Ad Widget .

ಬ್ಯಾಂಕ್ ಗ್ರಾಹಕರೇ ಗಮನಿಸಿ ʻಆಗಸ್ಟ್ʼ ತಿಂಗಳ ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿ

ಸಮಗ್ರ ನ್ಯೂಸ್: ಆಗಸ್ಟ್ ತಿಂಗಳು ಪ್ರಾರಂಭವಾಗುತ್ತಿದೆ ಮತ್ತು ಪ್ರತಿ ತಿಂಗಳಂತೆ ಈ ತಿಂಗಳೂ ಬ್ಯಾಂಕ್‌ಗಳಲ್ಲಿ ಅಧಿಕೃತ ರಜಾದಿನಗಳು ಇರುತ್ತವೆ ಎಂದು ಎಲ್ಲರೂ ಯೋಚಿಸುತ್ತಿರುತ್ತಾರೆ. ದೇಶದಾದ್ಯಂತ ಸೆಂಟ್ರಲ್ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ 2023 ರ ಬ್ಯಾಂಕ್ ಹಾಲಿಡೇಸ್ ಪಟ್ಟಿಯ ಪ್ರಕಾರ, ಆಗಸ್ಟ್‌ ತಿಂಗಳಲ್ಲಿ ಒಟ್ಟು 14 ದಿನ (ಬ್ಯಾಂಕ್ ರಜಾ) ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

Ad Widget . Ad Widget .

ಇದು ಹಬ್ಬಗಳ ರಜಾದಿನಗಳು ಮತ್ತು ವಾರಾಂತ್ಯದ ರಜಾದಿನಗಳು ಹಾಗೇ ಇತರ ಯಾವುದೇ ರೀತಿಯ ಸಂದರ್ಭಗಳ ರಜೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಪ್ರತಿ ರಾಜ್ಯಗಳು ತಮ್ಮದೇ ಆದ ಅಧಿಕೃತ ರಜಾದಿನಗಳನ್ನು ಹೊಂದಿವೆ. ಆದರೆ ಆಗಸ್ಟ್ 15 ರಂದು, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

Ad Widget . Ad Widget .

ಆಗಸ್ಟ್ 2023 ರ ಬ್ಯಾಂಕ್ ರಜಾದಿನಗಳು

ಆಗಸ್ಟ್ 8 (ಮಂಗಳವಾರ) – ಸಿಕ್ಕಿಂನ ಟೆಂಡಾಂಗ್ ಲ್ಹೋ ರಮ್ ಫಾತ್‌ನಲ್ಲಿ ನ ಬ್ಯಾಂಕ್ ಗಳು ರಜೆ.
ಆಗಸ್ಟ್ 15 (ಮಂಗಳವಾರ) – ಸ್ವಾತಂತ್ರ್ಯ ದಿನದಂದು ದೇಶಾದ್ಯಂತ ಬ್ಯಾಂಕುಗಳಿಗೆ ರಜೆ.
ಆಗಸ್ಟ್ 16 (ಬುಧವಾರ) – ಪಾರ್ಸಿ ಹೊಸ ವರ್ಷ, ಮಹಾರಾಷ್ಟ್ರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ 18 (ಶುಕ್ರವಾರ) – ಶ್ರೀಮಂತ ಶಂಕರದೇವ ತಿಥಿ, ಅಸ್ಸಾಂನಲ್ಲಿ ಬ್ಯಾಂಕುಗಳು ರಜೆ.
ಆಗಸ್ಟ್ 28 (ಸೋಮವಾರ) – ಮೊದಲ ಓಣಂ – ಕೇರಳದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ 29 (ಮಂಗಳವಾರ) – ತಿರುವೋಣಂ – ಕೇರಳದಲ್ಲಿ ಬ್ಯಾಂಕುಗಳಿಗೆ ರಜೆ.
ಆಗಸ್ಟ್ 30 (ಬುಧವಾರ) – ರಕ್ಷಾ ಬಂಧನ – ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ರಕ್ಷಾ ಬಂಧನವನ್ನು ಆಗಸ್ಟ್ 30 ರಂದು ಆಚರಿಸಲಾಗುತ್ತದೆ, ಆದ್ದರಿಂದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ 31 (ಗುರುವಾರ) – ರಕ್ಷಾ ಬಂಧನದ ಸಂದರ್ಭದಲ್ಲಿ, ಶ್ರೀ ನಾರಾಯಣ ಗುರು ಜಯಂತಿ, ಪಾಂಗ್-ಲಬ್ಸೋಲ್, ರಕ್ಷಾ ಬಂಧನವು ಉತ್ತರಾಖಂಡ, ಉತ್ತರ ಪ್ರದೇಶ, ಕೇರಳ ಮತ್ತು ಅಸ್ಸಾಂ ಸೇರಿದಂತೆ ದೇಶದ ಇತರ ಹಲವು ರಾಜ್ಯಗಳಲ್ಲಿ ರಜಾದಿನವಾಗಿರುತ್ತದೆ.

ವಾರಾಂತ್ಯದ ರಜೆಗಳು

ಆಗಸ್ಟ್ 6 – ಮೊದಲ ಭಾನುವಾರ
ಆಗಸ್ಟ್ 12 – ಎರಡನೇ ಶನಿವಾರ
ಆಗಸ್ಟ್ 13 – ಎರಡನೇ ಭಾನುವಾರ
ಆಗಸ್ಟ್ 20 – ಮೂರನೇ ಭಾನುವಾರ
ಆಗಸ್ಟ್ 26 – ನಾಲ್ಕನೇ ಶನಿವಾರ
ಆಗಸ್ಟ್ 27 – ನಾಲ್ಕನೇ ಭಾನುವಾರ

Leave a Comment

Your email address will not be published. Required fields are marked *