Ad Widget .

ಬಂಟ್ವಾಳ: ಪೊಲೀಸರ ಮೇಲೆಯೇ ನೈತಿಕ ಪೊಲೀಸ್ ಗಿರಿ; ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಅವಾಚ್ಯ ಪದಗಳಿಂದ ಬೈದು, ಅವರ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ತುಂಬೆ ನಿವಾಸಿಗಳಾದ ಮನೀಶ್ ಮತ್ತು ಮಂಜುನಾಥ್ ಆರೋಪಿಗಳು.

Ad Widget . Ad Widget .

‘ಪೊಲೀಸ್‌ ಹಾಗೂ ಅವರ ಜೊತೆಗಿದ್ದ ಮಹಿಳೆಯರು ಬೇರೆಬೇರೆ ಧರ್ಮಕ್ಕೆ ಸೇರಿದವರಾಗಿರಬಹುದು ಎಂದು ಭಾವಿಸಿ, ಆರೋಪಿಗಳು ವಿಚಾರಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Ad Widget . Ad Widget .

ಗುರುವಾರ ರಾತ್ರಿ ಪೊಲೀಸ್ ಸಿಬ್ಬಂದಿ ಕುಮಾರ್ ಅವರು, ಪತ್ನಿ ಮತ್ತು ನಾದಿನಿ ಜತೆ ಬಿ.ಸಿ. ರೋಡ್‌ನಲ್ಲಿರುವ ವಸತಿಗೃಹಕ್ಕೆ ಹೋಗುತ್ತಿದ್ದರು. ಈ ವೇಳೆ ಇವರನ್ನು ಹಿಂಬಾಲಿಸಿಕೊಂಡು ಹೋದ ಆರೋಪಿಗಳು, ಕುಮಾರ್ ಅವರು ಪತ್ನಿ ಮತ್ತು ನಾದಿನಿಯನ್ನು ವಸತಿಗೃಹದಲ್ಲಿ ಬಿಟ್ಟು ವಾಪಸ್ ಬರುತ್ತಿದ್ದಾಗ ಅಡ್ಡಗಟ್ಟಿ, ‘ಯುವತಿಯರೊಂದಿಗೆ ನಿನಗೇನು ಕೆಲಸ’ ಎಂದು ಪ್ರಶ್ನಿಸಿದ್ದರು. ತಾವು ಪೊಲೀಸ್ ಎಂದು ಕುಮಾರ್ ಹೇಳಿಕೊಂಡರೂ, ‘ನೀನು ಪೊಲೀಸ್ ಅಲ್ಲ, ಅವಳು ನಿನ್ನ ಪತ್ನಿಯೂ ಅಲ್ಲ’ ಎಂದು ಹೇಳಿ ವಾಗ್ವಾದಕ್ಕೆ ಇಳಿದಿದ್ದರು.

ಇದನ್ನು ಕಂಡು ಅಲ್ಲಿಗೆ ಬಂದ ಕುಮಾರ್‌ ಅವರ ಪತ್ನಿಯೊಂದಿಗೆ ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿವರಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಕಲಂ 341, 504, 354(ಡಿ), 354(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *