ಸಮಗ್ರ ನ್ಯೂಸ್: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ವಾಶ್ ರೂಂ ನಲ್ಲಿ ನಡೆದಿದೆ ಎನ್ನಲಾದ ವಿಡಿಯೋ ರೆಕಾರ್ಡಿಂಗ್ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಸದ್ಯ ಸ್ಥಳೀಯ ಶಾಸಕ ಯಶಪಾಲ್ ಸುವರ್ಣ ಹಾಗೂ ಸಂಘಟನೆಗಳ ಒತ್ತಡ ಮತ್ತು ಪ್ರತಿಭಟನೆಗಳ ಕಾರಣದಿಂದ ಉಡುಪಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಮೂವರು ವಿದ್ಯಾರ್ಥಿನಿಯರ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಸದ್ಯ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಮೂವರು ಆರೋಪಿ ವಿದ್ಯಾರ್ಥಿನಿಯರಿಗೆ ಷರತ್ತಬದ್ಧ ಜಾಮೀನು ಮಂಜೂರು ಮಾಡಿದೆ. ಒಟ್ಟಾರೆ ಈ ಪ್ರಕರಣ ಕೋಮುಬಣ್ಣ ಪಡೆದುಕೊಂಡಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಬಿಜೆಪಿ ಮತ್ತು ಅದರ ಇನ್ನಿತರ ಸಂಘಟನೆಗಳು ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಜೊತೆಗೆ ಮಹಿಳಾ ಸಂಘಟನೆಗಳು ಕೈ ಜೋಡಿಸಿದ್ದು ಸಂತ್ರಸ್ತ ಯುವತಿಯರಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ. ಆದರೆ ಇಂತಹುದೇ ನ್ಯಾಯಕ್ಕಾಗಿ ಆಕೆ ಒಬ್ಬಳು ಹನ್ನೆರಡು ವರ್ಷಗಳಿಂದ ಕೂಗಿದರೂ ಇದೇ ಬಿಜೆಪಿಗೆ ಅದು ಬೇಕಾಗಿಲ್ಲ.
ಹೌದು, ಉಜಿರೆಯ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಗೌಡ ಅತ್ಯಾಚಾರ, ಕೊಲೆ ಬಳಿಕ ಸಾಕ್ಷಿನಾಶ, ನಿರಪರಾಧಿಗೆ 11ವರ್ಷ ಜೈಲು ಇದರ ಬಗ್ಗೆ ಬಿಜೆಪಿ ಅಥವಾ ಅದರ ಅಂಗಸಂಸ್ಥೆಗಳಿಗೆ ಹೋರಾಡಲು ಮನಸ್ಸಿಲ್ಲ. ನ್ಯಾಯಕ್ಕಾಗಿ ಅಲವತ್ತುಕೊಂಡರೂ ಆ ಕುಟುಂಬದ ಕಣ್ಣೀರು ಒರೆಸಲು ದೇವದುರ್ಲಭ ನಾಯಕರು ಮುಂದೆ ಬರದಿರುವುದು ವಿಷಾಧನೀಯವಲ್ಲವೇ?
ಮಾಡದೇ ಇರುವ ತಪ್ಪಿಗೆ ವರ್ಷಗಟ್ಟಲೆ ಮುದ್ದೆ ಮುರಿದ ಸಂತೋಷ್ ರಾವ್ ಮನೆಗೆ ಯಾರೊಬ್ಬರೂ ಹೋಗಿ ಸಾಂತ್ವನ ಹೇಳಿದ್ದಾರಾ? ಪ್ರಕರಣದಲ್ಲಿ ಕೊಂದವರಾರು ಎಂದು ತಿಳಿಯದೇ ಕಂಗಾಲಾಗಿರುವ ಸೌಜನ್ಗ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಯಾವ ರಾಜಕಾರಣಿಯೂ ಮುಂದೆ ಬಂದಿಲ್ಲ, ಹೋರಾಟ ಮಾಡಿಲ್ಲ.
ಮಾತಾಡಿದರೆ ಮುತ್ತೇ ಉದುರಿ ಹೋದೀತೆಂಬ ಭಯದಲ್ಲಿ(!) ನಾಯಕರು ಮೌನವಾಗಿರುವುದು ರಾಜಕಾರಣದ ರಾಕ್ಷಸೀತನ ಪ್ರವೃತ್ತಿಯಲ್ಲದೆ ಮತ್ತಿನ್ನೇನು? ಉಡುಪಿಯಲ್ಲಿ ನಡೆಸಿದ ಹೋರಾಟ ರೋಷಾವೇಶ ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಏಕಿಲ್ಲ? ಉತ್ತರಕ್ಕಾಗಿ ಜನತೆ ಕಾಯುತ್ತಿದ್ದಾರೆ.
ಬಿಜೆಪಿ ಅನ್ನೋದು ಧರ್ಮದ ಕಾವುಲುಗಾರ ಹೊರತು ಯಜಮಾನ ಅಲ್ಲ, ಒಂದೇ ಧರ್ಮಅಲ್ಲಿ ಆಗಿರೋ ಅನ್ಯಾಯಕ್ಕೆ ಹಿಂದೂಗಳಗಿ ನಾವೂ ಮಾತಾಡಬೇಕು ಕಾವುಲುಗಾರ ಅಲ್ಲ ..