ಸಮಗ್ರ ನ್ಯೂಸ್: ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಅನ್ನೋದನ್ನ ಮೊದಲು ಖಚಿತಪಡಿಸಿಕೊಳ್ಳಿ. ಮೊಬೈಲ್ ಸಂಖ್ಯೆಯನ್ನ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವುದರಿಂದ ನೀವು ಅನೇಕ ಸೌಲಭ್ಯಗಳನ್ನು ಪಡೆಯಬಹುದು. ನಂತರ ಮೊಬೈಲ್’ನಲ್ಲಿಯೇ ಆಧಾರ್’ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ಪಡೆಯುತ್ತೀರಿ.
ಇತ್ತೀಚಿನ ದಿನಗಳಲ್ಲಿ ನೀವು ಅನೇಕ ರೀತಿಯ ಆನ್ಲೈನ್ ಸೇವೆಗಳ ಲಾಭವನ್ನು ಪಡೆಯಲು ಅಗತ್ಯವಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಆಧಾರ್’ಗೆ ಲಿಂಕ್ ಮಾಡಿರಬೇಕು . ಇನ್ನು ನೀವು ಯಾವುದೇ ಆಧಾರ್ ಸಂಬಂಧಿತ ಸೇವೆಗಳನ್ನು ಬಳಸಿದ್ರೆ, ನಿಮ್ಮ ಮೊಬೈಲ್ ಗೆ ಒಟಿಪಿಯನ್ನ ಕಳುಹಿಸಲಾಗುತ್ತದೆ. ಅದಕ್ಕಾಗಿ ನೀವು ಮೊಬೈಲ್ ಸಂಖ್ಯೆಯನ್ನ ಆಧಾರ್ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ. ಹಾಗಿದ್ರೆ, ನಿಮ್ಮ ಆಧಾರ್ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ಯಾ ಅನ್ನೋದನ್ನ ತಿಳಿಯೋದು ಹೇಗೆ.? ಇಲ್ಲಿದೆ…
ಮೊದಲು ನೀವು ಮೊಬೈಲ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಅಧಿಕೃತ ವೆಬ್ಸೈಟ್ ಗೆ ಹೋಗಿ https://uidai.gov.in/en/my-aadhaar/avail-aadhaar-services.html. ನಂತರ ಮುಖಪುಟದಲ್ಲಿ ನೀವು ಅನೇಕ ಆಯ್ಕೆಗಳನ್ನ ನೋಡುತ್ತೀರಿ, ಅದರಲ್ಲಿ ಮೈ ಆಧಾರ್ ಅಡಿಯಲ್ಲಿ ಆಧಾರ್ ಸೇವೆಗಳ ಆಯ್ಕೆ ಮೇಲೆ ಕ್ಲಿಕ್ ಮಾಡಿ.ತದನಂತರ ನೀವು ಆಧಾರ್ ಸಂಖ್ಯೆಯನ್ನ ಪರಿಶೀಲಿಸುವ ಆಯ್ಕೆಯನ್ನು ಆಯ್ಕೆ ಮಾಡಬೇಕು. ನಂತರ ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ, ಅದರಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಬೇಕಾಗುತ್ತದೆ.
ಇದಾದ ಬಳಿಕ ಕೆಳಗೆ ನೀಡಲಾದ ಪ್ರೊಸೀಡ್ ಮತ್ತು ವೆರಿಫೈ ಆಧಾರ್ ಬಟನ್ ಆಯ್ಕೆ ಮಾಡಿ. ಈಗ ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ, ಅದರಲ್ಲಿ ನೀವು ಆಧಾರ್’ನ ಸಂಪೂರ್ಣ ಸ್ಥಿತಿಯನ್ನ ನೋಡುತ್ತೀರಿ. ಇದರೊಂದಿಗೆ, ಮೊಬೈಲ್ ಸಂಖ್ಯೆಯನ್ನು ನಿಮ್ಮ ಆಧಾರ್’ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು.