ ಮಳೆ ಹಾನಿ ಪರಿಶೀಲಿಸಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಿ|ಸಚಿವರಿಗೆ ಸಿಎಂ ಸೂಚನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಾಂಕಾಳ ವೈದ್ಯ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಮಳೆ ಹಾನಿ ಕುರಿತು ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಪರಿಹಾರ ಕಾಮಗಾರಿಗಳಿಗೆ ಅಧಿಕಾರಿಗಳನ್ನು ತುರ್ತಾಗಿ ಸಜ್ಜುಗೊಳಿಸುವಂತೆ ಆದೇಶಿಸಿದರು.

ಕರಾವಳಿಯಲ್ಲಿ ಮಳೆ ಹಾನಿ ಪರಿಶೀಲಿಸಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಿ|ಸಚಿವರಿಗೆ ಸಿಎಂ ಸೂಚನೆ Read More »

ಕೊಡಗು: ಧಾರಾಕಾರ ಸುರಿಯುತ್ತಿರುವ ಮಳೆ| ನಾಳೆ ಶಾಲೆ -ಕಾಲೇಜ್ ಗಳಿಗೆ ರಜೆ

ಸಮಗ್ರ ನ್ಯೂಸ್: ಧಾರಾಕಾರ ಮಳೆ ಸುರಿಯುತ್ತಿರುವ ಕೊಡಗು ಜಿಲ್ಲೆಯಲ್ಲಿ ಜು.7 ರಂದು ಶಾಲೆ ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಂಗನವಾಡಿ, ಎಲ್ಲಾ ಶಾಲೆ- ಕಾಲೇಜ್ ಗಳಿಗೆ ಒಂದು ದಿನದ ಮಳೆ ರಜೆಯನ್ನು ಕೊಡಗು ಜಿಲ್ಲಾ ಜಿಲ್ಲಾಧಿಕಾರಿಗಳಾದ ವೆಂಕಟ ರಾಜನ್ ರವರು ಆದೇಶ ಹೊರಡಿಸಿದ್ದಾರೆ.

ಕೊಡಗು: ಧಾರಾಕಾರ ಸುರಿಯುತ್ತಿರುವ ಮಳೆ| ನಾಳೆ ಶಾಲೆ -ಕಾಲೇಜ್ ಗಳಿಗೆ ರಜೆ Read More »

ಭಾರೀ ಗಾಳಿ, ಮಳೆ| ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಜುಲೈ 10 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಭಾಗದಲ್ಲಿ ತೀವ್ರತೆಯ ಮಳೆಯಾಗುವ ಸಾಧ್ಯತೆಯಿರುವುದರಿಂದ ಜು.6ರ ಇಂದು ಮಧ್ಯಾಹ್ನದಿಂದ ಜು.7 ರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು ಒಳನಾಡಿನ ಜಿಲ್ಲೆಗಳಲ್ಲೂ ಮುಂದಿನ ಎರಡು ದಿನ

ಭಾರೀ ಗಾಳಿ, ಮಳೆ| ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ Read More »

ಸುಳ್ಯ -ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಮಣ್ಣು ಕುಸಿತ

ಸಮಗ್ರ ನ್ಯೂಸ್: ಕಳೆದ ಮೂರು ದಿನಗಳಿಂದ‌ ಎಡೆ ಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಸುಳ್ಯ -ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ಸಂಭವಿಸಿದೆ. ಗಡಿ ಪ್ರದೇಶ ಕೇರಳದ ಭಾಗ ಕಲ್ಲಪಳ್ಳಿಯಲ್ಲಿ ಜೂ.6ರಂದು ಬೆಳಿಗ್ಗೆ ಮಣ್ಣು ಕುಸಿತ ಉಂಟಾಗಿದ್ದು, ಇದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಸ್ಥಳೀಯರು ಸೇರಿ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.

ಸುಳ್ಯ -ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಮಣ್ಣು ಕುಸಿತ Read More »

ಉಡುಪಿ : ದೇವಸ್ಥಾನದ ಪೂಜೆಗೆ ಹೊರಟ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು..!

ಸಮಗ್ರ ನ್ಯೂಸ್: ಕುಂದಾಪುರದಲ್ಲಿರುವ ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಟ ವ್ಯಕ್ತಿಯೋರ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.5ರಂದು ನಡೆದಿದೆ. ಶೇಷಾದ್ರಿ ಐತಾಳ್ ಮೃತ ವ್ಯಕ್ತಿ, ಇವರು ಕಮಲ ಶಿಲೆ ದೇವಳಕ್ಕೆ ಪೂಜೆಗೆಂದು ಆಗಮಿಸಿದ್ದು ಈ ವೇಳೆ ಕಮಲಶಿಲೆ ದೇವಾಲಯದ ಪಕ್ಕದಲ್ಲಿ ಹರಿಯುವ ಕುಬ್ಜಾ ನದಿಗೆ ಇಳಿದ ಸಂದರ್ಭ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ನದಿಗೆ ಬಿದ್ದ ಜಾಗದ ಸುಮಾರು ನೂರು ಮೀಟರ್ ದೂರಲ್ಲಿ ಶವ ಪತ್ತೆಯಾಗಿದ್ದು, ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡದಿಂದ ಶವ ಪತ್ತೆ ಕಾರ್ಯ

ಉಡುಪಿ : ದೇವಸ್ಥಾನದ ಪೂಜೆಗೆ ಹೊರಟ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು..! Read More »

ಉಳ್ಳಾಲ: ಭಾರೀ ಗಾಳಿ- ಮಳೆಗೆ ಉರುಳಿ ಬಿದ್ದ ಮೇಲ್ಛಾವಣಿ ಶೀಟ್ | ರಜೆ ಕಾರಣ ತಪ್ಪಿ ಅನಾಹುತ

ಸಮಗ್ರ ನ್ಯೂಸ್ : ಭಾರೀ ಗಾಳಿ ಮಳೆಗೆ ತಲಪಾಡಿಯಲ್ಲಿರುವ ಶಾರದಾ ವಿದ್ಯಾಲಯ ಕಟ್ಟಡದ ಮೇಲೆ ಅಳವಡಿಸಿದ್ದ ಶೀಟ್‌ ಚಾವಣಿ ಕೆಳಗೆ ಬಿದ್ದ ಘಟನೆ ನಡೆದಿದೆ. ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಆರು ಮಹಡಿಯ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಇದನ್ನು ಅಳವಡಿಸಲಾಗಿತ್ತು. ಸತತ ಗಾಳಿ ಮಳೆ ಕಾರಣದಿಂದಾಗಿ ಜು.6ರ ಬೆಳಿಗ್ಗೆ 9 ಗಂಟೆ ಸಂದರ್ಭ ಶೀಟ್ ಕೆಳಗೆ ಬಿದ್ದಿದೆ. ಮೇಲ್ಚಾವಣೆಗೆ ಹಾಕಲಾಗಿದ್ದ ರಾಡ್ ಗಳೂ ಕೂಡ ಕೆಳಗೆ ಬಿದ್ದಿದ್ದು, ಇದರಿಂದಾಗಿ ಹಲವು ವಾಹನಗಳು ಜಖಂಗೊಂಡಿವೆ. ಭಾರಿ ಮಳೆ

ಉಳ್ಳಾಲ: ಭಾರೀ ಗಾಳಿ- ಮಳೆಗೆ ಉರುಳಿ ಬಿದ್ದ ಮೇಲ್ಛಾವಣಿ ಶೀಟ್ | ರಜೆ ಕಾರಣ ತಪ್ಪಿ ಅನಾಹುತ Read More »

ಉಡುಪಿ: ತಗ್ಗು ಪ್ರದೇಶಗಳು ಜಲಾವೃತ -ಜನರ ಸ್ಥಳಾಂತರ

ಸಮಗ್ರ ನ್ಯೂಸ್: ಮಳೆಯ ತೀವೃತೆಗೆ ಉಡುಪಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನೆರೆಯಲ್ಲಿ ಸಿಲುಕಿದ ಜನರ ರಕ್ಷಣೆ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯ ಕೊಡಂಕೂರು ಭಾಗದಲ್ಲಿ ನೆರೆ ನೀರಿನಿಂದ ಹಲವು ಕುಟುಂಬಗಳು ಅಪಾಯದಲ್ಲಿ ಸಿಲುಕಿದ್ದು ಅಗ್ನಿಶಾಮಕ ದಳಮಕ್ಕಳು ಮಹಿಳೆಯರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆಕಲ್ಸಂಕ, ಬೈಲಕೆರೆ,‌ ಬನ್ನಂಜೆ ಗರಡಿ ರಸ್ತೆ, ಕುಂಜಿಬೆಟ್ಟು ಭಾಗದಲ್ಲಿ ನೆರೆ ಸೃಷ್ಟಿಯಾಗಿ ಜನ ಜೀವನ‌ ಅಸ್ತವ್ಯಸ್ತ‌ಗೊಂಡಿದೆ. ಬನ್ನಂಜೆ-ಗರಡಿ ರಸ್ತೆ ಪರಿಸರದಲ್ಲಿ ಐವತ್ತಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ನಿರಂತರ ಮಳೆಯಿಂದ ಇಂದ್ರಾಣಿ ನದಿ

ಉಡುಪಿ: ತಗ್ಗು ಪ್ರದೇಶಗಳು ಜಲಾವೃತ -ಜನರ ಸ್ಥಳಾಂತರ Read More »

ಪುತ್ತೂರು: ಭಾರೀ ಮಳೆಗೆ ಮುಳುಗಿದ ಚೆಲ್ಯಡ್ಕ ಸೇತುವೆ

ಸಮಗ್ರ ನ್ಯೂಸ್: ಭಾರೀ ಮಳೆಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ದೇ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆ ಜು.6ರಂದು ಮುಂಜಾನೆ ಮುಳುಗಡೆಯಾಗಿದೆ. ಈ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸೆಂಟ್ಯಾರು ಪಾಣಾಜೆ ಲೋಕೋಪಯೋಗಿ ರಸ್ತೆಯ ಮೂಲಕ ಸಂಚರಿಸುತ್ತಿದೆ. ಇನ್ನು ಮುಳುಗು ಸೇತುವೆ ಎಂದು ಪ್ರಖ್ಯಾತಿ ಪಡೆದಿರುವ ಚೆಲ್ಯಡ್ಕ ಸೇತುವೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪ್ರಥಮ ಬಾರಿಗೆ ಮುಳುಗಡೆಯಾಗಿದೆ.

ಪುತ್ತೂರು: ಭಾರೀ ಮಳೆಗೆ ಮುಳುಗಿದ ಚೆಲ್ಯಡ್ಕ ಸೇತುವೆ Read More »