July 2023

ಪಿರಿಯಾಪಟ್ಟಣ: ನಿಂತಿದ್ದ ಟ್ರಾಕ್ಟರ್ ಗೆ ಕಾರು ಡಿಕ್ಕಿ| ಮೂವರು ಸ್ಪಾಟೌಟ್; ಕಾರ್ಯಾಚರಣೆಯಲ್ಲಿ ಭಾಗಿಯಾದ ಪುತ್ತೂರಿನ ಯುವಕರು

ಸಮಗ್ರ ನ್ಯೂಸ್: ಬೆಳ್ಳಂಬೆಳಗ್ಗೆ ನಿಂತಿದ್ದ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಡೆದಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು( ಜುಲೈ 18) ಮುಂಜಾನೆ 4.30ಕ್ಕೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮುದಾಸೀರ್, ಮುಜಾಯಿದ್, ಅಹ್ಮದ್​​​ ಪಾಷಾ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಪುತ್ತೂರು ಮೂಲದ ಯುವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ […]

ಪಿರಿಯಾಪಟ್ಟಣ: ನಿಂತಿದ್ದ ಟ್ರಾಕ್ಟರ್ ಗೆ ಕಾರು ಡಿಕ್ಕಿ| ಮೂವರು ಸ್ಪಾಟೌಟ್; ಕಾರ್ಯಾಚರಣೆಯಲ್ಲಿ ಭಾಗಿಯಾದ ಪುತ್ತೂರಿನ ಯುವಕರು Read More »

ಉಡುಪಿ: ಡಿಕ್ಕಿಯಾದ ಕಾರನ್ನು ಎಳೆದೊಯ್ದ ಟ್ರಕ್| ಭಯಾನಕ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಉಡುಪಿಯಲ್ಲಿ ಮೂವರನ್ನು ಹೊತ್ತೊಯ್ಯುತ್ತಿದ್ದ ಕಾರನ್ನು ಡಂಪರ್ ಟ್ರಕ್ ಎರಡು ಕಿ.ಮೀ ವರೆಗೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಎರಡು ವಾಹನಗಳು ಡಿಕ್ಕಿ ಹೊಡೆದು ಕಾರು ಟ್ರಕ್ ಅಡಿಯಲ್ಲಿ ಸಿಲುಕಿಕೊಂಡ ನಂತರ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳು ವಾಹನವನ್ನು ಹಿಂಬಾಲಿಸಿ ಅಂತಿಮವಾಗಿ ಚಾಲಕನನ್ನು ನಿಲ್ಲಿಸಿದ್ದಾರೆ. ನಂತರ ಟ್ರಕ್ ಚಾಲಕನನ್ನು ಬಂಧಿಸಲಾಯಿತು.

ಉಡುಪಿ: ಡಿಕ್ಕಿಯಾದ ಕಾರನ್ನು ಎಳೆದೊಯ್ದ ಟ್ರಕ್| ಭಯಾನಕ ವಿಡಿಯೋ ವೈರಲ್ Read More »

ಬೆಂಕಿಹಚ್ಚಿ ಸ್ವಂತ ಮಗನನ್ನೇ ಕೊಲೆಗೈದ ತಾಯಿ!! ಬೆದರಿಸುವ ತಂತ್ರ ಕೊಲೆಯಲ್ಲಿ ಅಂತ್ಯ

ಸಮಗ್ರ ನ್ಯೂಸ್: ತಾಯಿಯೊಬ್ಬಳು ತನ್ನ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಕುಡಿದು ಬಂದು ದಿನವೂ ಗಲಾಟೆ ಮಾಡುತ್ತಿದ್ದ ಚಾಂದ್ ಪಾಷಾ(40) ಎಂಬ ಪುತ್ರನಿಗೆ, ತಾಯಿ ಸೋಫಿಯಾಬಿ(60) ಹೆದರಿಸೋ ಸಲುವಾಗಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ಡ್ರಾಮಾ ಮಾಡಿದ್ದಾರೆ. ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆಯು, ನಿಜವಾದ ಕಾರಣ, ನೋಡನೋಡುತ್ತಿದ್ದಂತೆ ತಾಯಿ ಎದುರೇ ಸುಟ್ಟು ಚಾಂದ್ ಪಾಷಾ ಹೋಗಿದ್ದಾನೆ. ಪುತ್ರ ಚಾಂದ್

ಬೆಂಕಿಹಚ್ಚಿ ಸ್ವಂತ ಮಗನನ್ನೇ ಕೊಲೆಗೈದ ತಾಯಿ!! ಬೆದರಿಸುವ ತಂತ್ರ ಕೊಲೆಯಲ್ಲಿ ಅಂತ್ಯ Read More »

ಸಿದ್ದಾಪುರ: ಮತ್ತೆ ಆತಂಕ ಮೂಡಿಸಿದ ಕಾಡಾನೆ ಹಿಂಡು

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು ಗ್ರಾಮಸ್ಥರು ಆತoಕಗೊಂಡಿದ್ದಾರೆ. 26 ಕ್ಕೂ ಹೆಚ್ಚು ಕಾಡಾನೆಗಳಿರುವ ಹಿಂಡನ್ನು ಅರಣ್ಯ ಸಿಬ್ಬಂದಿಗಳು ಕಾಡಿಗೆ ಅಟ್ಟಿಸುವ ಪ್ರಯತ್ನ ಮುಂದುವರೆದಿದೆ. 14 ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಕಾಡಾನೆಯ ಹಿಂಡನ್ನು ಬೀಟಿ ಕಾಡಿಗೆ ಅಟ್ಟಿಸಲಾಯಿತು. ಉಳಿದ ಕಾಡಾನೆಗಳನ್ನು ನಾಳೆ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಅರಣ್ಯ ವಲಯ ಅರಣ್ಯ ಅಧಿಕಾರಿಗಳಾದ ಕೆ.ಎಂ ದೇವಯ್ಯ ಅವರು ತಿಳಿಸಿದ್ದಾರೆ.

ಸಿದ್ದಾಪುರ: ಮತ್ತೆ ಆತಂಕ ಮೂಡಿಸಿದ ಕಾಡಾನೆ ಹಿಂಡು Read More »

ರಾಜ್ಯದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಸಾಧ್ಯತೆ| ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ (ಜು.18, 19) ರಂದು ಭಾರಿ ಮಳೆಯಾಗಲಿದ್ದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿಯಲ್ಲಿ ಬಿರುಗಾಳಿಯು 40 ರಿಂದ 45 ಕಿಮೀ ವೇಗದಲ್ಲಿ ಬೀಸಲಿದೆ. ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.

ರಾಜ್ಯದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಸಾಧ್ಯತೆ| ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ Read More »

ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ

ಸಮಗ್ರ ನ್ಯೂಸ್: ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ (73) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿ ಇಂದು(ಜುಲೈ 18) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಹಾಲಿ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಉಮ್ಮನ್ ಚಾಂಡಿ ಅವರು 1943, ಅಕ್ಟೋಬರ್ 31ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ನಲ್ಲಿ ಜನಿಸಿದ್ದು, ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು

ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ Read More »

ಭಕ್ತಾಧಿಗಳೇ ಗಮನಿಸಿ…| ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಇನ್ಮುಂದೆ ದೇವಸ್ಥಾನಗಳಲ್ಲಿ ಮೊಬೈಲ್ ಬಳಸುವಂತಿಲ್ಲ. ಈ ಬಗ್ಗೆ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಆದೇಶ ಹೊರಡಿಸಿದೆ. ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದ್ದು, ಇಲಾಖೆಯ ವ್ಯಾಪ್ತಿಯ ದೇವಾಲಯಗಳ ಆವರಣದಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ವ್ಯಾಪ್ತಿಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ದೇವಸ್ಥಾನಗಳಿವೆ. ಈ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್

ಭಕ್ತಾಧಿಗಳೇ ಗಮನಿಸಿ…| ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ Read More »

ಕರೆಯದೇ ಬರುವ ಮಳೆಗಾಲದ ಮತ್ತೊಬ್ಬ ನೆಂಟ – ಚಿಕುನ್‍ಗುನ್ಯಾ ಜ್ವರ | ರೋಗದ ಲಕ್ಷಣ ಮತ್ತು ಚಿಕಿತ್ಸಾ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಉಷ್ಣವಲಯದ ದೇಶಗಳಲ್ಲಿ, ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಇನ್ನೊಂದು ಖಾಯಿಲೆ ಎಂದರೆ ಚಿಕುನ್‍ಗುನ್ಯಾ ಜ್ವರ. ಡೆಂಘೀ ಜ್ವರವನ್ನು ಹರಡುವ ಏಡಿಸ್ ಎಜೆಪ್ಟಿ ಮತ್ತು ಏಡಿಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳೇ ಚಿಕುನ್ ಗುನ್ಯಾರೋಗವನ್ನೂ ಹರಡುತ್ತವೆ. ‘ಚಿಕುನ್ ಗುನ್ಯಾ’ ಎಂಬ ವೈರಸ್‍ನ ಸೋಂಕಿನಿಂದ ಬರುವ ಈ ಜ್ವರ, ಸಾಂಕ್ರಾಮಿಕ ರೋಗವಾಗಿದ್ದು, ಏಡಿಸ್ ಸೊಳ್ಳೆಗಳ ಮುಖಾಂತರ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. 1952ರಲ್ಲಿ ದಕ್ಷಿಣ ತಾಂಜಾನಿಯಾ ದೇಶದಲ್ಲಿ ಚಿಕುನ್‍ಗುನ್ಯಾ ಮೊದಲು ಕಾಣಿಸಿಕೊಂಡಿತ್ತು ಈ ರೋಗದಲ್ಲಿ, ಹೆಚ್ಚಾಗಿ ಗಂಟುಗಂಟುಗಳಲ್ಲಿ ಅತಿಯಾಗಿ

ಕರೆಯದೇ ಬರುವ ಮಳೆಗಾಲದ ಮತ್ತೊಬ್ಬ ನೆಂಟ – ಚಿಕುನ್‍ಗುನ್ಯಾ ಜ್ವರ | ರೋಗದ ಲಕ್ಷಣ ಮತ್ತು ಚಿಕಿತ್ಸಾ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ Read More »

‘ಕಮಲ’ ಮುಡಿಯಲಿದ್ದಾಳೆ ‘ತೆನೆ ಹೊತ್ತ ಮಹಿಳೆ’| ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್

ಸಮಗ್ರ ನ್ಯೂಸ್: ಬಿಜೆಪಿಯನ್ನು ಕಟ್ಟಿಹಾಕಲು ಮಹಾಘಟಬಂಧನ್ ನಾಯಕರು ಬೆಂಗಳೂರಲ್ಲಿ ಇಂದಿನಿಂದ ಒಗ್ಗಟ್ಟು ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದ್ರೆ, ದಳಪತಿ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಲು ದೆಹಲಿಗೆ ತೆರಳುವ ಸಾಧ್ಯತೆ ದಟ್ಟವಾಗಿದೆ. ತೆನೆ ಹೊತ್ತ ಮಹಿಳೆ ಬಹುತೇಕ ಕಮಲ ಮುಡಿಯೋದು ಫಿಕ್ಸ್ ಆಗಿದ್ದು, ದೆಹಲಿಯಲ್ಲಿ ಅಂತಿಮ ಮುದ್ರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಇಂದು ಅಥವಾ ನಾಳೆ ಹೆಚ್‌.ಡಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, NDA ಸಭೆಗೂ ಮುನ್ನ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

‘ಕಮಲ’ ಮುಡಿಯಲಿದ್ದಾಳೆ ‘ತೆನೆ ಹೊತ್ತ ಮಹಿಳೆ’| ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್ Read More »

ಹೃದಯಾಘಾತದಿಂದ ಕುಸಿದು ಬಿದ್ದು 20 ವರ್ಷದ ಯುವಕ ಸಾವು

ಸಮಗ್ರ ನ್ಯೂಸ್: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಗುಜರಾತ್ ನ ಅರಾವಳಿ ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದ್ದು. ಕ್ರಿಕೆಟ್ ಆಡುತ್ತಿದ್ದ 20 ವರ್ಷದ ಯುವಕನೊಬ್ಬ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಾವಳಿ ಜಿಲ್ಲೆಯ ಮೊಡಸಾ ನಿವಾಸಿ ಪರ್ವ್ ಸೋನಿ ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಮೂರ್ಛೆ ಹೋಗಿದ್ದಾನೆ. ಅಲ್ಲಿದ್ದ ಸಹೋದ್ಯೋಗಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು ಮತ್ತು ಅವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಎಂಜಿನಿಯರಿಂಗ್

ಹೃದಯಾಘಾತದಿಂದ ಕುಸಿದು ಬಿದ್ದು 20 ವರ್ಷದ ಯುವಕ ಸಾವು Read More »