Ad Widget .

ಗೃಹಜ್ಯೋತಿ ಕರೆಂಟ್ ಬಿಲ್ ಮಾದರಿ ಹೇಗಿದೆ ಗೊತ್ತಾ?|ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಲಾಭ ಫಲಾನುಭವಿಗಳಿಗೆ ಸಿಗಲಿದೆ ಶೂನ್ಯ ದರದ ಕರೆಂಟ್ ಬಿಲ್. ಮೀಟರ್ ರೀಡಿಂಗ್ ಕಾರ್ಯ ನಾಳೆಯಿಂದ ಆರಂಭವಾಗಲಿದ್ದು, ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗ ಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

Ad Widget . Ad Widget .

ಬಿಲ್ ಮುಂಭಾಗ ಹಾಗೂ ಹಿಂಭಾಗ ಮುದ್ರಣದಲ್ಲಿ ಬದಲಾವಣೆ ಮಾಡಲಾಗಿದ್ದು ಗೃಹಜ್ಯೋತಿಯ ಕರೆಂಟ್ ಬಿಲ್ ಮಾದರಿ ನ್ಯೂಸ್ 18ಗೆ ದೊರೆತಿದೆ. ಈ ಬಿಲ್ ನ ಮುಂಭಾಗ ಹಾಗೂ ಹಿಂಭಾಗ ಮುದ್ರಣದಲ್ಲಿ ಬದಲಾವಣೆ ಮಾಡಲಾಗಿದೆ. ವಿದ್ಯುತ್ ಬಿಲ್ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ಇಂಧನ ಸಚಿವರ ಕೆಜೆ ಜಾರ್ಜ್ ಫೋಟೋ ಹಾಗೂ ಗೃಹಜ್ಯೋತಿ ಲಾಂಛನ ಮುದ್ರಣ ಮಾಡಲಾಗಿದೆ. ಹಿಂಬದಿಯ ವಿದ್ಯುತ್ ರಶೀದಿಯಲ್ಲಿ ಸೂಚನೆಗಳು ಹಾಗೂ ‌ಬಿಲ್ ಕುರಿತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

Ad Widget . Ad Widget .

ಜೂನ್ ತಿಂಗಳ ಹಾಗೂ ಜುಲೈ ತಿಂಗಳ ಬಿಲ್ ಭಾರೀ ವ್ಯತ್ಯಾಸ ಉಂಟಾಗಿತ್ತು. ಈಗ ಗೃಹಜ್ಯೋತಿ ಅನುಷ್ಠಾನ ಹಿನ್ನೆಲೆ ಕರೆಂಟ್ ಬಿಲ್ನಲ್ಲಿ ಮತ್ತೆ ವ್ಯತ್ಯಾಸ ಇರಲಿದೆ. ಎಲ್ಲಾ ಎಸ್ಕಾಂನಲ್ಲಿ ಏಕರೂಪದ ಬಿಲ್ ನೀಡಲು ಇಂಧನ ಇಲಾಖೆ ನಿರ್ಧರಿಸಿದ್ದು, ಆದ್ರೆ ಆಯಾ ಎಸ್ಕಾಂನ ಯೂನಿಟ್ ಬೆಲೆ, ಹೊಂದಾಣಿಕೆ ವೆಚ್ಚದಲ್ಲಿ ಬದಲಾವಣೆ ಇರಲಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶದ ಬಿಲ್ಗಳಲ್ಲಿಯೂ ವ್ಯತ್ಯಾಸ ಇರಲಿದ್ದು. ಮುಂಬದಿಯಲ್ಲಿ ಕರೆಂಟ್ ಬಿಲ್ ಗೃಹಜ್ಯೋತಿ ಯೂನಿಟ್ ಮಾಹಿತಿ, ಪ್ರತಿ ಕಾಲಂ ಸ್ಪಷ್ಟವಾಗಿರಲಿದೆ. ಹೆಚ್ಚುವರಿ ಸರಾಸರಿ ವಿದ್ಯುತ್ ಬಳಕೆ ಮತ್ತು ಗೃಹಜ್ಯೋತಿ ಪರಿಗಣಿಸಿದ ಯೂನಿಟ್ ಅಂಶ ಕಾಲಂ ಸೇರ್ಪಡೆ ಮಾಡಲಾಗಿದೆ.

ಇದೀಗ ಇಂಧನ ಇಲಾಖೆ ಗೃಹಜ್ಯೋತಿ ಯೋಜನೆ ಫಲಾನುಭವಿಗೆ ಮತ್ತಷ್ಟು ಅನುಕೂಲ ಘೋಷಣೆ ಮಾಡಿದೆ. ಒಂದಲ್ಲ ಕಳೆದ ಮೂರು ತಿಂಗಳು ಬಿಲ್ ಬಾಕಿ ಇದ್ರೂ ಅದನ್ನ ಮನ್ನಾ ಮಾಡಲು ಇಂಧನ ಇಲಾಖೆ ಮುಂದಾಗಿದೆ. ಗೃಹಜ್ಯೋತಿ ಯೋಜನೆ ಫಲಾನುಭವಿ ಆಗಲು ಬಾಕಿ ಬಿಲ್ ಇರಬಾರದಿತ್ತು. ಜೂನ್ ತಿಂಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ಆದರೆ ಇದೀಗ ಮೂರು ತಿಂಗಳು ಬಿಲ್ ಬಾಕಿ ಇದ್ರೂ ಯೋಜನೆ ಉಚಿತ ವಿದ್ಯುತ್ ನೀಡುವದಾಗಿ ಇಂಧನ ಇಲಾಖೆ ತಿಳಿಸಿದೆ.

Leave a Comment

Your email address will not be published. Required fields are marked *