Ad Widget .

ಶಕ್ತಿ ಯೋಜನೆ ಎಫೆಕ್ಟ್​​| ಆದಾಯ ಹೆಚ್ಚಿಸಲು KSRTC ಮಾಸ್ಟರ್ ಪ್ಲಾನ್!

ಸಮಗ್ರ ನ್ಯೂಸ್: ಶಕ್ತಿ ಯೋಜನೆಯ ಎಫೆಕ್ಟ್ ಆದಾಯದ ಮೂಲ ಹೆಚ್ಚಿಸಲು ಕೆಎಸ್​ಆರ್​ಟಿಸಿ ಮಾಸ್ಟರ್ ಪ್ಲಾನ್ ಮಾಡಿದ್ದು, ಬಸ್​​ಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನಲೆ ಒಪ್ಪಂದದ ಮೇರೆಗೆ ಬಸ್ ದರ ಪರಿಷ್ಕರಣೆ ಮಾಡಲಾಗಿದೆ.

Ad Widget . Ad Widget .

ಬಸ್​ ದರ ಪರಿಷ್ಕರಣೆ ಮಾಡಿ KSRTC ನಿಗಮ ಆದೇಶ ಹೊರಡಿಸಿದೆ. ಒಪ್ಪಂದದ ಮೇರೆಗೆ ಸಂಚಾರ ಮಾಡುವ KSRTC ಸಾಮಾನ್ಯ ಬಸ್ ಗಳ ದರ ಏರಿಕೆ ಮಾಡಲಾಗಿದೆ. ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ 7 ವಿವಿಧ ರೀತಿಯ ಒಪ್ಪಂದದ ಮೇರೆಗೆ ಸಂಚಾರ ಮಾಡುವ ಬಸ್​​ಗಳ ದರ ಪರಿಷ್ಕರಣೆ ಮಾಡಲಾಗಿದೆ.

Ad Widget . Ad Widget .

ಪರಿಷ್ಕೃತ ದರ ಆ. 1ರಿಂದ ಜಾರಿ ಆಗಲಿದ್ದು ಈ ಆದೇಶಕ್ಕೂ ಮುನ್ನ ಬುಕ್ಕಿಂಗ್ ಮಾಡಿರುವ ಒಪ್ಪಂದದ ಬಸ್​​​ಗಳಿಗೆ ಹಳೆಯ ದರ ಮುಂದುವರಿಕೆ ಮಾಡಲಾಗುತ್ತದೆ. ಹೊಸ ಆದೇಶದ ಪ್ರಕಾರ ಮೈಸೂರು ವ್ಯಾಪ್ತಿಯಲ್ಲಿ ಗಂಟೆಗಳ ಲೆಕ್ಕದಲ್ಲಿ ವಾಹನ ವ್ಯವಸ್ಥೆ ರದ್ದು ಮಾಡಲಾಗಿದೆ.

ಕರ್ನಾಟಕ ಸಾರಿಗೆ ಸಾಮಾನ್ಯ ಬಸ್​​ಗಳು ಪ್ರತಿ ಕಿ.ಮೀ. ಗೆ ರಾಜ್ಯದೊಳಗೆ 47 ರೂಪಾಯಿ ಹಾಗೂ ಅಂತರ ರಾಜ್ಯದಲ್ಲಿ ಪ್ರತಿ ಕಿ.ಮೀ. ಗೆ 50 ರೂಪಾಯಿ ನಿಗದಿ ಮಾಡಲಾಗಿದೆ. ಆಸನಗಳ ಸಂಖ್ಯೆ 55-57 ಇದ್ದು, ವಾರದ ಎಲ್ಲಾ ದಿನ ಒಂದೇ ದರ ನಿಗದಿಯಾಗಿದ್ದು, ಕನಿಷ್ಠ ದಿನಕ್ಕೆ 350 ಕಿ.ಮೀ. ನಿಗದಿಯಾಗಿದೆ.

ರಾಜಹಂಸ ಎಕ್ಸಿಕ್ಯೂಟಿವ್ ಬಸ್​ಗಳಲ್ಲಿ 36 ಆಸನಗಳನ್ನು ಹೊಂದಿದ್ದು, ರಾಜ್ಯದೊಳಗೆ 48 ರೂಪಾಯಿ ಹಾಗೂ ಅಂತರ್​ ರಾಜ್ಯದಲ್ಲಿ 53 ರೂಪಾಯಿಗಳನ್ನು ಪ್ರತಿ ಕಿ.ಮೀ. ನಿಗದಿ ಪಡಿಸಲಾಗಿದೆ. ವಾರದ ಎಲ್ಲಾ ದಿನ ಒಂದೇ ದರ ನಿಗದಿಯಾಗಿದ್ದು, ಕನಿಷ್ಠ ದಿನಕ್ಕೆ 350 ಕಿಮೀ ನಿಗದಿ ಮಾಡಲಾಗಿದೆ.

ರಾಜಹಂಸ ಬಸ್​ಗಳಲ್ಲಿ, 39 ಬಸ್​​ಗಳನ್ನು ಹೊಂದಿದ್ದು, ರಾಜ್ಯದೊಳಗೆ 51 ರೂಪಾಯಿ ಮತ್ತು ಅಂತರ್​ ರಾಜ್ಯದಲ್ಲಿ 55 ರೂಪಾಯಿ ನಿಗದಿ ಪಡಿಸಲಾಗಿದೆ. ವಾರದ ಎಲ್ಲಾ ದಿನ ಒಂದೇ ದರ ನಿಗದಿಯಾಗಿದ್ದು, ಕನಿಷ್ಠ ಕಿ.ಮೀ. ದಿನಕ್ಕೆ 350 ನಿಗದಿ ಮಾಡಲಾಗಿದೆ.

ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್ ಬಸ್​​ಗಳು 42 ಆಸನಗಳನ್ನು ಹೊಂದಿದ್ದು, ರಾಜ್ಯದೊಳಗೆ 45 ರೂಪಾಯಿ ನಿಗದಿ ಮಾಡಲಾಗಿದೆ. ದಿನಕ್ಕೆ ಕನಿಷ್ಠ 300 ಕಿಮೀ ನಿಗದಿ ಮಾಡಲಾಗಿದ್ದು, ವಾರದ ಎಲ್ಲಾ ದಿನ ಒಂದೇ ದರ ನಿಗದಿ ಮಾಡಲಾಗಿದೆ.

ಆಸನಗಳನ್ನು ಹೊಂದಿರುವ ಮಿನಿ ಬಸ್​ಗೆ ರಾಜ್ಯದ ಒಳಗೆ ಪ್ರತಿ ಕಿಲೋ ಮೀಟರ್​​ಗೆ 40 ರೂಪಾಯಿಯಂತೆ, ದಿನಕ್ಕೆ 300 ಕನಿಷ್ಠ ಕಿ.ಮೀ.ನಂತೆ ದರ ನಿಗದಿ ಪಡಿಸಲಾಗಿದೆ. 32 ಆಸನಗಳನ್ನು ಹೊಂದಿರುವ ನಾನ್ ಏಸಿ ಸ್ಲೀಪರ್ ಬಸ್​​ಗಳಿಗೆ ಪ್ರತಿ ಕಿಲೋಮೀಟರ್​​ಗೆ ರಾಜ್ಯದೊಳಗೆ 55 ರೂಪಾಯಿ, ಅಂತರ್​ ರಾಜ್ಯದಲ್ಲಿ 60 ರೂಪಾಯಿ ನಿಗದಿ ಮಾಡಲಾಗಿದ್ದು, ದಿನಕ್ಕೆ ಕನಿಷ್ಠ 400 ಕಿಲೋ ಮೀಟರ್​ ನಿಗದಿ ಪಡಿಸಲಾಗಿದೆ.

Leave a Comment

Your email address will not be published. Required fields are marked *