Ad Widget .

ಕುಕ್ಕೆ ದೇವಳಕ್ಕೆ ನಿಯಮ ಬಾಹಿರ ದಿನಸಿ ಖರೀದಿಯ ಆರೋಪ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕಳೆದ ಮೂರು ವರ್ಷಗಳಿಂದ ದೇವಳಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ಯಾವುದೇ ಟೆಂಡರ್ ನಡೆಸದೇ ನಿಯಮ ಬಾಹಿರವಾಗಿ ಮಂಗಳೂರಿನಿ ಜನತಾ ಬಜಾರ್‌ನಿಂದ ಖರೀದಿಸಲಾಗಿದ್ದು, ಇದರಿಂದ ಪ್ರತೀ ವರ್ಷ ಸುಮಾರು ೫ ಕೋಟಿ ಹೆಚ್ಚುವರಿ ಪಾವತಿಯಾಗಿ ನಷ್ಟ ಉಂಟಾಗುತ್ತಿದೆ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್‌ಇಂಜಾಡಿ ಆರೋಪಿಸಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅವರು ಸುಬ್ರಹ್ಮಣ್ಯದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಟೆಂಡರ್ ನಡೆಸದೇ ಸಾಮಾಗ್ರಿ ಖರೀದಿ ಬಗ್ಗೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನಿಸಿದ್ದರು. ಅಂದಿನ ಮುಜರಾಯಿ ಸಚಿವರು ಕ್ರಮದ ಭರವಸೆ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ನಮ್ಮ ಗ್ರಾಮ ಸಮಿತಿ ವತಿಯಿಂದ ಈಗೀನ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿದ ನಿಟ್ಟಿನಲ್ಲಿ ಸಚಿವರು ಆಯುಕ್ತರಿಗೆ ಪತ್ರ ಬರೆದು ನಿಯಮಾನುಸಾರ ಇ-ಹರಾಜು ನಡೆಸುವಂತೆ ನೀಡಿದ್ದರು. ಅದರಂತೆ ಆಯುಕ್ತರಿಂದ ಜು.೨೦ರಂದು ದೇವಳದ ಕಛೇರಿಗೆ ಪತ್ರ ಬಂದಿದ್ದರೂ ಜು.೨೪ರಂದು ನಡೆದ ಆಡಳಿತ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಮಂಡಿಸದೇ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಅಧ್ಯಕ್ಷರು ಉದ್ದೇಶಪೂರ್ವಕವಾಗಿ ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

Ad Widget . Ad Widget . Ad Widget .

ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮಾಸ್ಟರ್‌ಪ್ಲಾನಿನ ಯಾವುದೇ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ, ಹಲವು ವರ್ಷಗಳಿಂದ ಶಿಥಿಲಗೊಂಡು ಸೋರುತ್ತಿರುವ ದೇವಳದ ಸುತ್ತುಪೌಳಿಯನ್ನು ನಿರ್ಮಿಸುವಲ್ಲಿ ಆಡಳಿತ ವಿಫಲವಾಗಿದೆ. ಎರಡು ವರ್ಷಗಳಿಂದ ಮಾಸ್ಟರ್ ಪ್ಲಾನ್ ಸಮಿತಿ ಸಭೆ ನಡೆಸಿಲ್ಲ, ದೇವಳಕ್ಕೆ ಸೇರಿದ ಹಲವಾರು ಅಂಗಡಿಗಳ ಕೋಟ್ಯಾಂತರ ರೂ. ಬಾಡಿಗೆ ವಸೂಲಾತಿಯಾಗಿಲ್ಲ, ದೇವಳದ ಖಾಯಂ ನೌಕರರಿಗೆ ಶಾಸನಬದ್ಧವಾಗಿ ದೊರೆಯಬೇಕಾದ ಶೇ.೧೭ ಮಧ್ಯಾಂತರ ಪರಿಹಾರವನ್ನು ದೊರಕಿಸುವಲ್ಲಿ ಆಡಳಿತ ಸಮಿತಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ತಾ.ಪಂ. ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಮರಿಲ್, ಶಿವರಾಮ ರೈ, ಲಕ್ಷ್ಮೀಶ ಗಬ್ಬಲಡ್ಕ, ಮೋಹನದಾಸ ರೈ, ಪವನ್ ಕುಮಾರ್, ಸೌಮ್ಯ, ಭಾರತಿ, ಶೇಷಕುಮಾರ ಶೆಟ್ಟಿ, ಮಾಧವ ದೇವರಗದ್ದೆ, ಗೋಪಾಲಕೃಷ್ಣ ಭಟ್, ಮನೋಜ್ ಕೈಕಂಬ, ಸುಬ್ರಹ್ಮಣ್ಯ ರಾವ್, ರತನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *