Ad Widget .

ಪಿರಿಯಾಪಟ್ಟಣ: ಗಾಂಜಾ ಮಾರಾಟ| ಕೊಡಗಿನ ವ್ಯಕ್ತಿ ಬಂಧನ

ಸಮಗ್ರ ನ್ಯೂಸ್: ಪಿರಿಯಾಪಟ್ಟಣ ತಾಲೂಕಿನ ಆಯುರ್ಬೀಡು ಸಮೀಪದ ಲಿಂಗಪುರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗಿನ ವ್ಯಕ್ತಿಯನ್ನು ಬೈಲುಕುಪ್ಪೆ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಿವಾಸಿ ಅಜೀಜ್ ಬಂಧಿತ ಆರೋಪಿ. ಖಚಿತ ಮಾಹಿತಿಯ ಆದರದ ಮೇಲೆ ಭಾನುವಾರ ಬೆಳಿಗ್ಗೆ ಆರೋಪಿಯನ್ನು ಸೆರೆ ಹಿಡಿದು 5 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

Ad Widget . Ad Widget .

ಆರೋಪಿಯ ವಿರುದ್ಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಚರಣೆಯಲ್ಲಿ ಪಿಎಸ್ಐ ಅಜಯ್ ಕುಮಾರ್, ಗುಪ್ತಚರ ಸಬ್ ಇನ್ಸ್ಪೆಕ್ಟರ್ ಮಹಾಲಿಂಗ ಸ್ವಾಮಿ, ಸಿಬ್ಬಂದಿಯಾದ ಚೇತನ್ ಕುಮಾರ್ ಮಹಾದೇವಪ್ಪ ಮುದ್ದುರಾಜು ಕುಮಾರಸ್ವಾಮಿ ಸುರೇಶ ಪ್ರದೀಪ್ ಭಾಗಿಯಾಗಿದ್ದರು.

Leave a Comment

Your email address will not be published. Required fields are marked *