Ad Widget .

ಕೊಟ್ಟಿಗೆಹಾರ: ಬಾಳೂರು ಗ್ರಾ.ಪಂ.ಅಧ್ಯಕ್ಷರಾಗಿ ಬಿ.ಬಿ.ಮಂಜುನಾಥ್ ಆಯ್ಕೆ

ಸಮಗ್ರ ನ್ಯೂಸ್: ಬಾಳೂರು ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿ.ಬಿ.ಮಂಜುನಾಥ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷೆಯಾಗಿ ಕೆ.ಆರ್.ಗೀತಾ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಕೆಡಿಪಿ ಸದಸ್ಯ ಬಿ.ಎಂ.ಭರತ್ ಮಾತನಾಡಿ ‘ಗ್ರಾಮದ ಏಳಿಗೆಗಾಗಿ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಅಧ್ಯಕ್ಷ ರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕೈಜೋಡಿಸಿದರೆ ಗ್ರಾಮಾಭಿವೃದ್ದಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ವ ಗ್ರಾಮಸ್ಥರು ಸಹಕಾರ ನೀಡಬೇಕು’ ಎಂದರು.

Ad Widget . Ad Widget .

ನೂತನ ಅಧ್ಯಕ್ಷ ಬಿ.ಬಿ.ಮಂಜುನಾಥ್ ಮಾತನಾಡಿ ಪಕ್ಷತೀತಾ ನೆಲೆಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಹಂತಹಂತವಾಗಿ ಕೈಗೊಂಡು ಗ್ರಾಮಾಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಹಾಗೆಯೇ ನೂತನ ಅಧ್ಯಕ್ಷ ಬಿ.ಬಿ.ಮಂಜುನಾಥ್ ಅವರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹಾಗೂ ಅಭಿಮಾನಿಗಳು ಅಭಿನಂದಿಸಿದರು.

Ad Widget . Ad Widget .

ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಆರ್.ಹೇಮಂತ್ ರಾಜ್ , ಪ್ರಭಾರಿ ಪಿಡಿಒ ಯತೀಶ್ ಕುಮಾರ್, ಬಿಜೆಪಿ ಹೋಬಳಿ ಘಟಕ ಅಧ್ಯಕ್ಷ ಎಂ.ಎಲ್.ವಿಜೇಂದ್ರ, ಶರಣ್, ಸದಸ್ಯರಾದ ಮನೋಜ್, ಪ್ರಕಾಶ್, ಶ್ವೇತಾ, ಜಯಶ್ರೀರಮೇಶ್, ತಾ.ಪಂ.ಮಾಜಿ ಅಧ್ಯಕ್ಷೆ ಪ್ರಮೀಳ ಮಂಜಯ್ಯ, ಸುಂಕಸಾಲೆ ಗ್ರಾ.ಪಂ.ಮಾಜಿ ಅಧ್ಯಕ್ಷ ಡಿ.ವೈ. ಮಹೇಶ್, ಶಶಿಧರ್ ಜಾವಳಿ, ರಘುಪತಿ, ಬಿ.ಎಸ್.ಕಲ್ಲೇಶ್, ಟಿ.ಎಂ.ಗಜೇಂದ್ರ, ಶಾಮಣ್ಣ ಬಣಕಲ್, ಜಗದೀಶ್, ಸತೀಶ್ ಬಾಳೂರು, ಸಂಜಯ್ ಗೌಡ, ಜೈಪಾಲ್ ಬಿದರಹಳ್ಳಿ, ಮನೋಜ್, ಅಭಿಲಾಷ್,ಚಂದನ್ ಕಾಮತ್, ಪರೀಕ್ಷಿತ್ ಜಾವಳಿ, ವೇಣುಗೋಪಾಲ್ ಪೈ,ಮತ್ತಿತರರು ಉಪಸ್ಥಿರಿದ್ದರು.

Leave a Comment

Your email address will not be published. Required fields are marked *