July 2023

ಕೊರಗಜ್ಜ ದೈವದ ಕಟ್ಟೆಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಸಮಗ್ರ ನ್ಯೂಸ್: ದೈವದ ಕಟ್ಟೆಗೆ ಬೆಂಕಿ ನೀಡಲು ಕುಮ್ಮಕ್ಕು ನೀಡಿದ 13 ಮಂದಿ ನೈಜ ಆರೋಪಿಗಳ ವಿರುದ್ದ ದೈವನಿಂದನೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಬಜಿರೆ ಗ್ರಾಮದ ಬಡಾರು ನಿವಾಸಿಗಳಾದ ಪ್ರದೀಪ್ ಕುಮಾರ್ ಹೆಗ್ಡೆ, ಉಮೇಶ್ ಪೂಜಾರಿ ತಿಮರಡ್ಕ, ಸಂದೀಪ್ ಕುಮಾರ್ ಹೆಗ್ಡೆ, ಪ್ರಸಾದ್, ದಿನೇಶ್ ಪೂಜಾರಿ, ವಿಜಯ ಶೇಖರ, ಮೋಹನಂದ ಪೂಜಾರಿ, ಹರಿಪ್ರಸಾದ್, ಮನುಗೌಡ, ಶ್ರೀಧರ್ ಪೂಜಾರಿ, ವಸಂತಿ ಪೂಜಾರ್ತಿ, ದಯಾನಂದ ಪೂಜಾರಿ, ಹರೀಶ್ ಪೂಜಾರಿ ಎಂಬವರ ಮೇಲೆ ಡಾ.ರಾಜೇಶ್ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ […]

ಕೊರಗಜ್ಜ ದೈವದ ಕಟ್ಟೆಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ Read More »

ಕಾರ್ಕಳ: ಕಚೇರಿಯಲ್ಲೇ ಮಹಿಳಾ ಸಿಬಂದಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಖಾಸಗಿ ಸಂಸ್ಥೆಯ ಮಹಿಳಾ ಸಿಬ್ಬಂದಿ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 14ರಂದು ಕಾರ್ಕಳದಲ್ಲಿ ನಡೆದಿದೆ. ನಗರದ ಮಾರ್ಕೆಟ್‌ ಬಳಿಯ ನಿವಾಸಿ, ವಿವಾಹಿತೆ ಪ್ರಮೀಳಾ ದೇವಾಡಿಗ (32) ಅವರು ಕಾರ್ಕಳ ಪೇಟೆಯ ಮಾರ್ಕೆಟ್‌ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತರ ಸಿಬ್ಬಂದಿಗಳು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಪ್ರಮೀಳಾ ನೇಣು ಬಿಗಿದಿರುವುದು ಕಂಡು ಬಂದಿದೆ. ಅವರು ನೇಣು ಬಿಗಿಯಲು ಮನೆಯಿಂದಲೇ ಸೀರೆ ತಂದಿರಬೇಕು ಎಂದು ಶಂಕಿಸಲಾಗಿದ್ದು,

ಕಾರ್ಕಳ: ಕಚೇರಿಯಲ್ಲೇ ಮಹಿಳಾ ಸಿಬಂದಿ ಆತ್ಮಹತ್ಯೆ Read More »

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ| ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಬಂಧನ

ಸಮಗ್ರ ನ್ಯೂಸ್: ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ನನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿರುವ ಘಟನೆ ನಡೆದಿದೆ. ಚುನಾವಣಾ ಸಂದರ್ಭದಲ್ಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಚಿತ್ತಾಪುರ ಪೊಲೀಸರು ಬಂಧಿಸಿದ್ದರು. ರಾತ್ರಿಯೇ ಸ್ಟೇಷನ್ ಬೇಲ್‌ ಮೇಲೆ ಮಣಿಕಂಠ ರಾಠೋಡ್‌ ಹೊರಬಂದಿದ್ದಾರೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕು ಗೊಳಿಸಿದ್ದಾರೆ. ಖರ್ಗೆ ಕುಟುಂಬ ಸಾಫ್ ಮಾಡುವುದಾಗಿ ಮಣಿಕಂಠ ಹೇಳಿದ್ದ ಎನ್ನಲಾದ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ| ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಬಂಧನ Read More »

‘ಗೃಹಲಕ್ಷ್ಮಿ’ ಯೋಜನೆ ಹೊಸ ಮಾರ್ಗಸೂಚಿ ಪ್ರಕಟ| ಈಗ ಅರ್ಜಿ ಸಲ್ಲಿಸೋದು ಇನ್ನಷ್ಟು ಸುಲಭ!!

ಸಮಗ್ರ‌ ನ್ಯೂಸ್: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಸಧ್ಯ ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ನೂತನ ಮಾರ್ಗಸೂಚಿ ಪ್ರಕಟಿಸಿದೆ. ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಉಂಟಾಗುವ ಒತ್ತಡ ತಪ್ಪಿಸಲು ಹಾಗೂ ಅರ್ಜಿದಾರರಿಗೆ ಅನುಕೂಲದ ದೃಷ್ಠಿಯಿಂದ, ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ‘ಪ್ರಜಾ ಪ್ರತಿನಿಧಿ’ಯನ್ನು ಸರ್ಕಾರ ನೇಮಿಸಿದೆ. ಈ ಪ್ರಜಾ

‘ಗೃಹಲಕ್ಷ್ಮಿ’ ಯೋಜನೆ ಹೊಸ ಮಾರ್ಗಸೂಚಿ ಪ್ರಕಟ| ಈಗ ಅರ್ಜಿ ಸಲ್ಲಿಸೋದು ಇನ್ನಷ್ಟು ಸುಲಭ!! Read More »

ಸದ್ಯಕ್ಕೆ ಟೊಮ್ಯಾಟೊ ಖಾದ್ಯಗಳ ಆಸೆ‌ ಬಿಟ್ಬಿಡಿ..! ಮಾರುಕಟ್ಟೆ ತಜ್ಞರು ಏನ್ ಹೇಳ್ತಾರೆ ಗೊತ್ತಾ!?

ಸಮಗ್ರ ನ್ಯೂಸ್: ದಿನೇ ದಿನೇ ಟೊಮೆಟೋ ಬೆಲೆಯಲ್ಲಿ ಏರಿಕೆ ಕಾಣತೊಡಗಿದೆ. ಶೀಘ್ರದಲ್ಲೇ ಟೊಮೆಟೋ ಬೆಲೆ ಇಳಿಕೆಯಾಗಲಿದೆ ಎನ್ನಲಾಗುತ್ತಿತ್ತು. ಆದರೆ ಸದ್ಯಕ್ಕೆ ಬೆಲೆ ಇಳಿಕೆ ಆಗಲ್ಲ. ಇನ್ನೂ ಕೇಜಿಗೆ 300 ರೂ ಏರಿಕೆ ಸಂಭವ ಇದೆ ಎಂಬುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ. ದೇಶದೆಲ್ಲೆಡೆ ಟೊಮೆಟೋ ಬೆಲೆ ಗಗನಕ್ಕೇರಿದೆ. ಮುಂಬರುವ ದಿನಗಳಲ್ಲಿ ಒಂದು ಕೇಜಿಗೆ 300 ರೂ ತಲುಪುವ ಸಾಧ್ಯತೆ ಇದೆ ಎಂಬುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಟೊಮೆಟೋ ಬೆಲೆ ಹೆಚ್ಚಳಕ್ಕೆ ಉತ್ತರ ಭಾರತದಲ್ಲಿ ಸುಳಿಯುತ್ತಿರುವ ಮಳೆಯ ಹಾಗೂ ಹವಾಮಾನ

ಸದ್ಯಕ್ಕೆ ಟೊಮ್ಯಾಟೊ ಖಾದ್ಯಗಳ ಆಸೆ‌ ಬಿಟ್ಬಿಡಿ..! ಮಾರುಕಟ್ಟೆ ತಜ್ಞರು ಏನ್ ಹೇಳ್ತಾರೆ ಗೊತ್ತಾ!? Read More »

ರಾಜ್ಯದಲ್ಲಿ ಕಾನೂನು ಪಾಲನೆಗೆ ಖಡಕ್ ಆದೇಶ| ಎಲ್ಲಾ ಎಸ್ಪಿ, ಕಮಿಷನರ್ ಗಳಿಗೆ ಸೂಚನೆ ನೀಡಿದ ಎಡಿಜಿಪಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಕೈಗೊಳ್ಳಬೇಕು. ಯಾರಾದರೂ ಪದೇ ಪದೇ ಅಪರಾಧ ಎಸಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದರೆ, ಅಂಥವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಆರಂಭಿಸಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌. ಹಿತೇಂದ್ರ ಖಡಕ್ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕೆಲದಿನಗಳಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ರಾಜ್ಯದ ಎಲ್ಲ ಎಸ್ಪಿ ಹಾಗೂ ಕಮಿಷನರ್‌ಗಳಿಗೆ 21 ಪ್ರಮುಖ ಸೂಚನೆ ನೀಡಿರುವ

ರಾಜ್ಯದಲ್ಲಿ ಕಾನೂನು ಪಾಲನೆಗೆ ಖಡಕ್ ಆದೇಶ| ಎಲ್ಲಾ ಎಸ್ಪಿ, ಕಮಿಷನರ್ ಗಳಿಗೆ ಸೂಚನೆ ನೀಡಿದ ಎಡಿಜಿಪಿ Read More »

ಮಡಿಕೇರಿ: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಅಪಘಾತ| ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಾಸಕ ಡಾ.ಮಂತರ್ ಗೌಡ

ಸಮಗ್ರ ನ್ಯೂಸ್:‌ ಮಡಿಕೇರಿ ವಿಧಾನಸಭಾ ಕ್ಷೇತ್ರದ “ಅರಗಲ್” ಗ್ರಾಮದಲ್ಲಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಅಪಘಾತಕ್ಕೆ ಒಳಗಾದ ಸುದ್ದಿ ತಿಳಿದ ತಕ್ಷಣ ಶಾಸಕ ಡಾ.ಮಂತರ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಅಧಿವೇಶನದಲ್ಲಿದ್ದ ಶಾಸಕ ಡಾ.ಮಂತರ್ ಗೌಡ ರವರು, ಅಧಿವೇಶನ ಮುಗಿದ ತಕ್ಷಣ ಗಾಯಗೊಂಡು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಬಳಿಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ವಿವರಗಳನ್ನು ಪಡೆದುಕೊಂಡರು ಹಾಗೂ ಉತ್ತಮವಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ವೈದ್ಯರಿಗೆ ಸೂಚನೆ

ಮಡಿಕೇರಿ: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಅಪಘಾತ| ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಾಸಕ ಡಾ.ಮಂತರ್ ಗೌಡ Read More »

ಮಡಿಕೇರಿ ನಗರದಲ್ಲಿ ರೈಲ್ವೆ ಬುಕಿಂಗ್ ಸೆಂಟರ್ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ

ಸಮಗ್ರ ನ್ಯೂಸ್:‌ ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ ರೈಲ್ವೆ ಬುಕಿಂಗ್ ಸೆಂಟರ್ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಹಿತರಕ್ಷಣಾ ವೇದಿಕೆಯ ಸದಸ್ಯರುಗಳು ಜು.14ರಂದು ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಕೊಡಗು ಜಿಲ್ಲಾ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ ವೇದಿಕೆಯ ಅಧ್ಯಕ್ಷರಾದ ರವಿ ಗೌಡ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ನಗರಸಭಾ ಮಳಿಗೆಯೊಂದರಲ್ಲಿ ಹಲವು ವರ್ಷಗಳ ಹಿಂದೆ ರೈಲ್ವೆ ಬುಕಿಂಗ್ ಸೆಂಟರ್ ಅನ್ನು

ಮಡಿಕೇರಿ ನಗರದಲ್ಲಿ ರೈಲ್ವೆ ಬುಕಿಂಗ್ ಸೆಂಟರ್ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ Read More »

ತನ್ನ ಮೇಲೆ ದಾಳಿ‌ ಮಾಡಿದ ಚಿರತೆಯನ್ನೇ ಸೆರೆಹಿಡಿದು‌ ಬೈಕ್‌ಗೆ ಕಟ್ಟಿ ಊರಿಗೆ ತಂದ ಯುವಕ!

ಸಮಗ್ರ ನ್ಯೂಸ್: ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿದ ಯವಕ, ಅದನ್ನು ಬೈಕ್‌ಗೆ ಕಟ್ಟಿಕೊಂಡು ಹೋಗಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಹಾಸನ ಜಿಲ್ಲೆಯ ಬಾಗಿವಾಳು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮಕ್ಕೆ ನುಗ್ಗಿದ ಚಿರತೆ ಜಮೀನಿಗೆ ಹೋಗುತ್ತಿದ್ದ ಯುವಕನ ಮೇಲೆ ದಾಳಿ ಮಾಡಿದೆ. ಯುವಕ ಚಿರತೆಯನ್ನು ಓಡಿಸಲು ಮುಂದಾಗಿದ್ದು, ಮತ್ತೆ ದಾಳಿ ಮಾಡಿದೆ. ದಾಳಿ ವೇಳೆ ಕೈ ಮತ್ತು ಕಾಲು, ದೇಹಕ್ಕೆ ಗಾಯವಾಗಿದ್ದರೂ, ಚಿರತೆಯೊಂದಿಗೆ ಸೆಣಸಾಡಿದ್ದಾನೆ.

ತನ್ನ ಮೇಲೆ ದಾಳಿ‌ ಮಾಡಿದ ಚಿರತೆಯನ್ನೇ ಸೆರೆಹಿಡಿದು‌ ಬೈಕ್‌ಗೆ ಕಟ್ಟಿ ಊರಿಗೆ ತಂದ ಯುವಕ! Read More »

ವೃದ್ಧ ಕಾರ್ಮಿಕನ ಮೇಲೆ ಕಾಡಾನೆ ದಾಳಿ

ಸಮಗ್ರ ನ್ಯೂಸ್:‌ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಘಾಸಿಗೊಳಿಸಿರುವ ಘಟನೆ ಜು.14ರ ಸಂಜೆ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ವೃಂದಾವನ ತೋಟದ ರಸ್ತೆಯಲ್ಲಿ ನಡೆದಿದೆ. ಭೂತನಕಾಡು ಟಾಟಾ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ರಾಮಸ್ವಾಮಿ ಎಂಬುವವರು ಸಂಜೆ ವೃಂದಾವನ ತೋಟದಲ್ಲಿ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ದಿಢೀರನೇ ಕಾಡಾನೆ ಪ್ರತ್ಯಕ್ಷವಾಗಿದ್ದು ರಾಮಸ್ವಾಮಿ ಅವರ ಮೇಲೆ ಎರಗಿ ನೆಲಕ್ಕೆ ಬೀಳಿಸಿ ಕಾಲನ್ನು ತುಳಿಯಲಾರಂಭಿಸಿದೆ.

ವೃದ್ಧ ಕಾರ್ಮಿಕನ ಮೇಲೆ ಕಾಡಾನೆ ದಾಳಿ Read More »