Ad Widget .

ಕಡಬ:ರಸ್ತೆ ಸಂಪರ್ಕ ಇಲ್ಲದೆ ಸಮಸ್ಯೆ; ಅನಾರೋಗ್ಯ ಪೀಡಿತ ಮಹಿಳೆಯನ್ನು ಹೊತ್ತುಯ್ಯಬೇಕಾದ ಅನಿವಾರ್ಯತೆ !

ಸಮಗ್ರ ನ್ಯೂಸ್: ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯೋರ್ವರ ಮನೆಗೆ ಹೋಗಲು ಸಮರ್ಪಕ ರಸ್ತೆ ಇಲ್ಲದೇ ಇರುವುದರಿಂದ ಮಹಿಳೆಯನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಪ್ರಕರಣವೊಂದು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಇಚ್ಲಂಪಾಡಿ ಗ್ರಾಮದ ಕೆರ್ನಡ್ಕ ನಿವಾಸಿ ಕೆ.ಗೋಪಾಲನ್ ಎಂಬವರ ಪತ್ನಿ ಸಾವಿತ್ರಿ(69) ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಹೊತ್ತುಕೊಂಡೇ ಮನೆಯವರು ಆಸ್ಪತ್ರೆಗೆ ಸಾಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೊರಮೇರು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿಯಾಗಿರುವ ಸಾವಿತ್ರಿ ಅವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಿನ ಬಿಟ್ಟು ದಿನ ಡಯಾಲಿಸಿಸ್‌ಗೆ ಹೋಗಬೇಕಾಗಿದೆ.

Ad Widget . Ad Widget .

ಸಾವಿತ್ರಿ ಅವರ ಮನೆಗೆ ಹೋಗಲು ರಸ್ತೆ ಇಲ್ಲ. ಇಚ್ಲಂಪಾಡಿ – ಪೆರಿಯಶಾಂತಿ ಡಾಮಾರು ರಸ್ತೆಯ ಕೆರ್ನಡ್ಕ ಎಂಬಲ್ಲಿಂದ ಇವರ ಮನೆಯು ೨೫೦ ಮೀ.ದೂರದಲ್ಲಿದೆ. ಈ ಪೈಕಿ ೧೦೦ ಮೀ.ನಷ್ಟು ದೂರ ವಾಹನ ಸಂಚಾರಕ್ಕೆ ಮಣ್ಣಿನ ರಸ್ತೆಯಿದ್ದು ಅಲ್ಲಿಂದ ೧೫೦ ಮೀ.ನಷ್ಟು ದೂರ ಕಾಲು ದಾರಿಯಲ್ಲಿ ಸಾಗಬೇಕಾಗಿದೆ. ಈ ಕಾಲು ದಾರಿಯ ಎರಡೂ ಬದಿಯೂ ಖಾಸಗಿಯವರ ತೋಟವಿದೆ. ಇಲ್ಲಿ ವಾಹನ ಸಂಚಾರಕ್ಕೆ ಬೇಕಾದಷ್ಟು ರಸ್ತೆ ಇಲ್ಲದೇ ಇರುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಾವಿತ್ರಿ ಅವರನ್ನು ಅವರ ಮಗ ಸತೀಶ್‌ ಅವರು ಅಸುಪಾಸಿನವರ ಸಹಕಾರದೊಂದಿಗೆ ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಇಲ್ಲಿ ಸಾವಿತ್ರಿ ಅವರ ಮನೆ ಮಾತ್ರ ಇದ್ದು ರಸ್ತೆ ಸಂಪರ್ಕ ಕಲ್ಪಿಸುವಂತೆ ಗ್ರಾಮ ಪಂಚಾಯತ್‌ಗೆ ಮನವಿಯೂ ಮಾಡಿದ್ದಾರೆ. ಆದರೆ ರಸ್ತೆ ಸಮಸ್ಯೆಗೆ ಪರಿಹಾರ ಸಿಗದೇ ಇರುವುದರಿಂದ ಇದೀಗ ಅನಾರೋಗ್ಯ ಪೀಡಿತರಾಗಿರುವ ಸಾವಿತ್ರಿ ಅವರನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿ ಮನೆಯವರಿಗೆ ಬಂದೊದಗಿದೆ. ಸಾವಿತ್ರಿ ಅವರನ್ನು ಚಯರ್‌ವೊಂದರಲ್ಲಿ ಕುಳ್ಳಿರಿಸಿ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ಯುವ ದೃಶ್ಯವೊಂದು ಈಗ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *