ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್ ದುಗ್ಗಲಡ್ಕ ಬೂತ್ ಕಾಂಗ್ರೇಸ್ ಸಮಿತಿ ಸಭೆ ಜು. 30 ರಂದು ಅಬೂಬಕ್ಕರ್ ಕೊಳಂಜಿಕೋಡಿಯವರ ಮನೆಯಲ್ಲಿ ನಡೆಯಿತು.
ಬೂತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕಂದಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಮುಖ್ಯವಾಗಿ ಗೃಹ ಲಕ್ಷ್ಮಿ ಯೋಜನೆಯ ಪಲಾನುಭವಿಗಳನ್ನು ಶೀಘ್ರ ನೋಂದಾವಣೆಗೆ ಪ್ರೆರೇಪಿಸಲು ಮನೆ ಮನೆ ಭೇಟಿ ಅಭಿಯಾನದ ಮೂಲಕ ಜಾಗೃತಿ ಮೂಡಿಸುವುದು ಅಗತ್ಯವಿದೆ. ಸುಳ್ಯ ನಗರದಾಧ್ಯಂತ ಎಲ್ಲಾ ವಾರ್ಡ್ ಗಳಲ್ಲಿ ಈ ಅಭಿಯಾನ ನಡೆಸಲು ತೀರ್ಮಾನಿಸಿದ್ದು ದುಗ್ಗಲಡ್ಕದಿಂದ ಪ್ರಾರಂಭವಾಗಲಿ ಎಂದು ಹೇಳಿದರು.
ಈ ಬಗ್ಗೆ ವಾರ್ಡ್ ಸಮಿತಿ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ದುಗ್ಗಲಡ್ಕ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ, ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರದ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಮಾಜಿ ಕಾರ್ಯದರ್ಶಿ ಗೋಕುಲ್ ದಾಸ್, ಸುಳ್ಯ ಬ್ಲಾಕ್ ಕಾಂಗ್ರೇಸ್ ಮಾಜಿ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ, ಮಾಜಿ ನಗರ ಪಂಚಾಯತ್ ಸದಸ್ಯ ಇಬ್ರಾಹಿಂ ನೀರಬಿದಿರೆ, ಹಿರಿಯರಾದ ಕೃಷ್ಣಸ್ವಾಮಿ ಕಂದಡ್ಕ, ಅಬ್ದುಲ್ ರಹಿಮಾನ್ ಕೊಳಂಜಿಕೋಡಿ, ಹಸೈನಾರ್ ಕೊಳಂಜಿಕೋಡಿ, ವಿಜೇಂದ್ರ ಕಂದಡ್ಕ, ಸುಕುಮಾರ ಕಂದಡ್ಕ, ಅಬ್ದುಲ್ಲ ಕೊಳಂಜಿಕೋಡಿ, ಮಹಮ್ಮದ್ ಕೊಳಂಜಿಕೋಡಿ, ಹಸೈನಾರ್ ಕೊಳಂಜಿಕೋಡಿ, ಅಬೂಬಕ್ಕರ್ ಕೊಳಂಜಿಕೋಡಿ, ಹನೀಪ್ ಕೊಳಂಜಿಕೋಡಿ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಕಂದಡ್ಕ ಸ್ವಾಗತಿಸಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಶಿಧರ್ ಎಂ.ಜೆ. ವಂದಿಸಿದರು.