ಸಮಗ್ರ ನ್ಯೂಸ್:ಸ್ವಂತ ಉದ್ಯಮ ಸ್ಥಾಪಿಸಿ ಸ್ವಾವಲಂಬಿ ಉದ್ಯಮಿ ಆಗಬೇಕೆ? ಹಾಗಾದರೆ ಕೋಳಿ ಫಾರಂ ಸ್ಥಾಪನೆಗೆ ಮುಂದಾಗಬಹುದು. ಯಾಕೆಂದರೆ? ಈ ಉದ್ಯಮ ಆರಂಭಿಸಲು ಕೇಂದ್ರ ಸರಕಾರ 50 ಲಕ್ಷ ರೂ. ಸಾಲ ನೀಡುತ್ತಿದೆ. ಶೇ. 50ರಷ್ಟು (50%) ಸಬ್ಸಿಡಿ (Subsidy) ಇದ್ದು, ನೀವು 25 ಲಕ್ಷ ಹೂಡಿಕೆ ಮಾಡಿದರೆ ಉಳಿದ ಮೊತ್ತವನ್ನು ಕೇಂದ್ರ ಭರಿಸಲಿದೆ.
ಯಾರಿಗೆಲ್ಲ ಸೌಲಭ್ಯ ಲಭ್ಯ?
ಈ ಯೋಜನೆಯಡಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ವ್ಯಕ್ತಿ, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಹಕಾರ ಸಂಘಗಳು, ಜಂಟಿ ಹೊಣೆಗಾರಿಕೆ ಗುಂಪುಗಳು, ಸೆಕ್ಷನ್ 8ರ ಅಡಿಯಲ್ಲಿ ಬರುವ ಮೊಟ್ಟೆ ಕೇಂದ್ರಗಳು, ಬ್ರಾಯ್ಲರ್ ಗಳು, ಮಕ್ಕಳ ಪಾಲನೆ ಕೇಂದ್ರಗಳು ಹೀಗೆ ಎಲ್ಲರೂ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ನಿಡುತ್ತವೆ. ಇದಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು www.nlm.udayanidhimitra.in/Login portal ವೆಬ್ ಸೈಟ್ ಗೆ ಲಾಗ್ ಇನ್ ಆಗಬೇಕು.
ಷರತ್ತುಗಳು:
1.ಸಾಲ ಪಡೆಯುವವರ ಹೆಸರಿನಲ್ಲಿ ಕನಿಷ್ಠ 1 ಎಕ್ರೆ ಜಮೀನು ಮತ್ತು ಸಂಬಂಧಿಸಿದ ದಾಖಲೆ ಇರಬೇಕು.
2.ಸ್ವಂತ ಜಮೀನು ಇಲ್ಲದವರು ಗುತ್ತಿಗೆ ಜಮೀನಿನ ಮೇಲೆ ಸಾಲ ಪಡೆಯಬಹುದು.
3.ವಿವರವಾದ ಯೋಜನಾ ವರದಿಯನ್ನು ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಅದಿಕಾರಿಗಳಿಗೆ ಸಲ್ಲಿಸಬೇಕು.
ಬೇಕಾದ ದಾಖಲೆಗಳು:
1.ಆಧಾರ್ ಕಾರ್ಡ್
2.ಜಮೀನಿನ ಫೋಟೋ
3.ಭೂ ದಾಖಲೆಗಳು
4.ಮತದಾರರ ಚೀಟಿ
5.ನಿಮ್ಮ ಖಾತೆಯ ರದ್ದಾದ 2 ಚೆಕ್ ಗಳು
6.ವಿಳಾಸದ ಪ್ರೂಫ್
7.ತರಬೇತಿ ಪಡೆದರೆ ಪ್ರಮಾಣಪತ್ರ
8ನಿಮ್ಮ ಸ್ಕ್ಯಾನ್ ಮಾಡಿದ ಸಹಿ