July 2023

ಉಳ್ಳಾಲ: ದನಗಳ ಮೇಲೆ ಹರಿದ ಕಾರು ಪಲ್ಟಿ- ನಾಲ್ವರಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್: ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ಕಾರೊಂದು ಹರಿದು ಪಲ್ಟಿಯಾದ ಘಟನೆ ತೊಕ್ಕೊಟ್ಟು ಸಮೀಪದ ಕುತ್ತಾರು ಪಂಡಿತ್ ಹೌಸ್ ಎಂಬಲ್ಲಿ ಇಂದು ಮುಂಜಾನೆ ನಡೆದಿದ್ದು, ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಬೆಳಗ್ಗಿನ ಜಾವ 3:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ವೇಗವಾಗಿದ್ದ ಕಾರು ಹರಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಘಟನೆಯಿಂದ ಮೂರು ದನಗಳು ಸಾವಿಗೀಡಾಗಿವೆ ಎಂದು […]

ಉಳ್ಳಾಲ: ದನಗಳ ಮೇಲೆ ಹರಿದ ಕಾರು ಪಲ್ಟಿ- ನಾಲ್ವರಿಗೆ ಗಂಭೀರ ಗಾಯ Read More »

ಮಂಗಳೂರು: ಕೆಲಸಕ್ಕಿದ್ದ ಕಾರ್ಮಿಕನ ಕೊಲೆ|ಮಾಲೀಕ ಬಂಧನ

ಮಂಗಳೂರು : ತನ್ನ ಬಳಿ ಕೆಲಸಕ್ಕಿದ್ದ ಕಾರ್ಮಿಕನನ್ನು ಮಾಲೀಕನೇ ಬೆಂಕಿಹಚ್ಚಿ ಸುಟ್ಟು ಕೊಲೆ ಮಾಡಿರುವ ಘಟನೆ ಮಂಗಳೂರು ನಗರದ ಮುಳಿಹಿತ್ಲು ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ. ಕೊಲೆಯಾದವನನ್ನು ಗಜ್ಞಾನ್ ಜಗು ಎಂದು ಗುರುತಿಸಲಾಗಿದ್ದು, ಅಂಗಡಿ ಮಾಲೀಕ ಪಾಂಡೇಶ್ವರ ನಿವಾಸಿ ತೌಸಿಫ್ ಹಸನ್ ( 32 ) ಕೊಲೆ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮುಳಿಹಿತ್ಲು ಮಾಷುಪಾ ಜನರಲ್ ಸ್ಕೋರ್ ಎಂಬ ಅಂಗಡಿಯಲ್ಲಿ ಕೆಲಸಕ್ಕಿದ್ದ ಗಜ್ಞಾನ್ ಜಗು ಎಂಬ ಕಾರ್ಮಿಕನಿಗೆ ಮಾಲೀಕ ಕ್ಷುಲ್ಲಕ ಕಾರಣಕ್ಕೆ ಬೆಂಕಿ ಹಚ್ಚಿದ್ದಾನೆ. ನಂತರ

ಮಂಗಳೂರು: ಕೆಲಸಕ್ಕಿದ್ದ ಕಾರ್ಮಿಕನ ಕೊಲೆ|ಮಾಲೀಕ ಬಂಧನ Read More »

ನೆಲ್ಯಾಡಿ: ಕಂದಕಕ್ಕೆ ಬಿದ್ದ ಲಾರಿ

ಸಮಗ್ರ ನ್ಯೂಸ್: ಹಣ್ಣಿನ ಲಾರಿಯೊಂದು ರಸ್ತೆ ಯ ಪಕ್ಕದ ಕಂದಕಕ್ಕೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು ಮಂಗಳೂರಿನ ಮಧ್ಯೆ ನೆಲ್ಯಾಡಿ ಸಮೀಪದ ಎಂಜಿರ ಎಂಬಲ್ಲಿ ‌ ಜು.9 ರಂದು ಸಂಭವಿಸಿದೆ. ಹಾಸನದಿಂದ ಮಂಗಳೂರಿಗೆ ಹಣ್ಣುಗಳನ್ನು ಹೊತ್ತೊಯ್ದ ಲಾರಿ ಎಂಜಿರ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇರುವ ಕಂದಕಕ್ಕೆ ಬಿದ್ದಿದೆ. ಲಾರಿಯಲ್ಲಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಇದ್ದು ಅದೃಷ್ಟವಶಾತ್ ಪಾರಾಗಿದ್ದಾರೆ.

ನೆಲ್ಯಾಡಿ: ಕಂದಕಕ್ಕೆ ಬಿದ್ದ ಲಾರಿ Read More »

ಇಂದಿರಾ ಕ್ಯಾಂಟೀನ್ ಗೆ ದಿಢೀರ್ ಭೇಟಿ ನೀಡಿ ಉಪಹಾರ ಸವಿದ ಡಿಕೆಶಿ

ಸಮಗ್ರ ನ್ಯೂಸ್: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಾರ್ವಜನಿಕರ ಜೊತೆಗೆ ಉಪಹಾರ ಸೇವಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ತೆರಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರ ಜೊತೆಗೆ ಕೂತು ಉಪಹಾರ ಸೇವಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಮೊದಲು ಬೆಳಗ್ಗೆ ಬೆಂಗಳೂರಿನ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ ಗೆ ಹೋಗಿದ್ದರು. ಅಲ್ಲಿ ತಿಂಡಿ ಖಾಲಿಯಾದ ಹಿನ್ನೆಲೆಯಲ್ಲಿ ದಾಸರಹಳ್ಳಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ್ದು, ಅಲ್ಲಿ

ಇಂದಿರಾ ಕ್ಯಾಂಟೀನ್ ಗೆ ದಿಢೀರ್ ಭೇಟಿ ನೀಡಿ ಉಪಹಾರ ಸವಿದ ಡಿಕೆಶಿ Read More »

ಗ್ರಾ.ಪಂ ಸದಸ್ಯರು ಮೂರು ತಿಂಗಳೊಳಗೆ ಆಸ್ತಿ ವಿವರ ಸಲ್ಲಿಸಬೇಕು – ಹೈಕೋರ್ಟ್

ಸಮಗ್ರ ವಾರ್ತೆ: ಗ್ರಾಮ ಪಂಚಾಯಿತಿ ಸದಸ್ಯರ ಆಸ್ತಿ ವಿವರ ಸಲ್ಲಿಕೆ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮೂರು ತಿಂಗಳ ಒಳಗಾಗಿ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವೆಂದು ತಿಳಿಸಲಾಗಿದ್ದು, ಒಂದೊಮ್ಮೆ ಇದಕ್ಕೆ ವಿಫಲವಾದರೆ ಶೋಕಾಸ್ ನೋಟಿಸ್ ನೀಡದೆಯೂ ಸದಸ್ಯತ್ವದಿಂದ ಅನರ್ಹಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ. ಪ್ರಕರಣದ ವಿವರ: ನಿಗದಿತ ಅವಧಿ ಒಳಗೆ ಆಸ್ತಿ ವಿವರ ಸಲ್ಲಿಸದ ಕಾರಣಕ್ಕೆ ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಮೊಘಾ ಗ್ರಾಮ ಪಂಚಾಯಿತಿ ಸದಸ್ಯೆ ಲಲಿತಾಬಾಯಿ ಪಾಟೀಲ್ ಅವರನ್ನು

ಗ್ರಾ.ಪಂ ಸದಸ್ಯರು ಮೂರು ತಿಂಗಳೊಳಗೆ ಆಸ್ತಿ ವಿವರ ಸಲ್ಲಿಸಬೇಕು – ಹೈಕೋರ್ಟ್ Read More »

‘ವಂದೇ ಭಾರತ್’ ಗೆ ಹೊಸ‌ಬಣ್ಣ| ಕೇಸರಿಯಲ್ಲಿ ಕಂಗೊಳಿಸಲಿವೆ ಹೊಸ‌ ರೈಲುಗಳು

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಆರಂಭಿಸಿರುವ ಮಹತ್ವದ ವಂದೇ ಭಾರತ್ ರೈಲುಗಳು ಇನ್ನು ಮುಂದೆ ಕೇಸರಿ ಬಣ್ಣದಲ್ಲಿ ಬರಲಿವೆ. ಆ ಕುರಿತು ಸಚಿತ್ರ ಮಾಹಿತಿ ಅಧಿಕೃತ ಮೂಲಗಳಿಂದಲೇ ಹೊರಬಿದ್ದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಈ ಕುರಿತು ಮಾಹಿತಿ ನೀಡಿದ್ದಾರೆ. ಇಂದು ಟ್ವಿಟರ್​​ನಲ್ಲಿ ಹೊಸ ವಂದೇ ಭಾರತ್ ರೈಲುಗಳ ಫೋಟೋಗಳನ್ನು ಅವರು ಹಂಚಿಕೊಂಡಿದ್ದರಿಂದ, ಹೊಸ ರೈಲುಗಳು ಕೇಸರಿ ಬಣ್ಣದಲ್ಲಿ ಬರಲಿರುವುದು ಖಚಿತಗೊಂಡಿದೆ. ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್​)ಗೆ ಭೇಟಿ ನೀಡಿ ಅಲ್ಲಿ ತಯಾರಾಗಿರುವ ಹೊಸ

‘ವಂದೇ ಭಾರತ್’ ಗೆ ಹೊಸ‌ಬಣ್ಣ| ಕೇಸರಿಯಲ್ಲಿ ಕಂಗೊಳಿಸಲಿವೆ ಹೊಸ‌ ರೈಲುಗಳು Read More »

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಈ ವಾರದ ಗೋಚಾರಫಲ

ಸಮಗ್ರ ನ್ಯೂಸ್: 2023ರ ಜುಲೈ 9 ರಿಂದ ಜುಲೈ 15 ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ. ಜುಲೈ 9 ರಿಂದ ಜುಲೈ 15ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ… ಮೇಷ:ಕೇವಲ ಆತ್ಮವಿಶ್ವಾಸ ಮತ್ತು ದೃಢವಾದ ನಿಲುವಿನಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸಬಹುದು. ಹೆಚ್ಚಿನ ಪ್ರಯತ್ನದಿಂದ ಮಾತ್ರ ಜಮೀನು ಅಥವಾ ಮನೆಯನ್ನು ಕೊಳ್ಳಬಹುದು. ಉದ್ಯೋಗವನ್ನು ಬದಲಿಸುವ ಸೂಚನೆಗಳಿವೆ. ಕಾಂಟ್ರಾಕ್ಟ್ ವ್ಯವಹಾರಗಳು

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಈ ವಾರದ ಗೋಚಾರಫಲ Read More »

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಅರ್ಜಿ ಸ್ಥಿತಿ ಹೀಗೆ ನೋಡಿ…

ಸಮಗ್ರ ವಾರ್ತೆ: ರಾಜ್ಯ ಸರ್ಕಾರದ ಗೃಹಜ್ಯೋತಿ ಈಗಾಗಲೇ ಸುಮಾರು 1.3 ಕೋಟಿ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಯಾದ ನಂತರ ಅದಕ್ಕೆ ಸರ್ಕಾರ ಒಪ್ಪಿಗೆ ಕೊಟ್ಟಿದೆಯೇ ಇಲ್ಲವೇ ಎಂಬುದರ ಬಗ್ಗೆ (ಅರ್ಜಿಯ ಸ್ಥಿತಿ) ತಿಳಿದುಕೊಳ್ಳಲು ಸರ್ಕಾರದಿಂದ ಪ್ರತ್ಯೇಕ ವೆಬ್‌ಸೈಟ್‌ ಲಿಂಕ್‌ ಬಿಡುಗಡೆ ಮಾಡಿದೆ. ಅರ್ಜಿದಾರರು ತಮ್ಮ ಮೊಬೈಲ್‌ನಲ್ಲಿಯೇ ಈ ಲಿಂಕ್‌ ಕ್ಲಿಕ್‌ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು. ರಾಜ್ಯದಲ್ಲಿ ಕಾಂಗ್ರೆಸ್‌ನ 2ನೇ ಗ್ಯಾರಂಟಿಯಾಗಿ ಜಾರಿ ಮಾಡಲಾದ ಗೃಹಜ್ಯೋತಿ ಯೋಜನೆಗೆ (ರಾಜ್ಯದ ಎಲ್ಲ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಅರ್ಜಿ ಸ್ಥಿತಿ ಹೀಗೆ ನೋಡಿ… Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ಮೇಜರ್ ಸರ್ಜರಿ| ನೂತನ ಪದಾಧಿಕಾರಿಗಳನ್ನು ಘೋಷಿಸಿದ ಅಧ್ಯಕ್ಷ ಪಿ.ಸಿ ಜಯರಾಮ್

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ನಡೆದ ಗೊಂದಲಗಳ ಗೂಡಾಗಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ವಿಸರ್ಜಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಇದೀಗ ಬ್ಲಾಕ್ ಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಪಟ್ಟಿ ಘೋಷಿಸಿದ್ದಾರೆ. ಈ ಮೂಲಕ ಪಕ್ಷದ ಬ್ಲಾಕ್ ಸಮಿತಿಗೆ ಮೇಜರ್ ಸರ್ಜರಿ‌ ಮಾಡಿದ್ದಾರೆ. ಈ ಹಿಂದೆ 200 ಕ್ಕೂ ಅಧಿಕ ಮಂದಿಯ ದೊಡ್ಡ ಪಟ್ಟಿಯನ್ನೇ ಪಿ.ಸಿ.ಜಯರಾಮರು ಘೋಷಿಸಿದ್ದರು. ಆದರೆ ಈಗ ಪದಾಧಿಕಾರಿಗಳ ಸಂಖ್ಯೆಯನ್ನು ಕಡಿತಗೊಳಿಸಿ, 72 ಮಂದಿಗೆ ಸೀಮಿತಗೊಳಿಸಲಾಗಿದೆ. ನೂತನ ಪಟ್ಟಿ ಇಂತಿದೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ಮೇಜರ್ ಸರ್ಜರಿ| ನೂತನ ಪದಾಧಿಕಾರಿಗಳನ್ನು ಘೋಷಿಸಿದ ಅಧ್ಯಕ್ಷ ಪಿ.ಸಿ ಜಯರಾಮ್ Read More »

ಇನ್ಸ್ಟಾಗ್ರಾಮ್ ಚೆಲುವೆಗೆ ಮನಸೋತ ಯುವಕರು| ಜಾಲಿರೈಡ್, ಡಿನ್ನರ್ ನೆಪದಲ್ಲಿ ಸರಿಯಾಗಿ ಬೋಳಿಸಿದ ಆ ಮದನಾರಿ!!

ಸಮಗ್ರ ನ್ಯೂಸ್: ಇನ್‌ಸ್ಟಾಗ್ರಾಂನಲ್ಲಿ ಚೆಲುವೆಯೊಬ್ಬಳು ಬೀಸಿದ ಮಾದಕ ಬಲೆಗೆ ಸಿಲುಕಿದ ಇಬ್ಬರು ಯುವಕರನ್ನು ಜಾಲಿರೈಡ್, ಡಿನ್ನರ್ ಪಾರ್ಟಿ ನೆಪದಲ್ಲಿ ಕರೆಸಿಕೊಂಡು ಸುಲಿಗೆ ಮಾಡಿಸಿರುವ ಎರಡು ಪ್ರತ್ಯೆಕ ಘಟನೆಗಳು ಬೆಂಗಳೂರು ನಗರದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. ಹನಿಟ್ರ‍್ಯಾಪ್ ಮಾದರಿಯ ಸುಲಿಗೆಕೋರ ತಂಡದ ಪ್ರಮುಖ ಆರೋಪಿ ಸೈಯದ್ ಶಾಬಾಜ್ ಅಲಿಯಾಸ್ ಸ್ನೆಕ್ ಶಾಬಾಜ್ ಎಂಬುವವನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಗ್ಯಾಂಗ್‌ನ ಪ್ರಮುಖ ಸೂತ್ರಧಾರಿ ಯುವತಿ ಸೇರಿ ಇನ್ನಿತರರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಎಚ್‌ಬಿಆರ್ ಲೇಔಟ್‌ನ

ಇನ್ಸ್ಟಾಗ್ರಾಮ್ ಚೆಲುವೆಗೆ ಮನಸೋತ ಯುವಕರು| ಜಾಲಿರೈಡ್, ಡಿನ್ನರ್ ನೆಪದಲ್ಲಿ ಸರಿಯಾಗಿ ಬೋಳಿಸಿದ ಆ ಮದನಾರಿ!! Read More »