ಸಮಗ್ರ ನ್ಯೂಸ್: ನಾಲ್ಕು ದಿನಗಳ ಹಿಂದೆ ಭೀಕರ ಮಳೆಗೆ ನೆಟ್ ವರ್ಕ್ ಸಮಸ್ಯೆಗೆ ಸಿಲುಕಿದ್ದ ಹರಿಹರ ಕೊಲ್ಲಮೋಗ್ರ ಗ್ರಾಮಸ್ಥರಿಗೆ ಇಂದು ಉಸಿರು ಬಿಟ್ಟಂತಾಗಿದೆ. ಹರಿಹರ ಕೊಲ್ಲಮೊಗ್ರ ಕ್ಕೆ ಜು.25 ರಂದು ಪುತ್ತೂರು ಉಪ ವಿಭಾಗ ಅಧಿಕಾರಿ ಗಿರೀಶ್ ನಂದನ್ ಭೇಟಿ ನೀಡಿ BSNL ಅಧಿಕಾರಿಗಳಿಗೆ ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸುವಂತೆ ಸೂಚಿಸಿದರೂ, ಸ್ಪಂದಿಸದೆ ಅಧಿಕಾರ ದರ್ಪ ತೋರಿದ BSNL ಅಧಿಕಾರಿಗಳು ಇಂದು ಕೊನೆಗೂ ಹರಿಹರ ಹಾಗೂ ಕೊಲ್ಲಮೊಗ್ರಕ್ಕೆ ಬ್ಯಾಟರಿ ಅಳವಡಿಸಿದ್ದಾರೆ.
BSNL ಅಧಿಕಾರಿಗಳು ಕೊಲ್ಲಮೊಗ್ರ ಬರುತ್ತಿದ್ದಂತೆ ಜನರ ಆಕ್ರೋಶದ ಕಟ್ಟೆ ಒಡೆದು ದಿಗ್ಭಂಧನ ಹಾಕಿ BSNL ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಧ್ಯಾಹ್ನ ಸಮಯದಲ್ಲಿ ಕೊಲ್ಲಮೊಗ್ರ ಪೇಟೆಯಲ್ಲಿ ಸುಮಾರು ಮೂವತ್ತಕ್ಕಿಂತ ಅಧಿಕ ಸಾರ್ವಜನಿಕರು BSNL ನ ಮೂವರು ಅಧಿಕಾರಿಗಳನ್ನು ತಡೆದು ತರಾಟೆಗೆ ತೆಗೆದುಕೊಂಡರು.
ಉದಯ ಶಿವಾಲ ಮಾತನಾಡಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಗ್ರಾಮಕ್ಕೆ ಭೇಟಿ ನೀಡಿ ಪ್ರತಿಯೊಂದು ಮಾಹಿತಿ ಪಡೆಯುತ್ತಿದ್ದು ನಿಮ್ಮ ಇಲಾಖೆಯವರಿಗೆ ಸಾಕಷ್ಟು ಬಾರಿ ಕರೆ ಮಾಡಿ ಕೇವಲ ಒಂದು ಬ್ಯಾಟರಿ ಅಳವಡಿಸಿ ಕೊಡಿ, ಬ್ಯಾಟರಿ ಹಣ ನಾವು ನೀಡುತ್ತೇವೆ ಎಂದರು ಸ್ಥಳಕ್ಕೆ ಬಾರದೆ ನಿನ್ನೆಯಿಂದ ಕರೆಯು ಸ್ವೀಕರಿಸದೆ ಇರುವ ಕಾರಣ ತಿಳಿಸಿ ಎಂದು ಪ್ರಶ್ನಿಸಿದರು.
ನಿಮಗೆ ಒಬ್ಬ ಕೆ.ಎ.ಎಸ್ ಅಧಿಕಾರಿ ಹೇಳಿದರು ನಿಮಗೆ ಇಲ್ಲಿನ ಪರಿಸ್ಥಿತಿ ಅರ್ಥವಾಗುವುದಿಲ್ಲ ಮತ್ತೆ ನಿಮಗೆ ನಮ್ಮಂತ ಸಾಮಾನ್ಯ ಜನರು ಹೇಳಿ ಪ್ರಯೋಜನವೇನು ನಿಮ್ಮಲ್ಲಿ ಹಣ ಕೇಳಲಿಲ್ಲ ಇಲಾಖೆ ನಿಮಗೆ ನೀಡಿರುವ ಜವಾಬ್ದಾರಿ ಕೆಲಸ ಮಾಡಿ ಅಷ್ಟೇ ಸಾಕು ಎಂದು ಏರು ಧ್ವನಿಯಲ್ಲಿ ಹೇಳಿದರು. ಮಾಧ್ಯಮಗಳು ಇಷ್ಟು ವರದಿ ಪ್ರಸಾರ ಮಾಡಿದರು ನಿಮಗೆ ತಿಳಿಯುತ್ತಿಲ್ಲವೇ…? ನಮಗೆ ಇಂದು ನೆಟ್ವರ್ಕ್ ಸಮಸ್ಯೆ ಬಗೆಹರಿಸಿ ಬ್ಯಾಟರಿ ಅಳವಡಿಸಿ ಎಲ್ಲಾ ಸಮಸ್ಯೆ ಬಗೆಹರಿಸಿದ ನಂತರ ನಿಮಗೆ ತೆರಳಲು ಅವಕಾಶ ಸಮಸ್ಯೆ ಬಗೆಹರಿಯದೆ ಹೋದರೆ ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಕರೆ ಮಾಡಿ ನಿಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಎಂದು Bsnl ಅಧಿಕಾರಿಗಳ ಜೋತೆ ಹೇಳಿದರು.
ಗ್ರಾಮ ಒನ್ ಕೇಂದ್ರದ ಮುಂದೆ ನೆಟ್ವರ್ಕ್ ಇಲ್ಲದೆ ಸಾಲಾಗಿ ನಿಂತಿರುವ ಜನರನ್ನು ಕೂಡ ತೋರಿಸಿಕೊಟ್ಟರು. ಪರಿಸ್ಥಿತಿ ನೀವು ಗಮನಿಸಿ ಕಣ್ಣಮುಂದೆ ಕಾಣುತ್ತಿದೆ ಅಲ್ಲವೇ ಎಂದು ಹೇಳಿದರು. ಯಾವುದಕ್ಕೂ ಉತ್ತರಿಸದೆ ಮೌನವಹಿಸಿ ವಾಹನದಲ್ಲಿ ಕೂತ ಅಧಿಕಾರಿಗಳು ಕೊನೆಗೆ ಸಮಸ್ಯೆ ಬಗೆಹರಿಸಿಯೇ ನಾವು ತೆರಳುತ್ತೇವೆ ಎಂದು ತಿಳಿಸಿದರು. ನಂತರ ಕೆಲವೊಂದು ಸಮಸ್ಯೆಯನ್ನು ಬಗೆಹರಿಸಿ ಬ್ಯಾಕ್ ಆಪ್ ಬ್ಯಾಟರಿಗೆ ತಕ್ಷಣ ಮೇಲಾಧಿಕಾರಿಗಳಿಗೆ ಪತ್ರ ಬರೆದು ವ್ಯವಸ್ಥೆ ಮಾಡುವುದಾಗಿ BSNL ಅಧಿಕಾರಿ ಸುನಿಲ್ ತಿಳಿಸಿದರು. ಸಾರ್ವಜನಿಕರು ಆಕ್ರೋಶಗೊಂಡು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದರು. ಕೊನೆಗೆ ನೆಟ್ವರ್ಕ್ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ ಎಂದು ತಿಳಿದು ಬಂದಿದೆ.