Ad Widget .

ಕಾಲೇಜು ವಾಶ್ ರೂಂನಲ್ಲಿ ವಿದ್ಯಾರ್ಥಿನಿಯರಿಂದ ವಿಡಿಯೋ ರೆಕಾರ್ಡ್ ಪ್ರಕರಣ| ಉಡುಪಿಯತ್ತ ಮಹಿಳಾ ಆಯೋಗ ಸದಸ್ಯೆ ಖುಷ್ಬೂ

ಸಮಗ್ರ ನ್ಯೂಸ್: ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರ ವಿಡಿಯೋವನ್ನು ವಿದ್ಯಾರ್ಥಿನಿಯರು ರೆಕಾರ್ಡ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲಿಸಲು ನಾನು ಉಡುಪಿಗೆ ತೆರಳುತ್ತಿದ್ದೇನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರು ಬುಧವಾರ ಹೇಳಿದ್ದಾರೆ.

Ad Widget . Ad Widget .

ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರಾದ ಶಬ್ನಾಜ್, ಅಲ್ಫಿಯಾ ಮತ್ತು ಅಲೀಮಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಘಟನೆಯು ಅತ್ಯಂತ ದುಃಖಕರ ಎಂದಿರುವ ಖುಷ್ಬೂ, ಬಾಲಕಿಯರು ವಾಶ್‌ರೂಮ್‌ನಲ್ಲಿ ತಮ್ಮ ಸಹವರ್ತಿಗಳ ವಿಡಿಯೋ ಚಿತ್ರೀಕರಿಸಿದ ವಿಷಯವನ್ನು ಪರಿಶೀಲಿಸಲು ಉಡುಪಿಗೆ ಹೋಗುತ್ತಿದ್ದೇನೆ. ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ತೊಡಗುವುದು ತುಂಬಾ ದುಃಖಕರ ವಿಚಾರ. ಮಹಿಳಾ ಆಯೋಗದ ಸದಸ್ಯೆಯಾಗಿ ಈ ವಿಷಯದ ಬಗ್ಗೆ ಪರಿಶೀಲಿಸುತ್ತೇನೆ ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತೇನೆ. ಪೊಲೀಸರನ್ನೂ ಭೇಟಿ ಮಾಡುತ್ತೇನೆ. ಮಹಿಳೆಯರ ಘನತೆಯ ಜೊತೆ ಯಾರೂ ಆಟವಾಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *