July 2023

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣಾ, ಮೇಲುಸ್ತುವಾರಿ ಸಮಿತಿ ಸಭೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು. ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಗೆ ಪ್ರವಾಸಿಗರು ದುಬಾರೆ, ಬರಪೊಳೆ, ಕುಮಾರಳ್ಳಿ, ಮಾಂದಲ್ಪಟ್ಟಿ, ಅಬ್ಬಿ ಜಲಪಾತ, ರಾಜಾಸೀಟು ಹೀಗೆ ವಿವಿಧ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಆಗಮಿಸಲಿದ್ದಾರೆ. ಪ್ರವಾಸಿಗರಿಗೆ ಯಾವುದೇ ರೀತಿಯ ಕಹಿ ಘಟನೆ […]

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣಾ, ಮೇಲುಸ್ತುವಾರಿ ಸಮಿತಿ ಸಭೆ Read More »

ಸಂಪಾಜೆ: ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರನ್ನು ಬೇಟೆಯಾಡಿದ ಅರಣ್ಯ ಅಧಿಕಾರಿಗಳು

ಸಮಗ್ರ ನ್ಯೂಸ್: ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರ ಮನೆಗೆ ದಾಳಿ ನಡೆಸಿ ಕಾಡು ಪ್ರಾಣಿ ಮಾಂಸ ಹಾಗೂ ಕೋವಿಯನ್ನು ವಶಪಡಿಸಿಕೊಂಡ ಘಟನೆ ಸಂಪಾಜೆ ವಲಯದ ದಬ್ಬಾಡ್ಕ ಉಪ ವಲಯದ ಪಟ್ಟಿಘಾಟ್ ಸಮೀಪದ ನಡೆದಿದೆ. ಮದನ್ ಕುಮಾರ್ ಹೊಸೂರು, ಪಾನೇಡ್ಕ ಗಣಪತಿ, ಹಾಗೂ ಪ್ರಸನ್ನ ಪಾನೇಡ್ಕ ಇವರ ಮನೆಗೆ ದಾಳಿ ಮಾಡಿದ್ದು, ಈ ವೇಳೆ ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.ಈ ವೇಳೆ ಆರೋಪಿಗಳು ತಲೆಮಾರೆಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಧಿಕಾರಿ ಕೆ. ಟಿ ಪೂವಯ್ಯ ಇವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯ

ಸಂಪಾಜೆ: ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರನ್ನು ಬೇಟೆಯಾಡಿದ ಅರಣ್ಯ ಅಧಿಕಾರಿಗಳು Read More »

ಪುತ್ತೂರು: ಜರ್ನಲಿಸ್ಟ್ ಯೂನಿಯನ್ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ರಾಮದಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೊಟ್ಟೆತ್ತಡ್ಕ ನೇಮಕ ಸಮಗ್ರ ನ್ಯೂಸ್: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವಿ.ಟಿವಿ ಮುಖ್ಯಸ್ಥ ರಾಮದಾಸ್ ಶೆಟ್ಟಿ ವಿಟ್ಲ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ವರದಿಗಾರ ಸಂತೋಷ್ ಮೊಟ್ಟೆತ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಜರ್ನಲಿಸ್ಟ್ ಯೂನಿಯನ್ ಘಟಕದ ಸ್ಥಾಪಕಾಧ್ಯಕ್ಷರಾದ ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಅವರ ನೇತೃತ್ವದಲ್ಲಿ ಜು.9ರಂದು ನಡೆದ ಯೂನಿಯನ್ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಪುತ್ತೂರು: ಜರ್ನಲಿಸ್ಟ್ ಯೂನಿಯನ್ ಮಹಾಸಭೆ-ಪದಾಧಿಕಾರಿಗಳ ಆಯ್ಕೆ Read More »

ಹಾಟ್ ಪೋಟೋ ಶೂಟ್ ಗೆ ಶಾಕ್ ಆದ ಅಭಿಮಾನಿಗಳು….!!

ಸಮಗ್ರ ನ್ಯೂಸ್: ಕಿರುತೆರೆ ನಟಿ ನಾಗಿಣಿ 2 ಧಾರವಾಹಿಯ ನಟಿ ನಮೃತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಾಟ್ ಫೋಟೋ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಫಾರಿನ್ ಟ್ರಿಪ್‌ನ ಮಸ್ತ್ ಆಗಿ ಎಂಜಾಯ್ ಮಾಡುತ್ತಿರುವ ನಟಿ ನಮೃತಾ ಗೌಡ, ಟ್ರಿಪ್‌ನ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬಾಲಿಯಲ್ಲಿ ನಮ್ರತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟಿವಿ ಪರದೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ, ಈಗೀನ ಹಾಟ್ ಲುಕ್‌ ನೋಡಿ

ಹಾಟ್ ಪೋಟೋ ಶೂಟ್ ಗೆ ಶಾಕ್ ಆದ ಅಭಿಮಾನಿಗಳು….!! Read More »

ನದಿಗೆ ಹಾರಿದ ಸ್ವಾಮೀಜಿಯ ಶಿಷ್ಯ

ಸಮಗ್ರ ನ್ಯೂಸ್:ದೇವನೂರು ಮಠದ ಸ್ವಾಮೀಜಿಯ ಶಿಷ್ಯರೊಬ್ಬರು ಟಿ.ನರಸೀಪುರ ತಾಲೂಕಿನ ಮೂಡುಕೊತೊರೆಯ ಸಮೀಪದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇವನೂರು ಮಠದ ಸ್ವಾಮೀಜಿ ಶಿಷ್ಯರಾಗಿದ್ದ ಶಿವಪ್ಪ ದೇವರು (60) ಆತ್ಮಹತ್ಯೆ ಮಾಡಿಕೊಂಡವರು. ಶಿವಪ್ಪ ದೇವರು ಸ್ವಾಮೀಜಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದರು. ಅವರು ಅನಾರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ‌. ಮಠದ ಆವರಣದಲ್ಲಿ ಉತ್ತಮ ಹೆಸರು ಪಡೆದ ಸ್ವಾಮೀಜಿ ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಲಿವೂರು ಗ್ರಾಮದವರಾಗಿದ್ದಾರೆ.

ನದಿಗೆ ಹಾರಿದ ಸ್ವಾಮೀಜಿಯ ಶಿಷ್ಯ Read More »

ನೇಪಾಳದಲ್ಲಿ 6 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ

ಸಮಗ್ರ ನ್ಯೂಸ್: ನೇಪಾಳದಲ್ಲಿ 6 ಜನರಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿರುವ ಬಗ್ಗೆ ಸುದ್ದಿಸಂಸ್ಥೆ ANI ವರದಿ ಮಾಡಿದೆ. “ಸೋಲುಖುಂಬುವಿನಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಬೆಳಿಗ್ಗೆ ಸುಮಾರು 10 ಗಂಟೆಗೆ ಕಂಟ್ರೋಲ್ ಟವರ್‌ ನೊಂದಿಗೆ ಸಂಪರ್ಕ ಕಡಿತಗೊಂಡಿದೆ” ಎಂದು ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ಹೇಳಿದ್ದಾರೆ.9NMV ಕರೆ ಚಿಹ್ನೆಯೊಂದಿಗೆ ಹೆಲಿಕಾಪ್ಟರ್ ಬೆಳಗ್ಗೆ 10:12ಕ್ಕೆ (ಸ್ಥಳೀಯ ಸಮಯ) ರಾಡಾರ್‌ನಿಂದ ಹೊರಬಂದಿತು. ನಾಪತ್ತೆಯಾದ ಹೆಲಿಕಾಪ್ಟರ್‌ನಲ್ಲಿ 5 ವಿದೇಶಿ ಪ್ರಜೆಗಳಿದ್ದರು ಎಂದು ವರದಿಯಾಗಿದೆ.

ನೇಪಾಳದಲ್ಲಿ 6 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ Read More »

ಕಡಬ: ಜಾಗದ ತಕರಾರು ಸೈನಿಕನ ಪತ್ನಿಯ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಕಲ್ಲುಗುಡ್ಡೆಯ ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ. ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ ಮೇಲೆ ಹಲ್ಲೆ ನಡೆದಿದ್ದು, ಜಾಗದ ತಕರಾರಿನ ವಿಚಾರದಲ್ಲಿ ಪಕ್ಕದ ಮನೆಯ ನಾಲ್ವರಿಂದ ಫೌಝಿಯಾ ಮೇಲೆ ಹಲ್ಲೆ ಮಾಡಿದ್ದಾರೆ. ನಿತ್ಯ ಜಾಗದ ವಿಚಾರದಲ್ಲಿ ವಿನಾಕಾರಣ ಪುಂಡರ ಗ್ಯಾಂಗ್ ವೊಂದು ಜಗಳವಾಡುತ್ತಿದ್ದರು. ಕಲ್ಲುಗುಡ್ಡೆಯಲ್ಲಿ ತಂದೆಯ ಮನೆಗೆ ಫೌಝಿಯಾ ಹೋಗಿದ್ದರು, ಈ ಸಂದರ್ಭ ತಂದೆ ಹಾಗೂ ಮಗಳು

ಕಡಬ: ಜಾಗದ ತಕರಾರು ಸೈನಿಕನ ಪತ್ನಿಯ ಮೇಲೆ ಹಲ್ಲೆ Read More »

SDPI ಮಂಗಳೂರು ವಿಧಾನಸಭಾ ಕ್ಷೇತ್ರದ ಸಮಾವೇಶ|ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಬಾಗಿ

ಸಮಗ್ರನ್ಯೂಸ್:ಮಂಗಳೂರು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು(ಉಳ್ಳಾಲ) ಕ್ಷೇತ್ರ ಸಮಿತಿಯ ವತಿಯಿಂದ ಎಸ್‌ಡಿಪಿಐ ಪಕ್ಷದ ಸಮಾವೇಶ ಭಾನುವಾರ ದೇರಳಕಟ್ಟೆಯ ಬಿಸಿಸಿ ಆಡಿಟೋರಿಯಂನ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ವಹಿಸಿದರು.ಸಮಾವೇಶದ ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ಶೋಷಿತ ,ಮತ್ತು ಅಲ್ಪಸಂಖ್ಯಾತ,ಹಿಂದುಳಿದ ಸಮುದಾಯಗಳನ್ನು ರಾಜಕೀಯ ಹಾಗೂ ಸಾಮಾಜಿಕ ವಾಗಿ ದೇಶದ ಮುಖ್ಯ ವಾಹಿನಿಗೆ ತಂದು ಅವರ ಕೈಗಳಿಗೆ ಅಧಿಕಾರ ಹಸ್ತಾಂತರ ಮಾಡುವ ದಿನದವರೆಗೂ SDPI

SDPI ಮಂಗಳೂರು ವಿಧಾನಸಭಾ ಕ್ಷೇತ್ರದ ಸಮಾವೇಶ|ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಬಾಗಿ Read More »

ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಗೌರಿತಾ ಕೆ.ಜಿ. ಐದನೇ ಸ್ಥಾನ

ಸಮಗ್ರ ನ್ಯೂಸ್: 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜು.9 ರಂದು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 9ನೇ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ 9 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ “ನಿರಂತರ ಯೋಗ ತರಬೇತಿ ಕೇಂದ್ರ” ಸುಬ್ರಹ್ಮಣ್ಯದ ವಿದ್ಯಾರ್ಥಿನಿ ಗೌರಿತಾ ಕೆ.ಜಿ. 5ನೇ ಸ್ಥಾನಗಳಿಸುತ್ತಾರೆ. ಇವರು ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಯೋಗ ಗುರು ಶರತ್ ಮರ್ಗಿಲಡ್ಕ ಅವರು ಮಾರ್ಗದರ್ಶನ ನೀಡಿರುತ್ತಾರೆ.

ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಗೌರಿತಾ ಕೆ.ಜಿ. ಐದನೇ ಸ್ಥಾನ Read More »

ಫಸಲ್ ಬಿಮಾ ಯೋಜನೆಗೆ ರಾಜ್ಯ ಸರ್ಕಾರದಿಂದ ಗುಡ್ ಬೈ| ಸ್ವಾವಲಂಬಿ ವಿಮಾ ನೀತಿ ಜಾರಿಗೆ ಚಿಂತನೆ – ಕೃಷ್ಣ ಬೈರೇಗೌಡ

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ಸರ್ಕಾರವು ಬಜೆಟ್ ನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಹಲವು ಯೋಜನೆಗಳನ್ನು ಕೈಬಿಟ್ಟ ಬೆನ್ನಲ್ಲೇ ಇದೀಗ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಕೊಕ್ ನೀಡಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರಧಾನಮಂತ್ರಿ ಫಸಲ್ ಬಿಮಾ ಬೆಳೆ ವಿಮಾ ಯೋಜನೆಯಿಂದ ಹೊರಬಂದು ನಮ್ಮದೇ ರಾಜ್ಯದ ಹೊಸ ಬೆಳೆ ವಿಮಾ ನೀತಿ ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಮರ್ಪಕ ಚಿಂತನೆಯ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು

ಫಸಲ್ ಬಿಮಾ ಯೋಜನೆಗೆ ರಾಜ್ಯ ಸರ್ಕಾರದಿಂದ ಗುಡ್ ಬೈ| ಸ್ವಾವಲಂಬಿ ವಿಮಾ ನೀತಿ ಜಾರಿಗೆ ಚಿಂತನೆ – ಕೃಷ್ಣ ಬೈರೇಗೌಡ Read More »