Ad Widget .

ಬೆಳ್ತಂಗಡಿ: ಬಂತಡ್ಕ ದ ರಸ್ತೆಯ ಗೋಳು ಕೇಳುವವರು ಯಾರು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಶಿರ್ಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ರಸ್ತೆಗೆ ಸಂಚರಿಸುವಾಗ ಸಿಗುವಂತಹ ಬಂತಡ್ಕ ಪ್ರದೇಶದ 2 ಕಿಲೋಮಿಟರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸರಿಯಾದ ರೀತಿಯಲ್ಲಿ ರಸ್ತೆಗೆ ಕಾಂಗ್ರೆಟ್ ಹಾಗೂ ಒಳ ಚರಂಡಿ ಇಲ್ಲದೆ ಮಳೆಯ ನೀರು ರಸ್ತೆಯಲ್ಲಿ ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Ad Widget . Ad Widget .

ಸರಿಸುಮಾರು 70 ಅಧಿಕ ಮನೆಗಳಿವೆ 400 ರಿಂದ 500 ವರೆಗೆ ಜನ ಇರುವಪ್ರದೇಶ ದಿನ ನಿತ್ಯ ಸಂಚರಿಸುವ ನೂರಾರು ವಾಹನಗಳು ಹಾಗೂ ಜನಸಾಮಾನ್ಯರು, ಮಕ್ಕಳು ಸಂಚರಿಸುತ್ತಾರೆ. ರಸ್ತೆಯಲ್ಲಿ ಹೊಂಡ ಬಿದ್ದಿರುವುದರಿಂದ ಜನ ಸಾಮಾನ್ಯರಿಗೆ ಓಡಾಡಲು ಕಷ್ಟಕರವಾಗಿದೆ.

Ad Widget . Ad Widget .

25 ವರ್ಷಗಳಿಂದ ಬಂತಡ್ಕದ ಭಾಗದ ಜನರಿಗೆ ಸರಿಯಾದ ರೀತಿಯಲ್ಲಿ ಮೂಲಸೌಕರ್ಯ ಇಲ್ಲದೆ ಸಂಕಷ್ಟದಲ್ಲಿದ್ದಾರೆ ಆದರೂ ಸಕಾಲಕ್ಕೆ ಇದನ್ನು ದುರಸ್ತಿಗೊಳಿಸವ ಕಾರ್ಯ ಯಾರಿಂದಲೂ ಆಗುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ರಸ್ತೆ ಕಾಂಗ್ರೆಟ್ ಒಳಚರಂಡಿ ಆಗುತ್ತಾ ಎಂದು ಜನ ಕಾದುನೋಡಬೇಕಾಗಿದೆ.

Leave a Comment

Your email address will not be published. Required fields are marked *