Ad Widget .

ಗೃಹಲಕ್ಷ್ಮಿ ಯೋಜನೆಯ 2000 ರೂ ಆಗಸ್ಟ್ 17 ಕ್ಕೆ ಯಜಮಾನಿ ಖಾತೆಗೆ ಜಮಾ| ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000ರೂ ನೇರವಾಗಿ ಜಮೆಯಾಗಳಿದೆ.

Ad Widget . Ad Widget .

ಆಗಸ್ಟ್ 17ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಯೋಜನೆಯನ್ನು ಬೆಳಗಾವಿಯಲ್ಲಿ ಉದ್ಘಾಟಿಸಲಿದ್ದಾರೆ. ರಾಜ್ಯದ ಯಜಮಾನಿ ಮಹಿಳೆಯರು ಬಹು ನಿರೀಕ್ಷೆಯಿಂದ ನೋಡುತ್ತಿರುವಂತ ಗೃಹಲಕ್ಷ್ಮಿ ಯೋಜನೆಯ ಹಣ ಅಂದಿನಿಂದ ಖಾತೆಗೆ ಜಮಾ ಆಗಲಿದೆ.

Ad Widget . Ad Widget .

ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿ ಮಹಿಳೆಯರು ನೋಂದಾಯಿಸಿಕೊಳ್ಳೋದಕ್ಕೆ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಜುಲೈ.20ರಂದು ಚಾಲನೆ ನೀಡಿದ್ದರು. ಆ ಬಳಿಕ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಕೂಡ ಆರಂಭಗೊಂಡಿತ್ತು. ಈಗಾಗಲೇ 70 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಸಹ ನೋಂದಾಯಿಸಿಕೊಳ್ಳುತ್ತಿದ್ದಾರೆ.

ಈ ನಡುವೆ ಗೃಹಲಕ್ಷ್ಮಿ ಯೋಜನೆಯ ಹಣ ಯಜಮಾನಿ ಮಹಿಳೆಯರ ಖಾತೆಗೆ ಯಾವಾಗ ಜಮಾ ಆಗಲಿದೆ ಎನ್ನುವ ಬಗ್ಗೆ ಅನೇಕ ಮಹಿಳೆಯರು ಕೇಳುತ್ತಿದ್ದರು. ಹಲವರನ್ನು ವಿಚಾರಿಸುತ್ತಿದ್ದರು. ಅವರಿಗೆ ಸಿಎಂ ಕಾರ್ಯಾಲಯದಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಮುಂದಿನ ತಿಂಗಳು ಯಜಮಾನಿ ಮಹಿಳೆಯರ ಖಾತೆಗೆ 2000ರೂ ಹಣ ಜಮೆಯಾಗುತ್ತದೆ .

Leave a Comment

Your email address will not be published. Required fields are marked *