Ad Widget .

ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ಕಿಸಿದ ಗಗನಸಖಿ

ಸಮಗ್ರ ನ್ಯೂಸ್: ಎಂ.ಎಸ್ ಧೋನಿ ಅಭಿಮಾನಿಗಳು ಒಮ್ಮೆಯಾದ್ರೂ ಧೋನಿಯನ್ನ ಹತ್ತಿರದಿಂದ ನೋಡ್ಬೇಕು,ಅಂತಹ ಒಂದು ಕ್ಷಣ ಸಿಕ್ಕರೂ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲಾರದೇ ಇರೋದಿಲ್ಲ. 2023 IPL ಟೂರ್ನಿಯಲ್ಲಿ ಮಹಿ ನೋಡಲೆಂದೇ ಸಾವಿರಾರು ಕಿಲೋ ಮೀಟರ್‌ಗಳಿಂದ ಅಭಿಮಾನಿಗಳು ಬಂದಿದ್ರು. ಇದೀಗ ಗಗನಸಖಿಯೊಬ್ಬಳು ಅಂತಹದ್ದೇ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲು ಹೋಗಿ ಸುದ್ದಿಯಾಗಿದ್ದಾಳೆ.

Ad Widget . Ad Widget .

ಇತ್ತೀಚೆಗೆ ವಿಮಾನ ಪ್ರಯಾಣ ಸಮಯದಲ್ಲಿ MSD ಪಕ್ಕದಲ್ಲಿ ನಿಂತು ಗಗನ ಸಖಿಯೊಬ್ಬಳು (Air Hostess) ಫೋಟೋ ತೆಗೆದುಕೊಂಡಿದ್ದಾಳೆ. ಆದ್ರೆ ಈ ಫೋಟೋ ತೆಗೆದುಕೊಳ್ಳುವಾಗ ಧೋನಿ ಸಣ್ಣ ನಿದ್ರೆಗೆ ಜಾರಿದ್ದರು. ಹಾಗಾಗಿ ಇದು ಅವರಿಗೆ ಗೊತ್ತೇ ಇರಲಿಲ್ಲ. ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಗಗನಸಖಿ ವಿರುದ್ಧ ಕಿಡಿ ಕಾರಿದ್ದಾರೆ.

Ad Widget . Ad Widget .

ಒಬ್ಬ ಅಭಿಮಾನಿಯಾಗಿ ನಾನು ಸಹ ಅವರನ್ನ ನೋಡಲು ಬಯಸುತ್ತೇನೆ. ಆದ್ರೆ ಅವರ ಅನುಮತಿಯಿಲ್ಲದೇ ಅವರ ಪರ್ಸನಲ್ ಸ್ಪೇಸ್‌ಗೆ ಅಡ್ಡಿಪಡಿಸಲು ಬಯಸುವುದಿಲ್ಲ. ಇನ್ಮುಂದೆ ಹೀಗೆ ಮಾಡ್ಬೇಡಿ ಅಂತಾ ಅಭಿಮಾನಿಯೊಬ್ಬರು ಕೇಳಿಕೊಂಡಿದ್ದಾರೆ. ಮತ್ತೊಬ್ಬರು, ಯಾರಾದರೂ ಗಗನಸಖಿಯರಿಗೆ ಹೆಚ್ಚು ವೃತ್ತಿಪರರಾಗಿರಲು ಮತ್ತು ಅವರ ಗೌಪ್ಯತೆಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚಿಸಬಹುದೇ ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಧೋನಿ ಜಾಗದಲ್ಲಿ ಯುವತಿ, ಗಗನಸಖಿ ಜಾಗದಲ್ಲಿ ಧೋನಿ ಇದ್ದರೆ ಇಷ್ಟು ಹೊತ್ತಿಗೆ ಮಹಿಳಾ ಹೋರಾಟಗಾರರು ಕಟು ಪದಗಳಲ್ಲಿ ಟೀಕೆ ಮಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

Leave a Comment

Your email address will not be published. Required fields are marked *