Ad Widget .

ಅರಣ್ಯದೊಳಗೆ ಯುವತಿ ಜೊತೆ ಪೊಲೀಸ್ ಕಾನ್ಸ್‌ಟೇಬಲ್| ಕ್ಯಾಮೆರಾ ಕಣ್ಣಲ್ಲಿ ವಿಡಿಯೋ ಲಾಕ್

ಸಮಗ್ರ ನ್ಯೂಸ್: ಪೊಲೀಸ್​ ಕಾನ್ಸ್​ಟೆಬಲ್​ ಒಬ್ಬರು ಯುವತಿಯ ಜತೆ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿರುವ ವಿವಾದಾತ್ಮಕ ವಿಡಿಯೋ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಈ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.

Ad Widget . Ad Widget .

ಕಾನ್ಸ್​ಟೆಬಲ್​ ಹೆಸರು ರಾಜೇಂದ್ರನ್​. ಇವರು ಯುವತಿಯೊಬ್ಬಳ ಜತೆ ಅರಣ್ಯದ ಒಳಗಡೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇದು ಸಾರ್ವಜನಿಕರಲ್ಲಿ ಮತ್ತು ಪೊಲೀಸ್ ಇಲಾಖೆಯೊಳಗೆ ವ್ಯಾಪಕವಾದ ಊಹಾಪೋಹ ಮತ್ತು ಕಳವಳಕ್ಕೆ ಕಾರಣವಾಗಿದೆ. ಅಲ್ಲದೆ, ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ಮೇಲೆಯೂ ಪೇದೆ ಹಲ್ಲೆ ಮಾಡಿರುವುದು ಸಹ ವಿಡಿಯೋದಲ್ಲಿದೆ.

Ad Widget . Ad Widget .

ಪೇದೆ ರಾಜೇಂದ್ರನ್​, ತೂತುಕುಡಿ ಜಿಲ್ಲೆಯ ವಿಲತ್ತಿಕುಲಂ ಬಳಿಯ ಕೆ. ಸುಂದರೇಶ್ವರಪುರಂ ಗ್ರಾಮದ ನಿವಾಸಿ. 2009ರಲ್ಲಿ ಪೊಲೀಸ್​ ಸೇವೆಗೆ ಸೇರಿದರು. ಹಲವು ರೀತಿಯ ಜವಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇದೀಗ ಅವರ ವಿಡಿಯೋ ಫೇಸ್​ಬುಕ್​, ವಾಟ್ಸ್​ಆಯಪ್​ನಂತಹ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ವಿಡಿಯೋದಲ್ಲಿ ಪೇದೆ ರಾಜೇಂದ್ರನ್​ ಟೀ-ಶರ್ಟ್​ ಮತ್ತು ಲುಂಗಿ ಧರಿಸಿದ್ದಾರೆ ಮತ್ತು ಜತೆಗಿರುವ ಯುವತಿ ಚೂಡಿದಾರ್​ ಧರಿಸಿದ್ದು, ಮುಖ ಕಾಣದಂತೆ ದುಪ್ಪಟ್ಟದಿಂದ ಮುಚ್ಚಿಕೊಂಡಿದ್ದಾರೆ. ಯಾರೋ ನಮ್ಮನ್ನು ವಿಡಿಯೋ ರೆಕಾರ್ಡ್​ ಮಾಡುತ್ತಿದ್ದಾರೆ ಎಂದು ಗೊತ್ತಾದ ಬಳಿಕ ಇಬ್ಬರು ಭಯಭೀತರಾಗಿರುವಂತೆ ಕಾಣುತ್ತದೆ. ಅಲ್ಲದೆ, ಪೇದೆ ರಾಜೇಂದ್ರನ್​ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವುದು ಕೂಡ ರೆಕಾರ್ಡ್​ ಆಗಿದೆ.

ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಜನತೆ ಆಗ್ರಹಿಸಿದ್ದಾರೆ ಮತ್ತು ಕಾನ್ಸ್​ಟೆಬಲ್‌ ನಡೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಪೊಲೀಸ್ ಇಲಾಖೆಯು, ರಾಜೇಂದ್ರನ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

Leave a Comment

Your email address will not be published. Required fields are marked *