Ad Widget .

ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಒಂದು ವರ್ಷ| ಇನ್ನೂ ಪತ್ತೆಯಾಗದ ನರರಾಕ್ಷಸರು| ಅನ್ಯಾಯದ ಹತ್ಯೆಗೆ ನ್ಯಾಯ ಸಿಕ್ಕೀತೇ?

ಸಮಗ್ರ ವಿಶೇಷ: ಕರಾವಳಿಯು ಶಾಂತಿ ಸೌಹಾರ್ದತೆಯ ತವರೂರಾಗುವುದು ಯಾವಾಗ ಎಂಬ ಕುತೂಹಲ ನಿರೀಕ್ಷೆ ಎಲ್ಲರಿಗೂ ಇದೆ. ಅದರಲ್ಲಿಯೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಅತೀ ಹೆಚ್ಚು ಅಕ್ಷರಸ್ಥರು ಇರುವ ಬುದ್ಧಿವಂತರ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಆದರೆ ಇಲ್ಲಿ ಯಾಕೆ ಪದೆ ಪದೇ ಮತೀಯ ಗಲಭೆ, ಘರ್ಷಣೆಗಳು, ಪ್ರತಿಕಾರದ ಕೊಲೆಗಳು ನಡೆಯುತ್ತಿವೆ ಎಂಬುವುದಕ್ಕೆ ಉತ್ತರ ಸಿಕ್ಕಿ ಲ್ಲ. ಆ ಉತ್ತರಗಳುವರಾಜಕೀಯ ಪಕ್ಷಗಳ ಬಳಿ ಇರಲು‌ ಸಾಧ್ಯವಿರಬಹುದೇನೊ. ಅಶಾಂತಿಗೆ ಅಂತ್ಯ ಹಾಡಿ ಶಾಂತಿ– ನೆಮ್ಮದಿಯ ದಿನಗಳನ್ನು ಮರಳಿ ತರುವ ಶಕ್ತಿಯೂ ಅವಕ್ಕೆ ಇದೆ. ಆದರೆ ಆ ಕೆಲಸವನ್ನು ಮಾಡುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಕೋಮು ಸಾಮರಸ್ಯ ಕದಡುವುದೇ ಬಹಳ ಇಷ್ಟ ಎಂಬಂತಿದೆ ಅವುಗಳ ನಡವಳಿಕೆ. ಆದರೆ ಅದಕ್ಕೆ ದುಬಾರಿ ಬೆಲೆ ತೆರುತ್ತಿರುವವರು ಅಮಾಯಕ ಜನಸಾಮಾನ್ಯರು. ನಿತ್ಯವೂ ಆತಂಕದಲ್ಲಿ ಬದುಕು ನೂಕಬೇಕಾದ ಅಸಹಾಯಕತೆ ಅವರದು. ಯಾವ ಕ್ಷಣದಲ್ಲಿ ಏನಾಗುತ್ತದೆಯೋ, ಯಾರ ದ್ವೇಷಕ್ಕೆ ಯಾರು ಬಲಿಯಾಗುತ್ತಾರೋ, ಅದರ ಪರಿಣಾಮ ಇನ್ಯಾರ ಮೇಲೆ ಆಗುತ್ತದೆಯೋ ಎಂಬ ಭಯದಲ್ಲೇ ದಿನ ಕಳೆಯುವಂತಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಂದು ಜುಲೈ 26,2022.ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್ ನೆಟ್ಟಾರು ಅವರು ರಾತ್ರಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ದುಷ್ಕರ್ಮಿಗಳು ಬಂದು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿ ಹತ್ಯೆ ಮಾಡಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಅಂದಿನ ಬಿಜೆಪಿ ಸರ್ಕಾರ ಎನ್ಐಎಗೆ ವಹಿಸಿತ್ತು. ಅದರಂತೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈಗಾಗಲೇ ಸಾಕಷ್ಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಲವು ಬಾರಿ ದಾಳಿಗಳನ್ನು ನಡೆಸಿ ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಪಿಎಫ್ ಐ ಕಾರ್ಯಕರ್ತರು ಮತ್ತು ಮುಖಂಡ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

Ad Widget . Ad Widget . Ad Widget .

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಶರಣಾಗತಿಗೆ ಸೂಚಿಸಿದ ಗಡುವು ನೀಡಿದ್ದರು. ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂ.30ರೊಳಗೆ ಶರಣಾಗಬೇಕು, ಇಲ್ಲವೇ ಆರೋಪಿಗಳ ಮನೆ, ಆಸ್ತಿ ಮುಟ್ಟುಗೋಲು ಹಾಕುವುದಾಗಿ ಸೂಚನೆ ನೀಡಲಾಗಿತ್ತು. ಜತೆಗೆ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದ್ದಲ್ಲದೆ, ಆರೋಪಿಗಳ ಮನೆಗಳಲ್ಲೂ ಭಿತ್ತಿಪತ್ರ ಹಚ್ಚುವ ಮೂಲಕ ಮಾಹಿತಿ ನೀಡಲಾಗಿತ್ತು. ಆದರೆ ಆರೋಪಿಗಳು ಶರಣಾಗಿಲ್ಲ. ಇದೀಗ ಮತ್ತೆ ಆಗಸ್ಟ್ 18ರ ವರೆಗೆ ಗಡುವನ್ನು ನೀಡಿದ್ದಾರೆ. ತಲೆಮರೆಸಿಕೊಂಡಿಕೊಂಡುವ ಆರೋಪಿಗಳ ಆಸ್ತಿ ಜಪ್ತಿ ಮಾಡಬಹುದು ಎನ್ನಲಾಗಿದ್ದರೂ ಇದಕ್ಕೂ ಸಮಯ ತಗಲುತ್ತದೆ. ಆರೋಪಿಯ ಹೆಸರಿನಲ್ಲಿರುವ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಮಾಹಿತಿಯನ್ನು ಎನ್ಐಎ ಅಧಿಕಾರಿಗಳು ಕಂದಾಯ ಇಲಾಖೆ, ಬ್ಯಾಂಕ್ಗಳು ಮತ್ತಿತರ ಮೂಲಗಳಿಂದ ಸಂಗ್ರಹಿಸಿ, ಆರೋಪಿಗಳ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಬಳಿಕ ಆರೋಪಿಯದ್ದೇ ಆಸ್ತಿ ಎಂದು ದೃಢೀಕರಣಗೊಂಡಲ್ಲಿ ಮುಟ್ಟುಗೋಲು ಹಾಕಿಕೊಂಡು ಸರಕಾರದ ವಶಕ್ಕೆ ಪಡೆಯಯಬಹುದು ಎಂಬ ಮಾಹಿತಿ ಇದೆ.

ಒಟ್ಟು 8 ಮಂದಿ ಶಂಕಿತ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಸುಳಿವಿಗಾಗಿ ವಿಶೇಷ ನಗದು ಬಹುಮಾನವನ್ನು ಎನ್ ಐ ಎ ಅಧಿಕಾರಿಗಳು ಘೋಷಿಸಿದ್ದಾರೆ. ಆದರೂ ಪ್ರಮುಖಬಆರೋಪಿಗಳು ಈವರೆಗೆ ಸಿಕ್ಕಿಲ್ಲ. ಅಮಾಯಕರು, ಸಾಮಾನ್ಯ ಕುಟುಂಬದ ಮಕ್ಕಳು ಈ ರೀತಿ ಬಲಿಯಾಗುತ್ತಿರುವುದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ. ಇಂದಿಗೆ ಪ್ರವೀಣ್ ನೆಟ್ಟಾರು ಎಂಬ ಅಮಾಯಕ ಯುವಕ ಬಲಿಯಾಗಿ ಒಂದು ವರ್ಷ. ಸುಳ್ಯದಲ್ಲಿ ಇಂದು ಪ್ರವೀಣ್ ನೆಟ್ಟಾರು ಸ್ಮ್ರತಿ ದಿನ ಮತ್ತು ರಕ್ತದಾನ ಶಿಬಿರವನ್ನು ಸಂಘಟನೆಗಳು ಹಮ್ಮಿಕೊಂಡಿರುವುದು ಶ್ಲಾಘನೀಯ.

ಯಾರೇ ಎನೇ ‌ಅನ್ನಲಿ ಮಾನವ ಜೀವ ಅಮೂಲ್ಯ. ವ್ಯಕ್ತಿಯೊಬ್ಬ ಯಾವುದೇ ಜಾತಿ– ಧರ್ಮಕ್ಕೆ ಸೇರಿದ್ದರೂ ಮಾನವೀಯತೆಯೇ ಮುಖ್ಯ. ನಾಗರಿಕ ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಕಷ್ಟದಲ್ಲಿದ್ದಾಗ, ನೋವಿನಲ್ಲಿದ್ದಾಗ ಜನ ಜಾತಿ– ಧರ್ಮ ಭೇದ ಮರೆತು ಒಬ್ಬರಿಗೊಬ್ಬರು ಸಹಾಯ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕೂಡ ಕೋಮು ಗಲಭೆಗಳ ಸಂದರ್ಭದಲ್ಲೂ ಇಂತಹ ಮಾನವೀಯ ಪ್ರಸಂಗಗಳು ಬೇಕಾದಷ್ಟು ನಡೆದಿವೆ. ಆದ್ದರಿಂದ ಜನರ ನಡುವಿನ ಸೌಹಾರ್ದದ ಕೊಂಡಿಯನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯುವ ಪ್ರಯತ್ನ ಆಗಬೇಕು. ಆಯಾ ಸಮುದಾಯದ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಮತೀಯ ಸಂಘಟನೆಗಳ ಕಿವಿಹಿಂಡಿ ಬುದ್ಧಿ ಹೇಳಬೇಕು. ಎಲ್ಲರೂ ಸಂಯಮ ಮತ್ತು ವಿವೇಕವನ್ನು ಪ್ರದರ್ಶಿಸಬೇಕು. ಕರಾವಳಿ ಭಾಗಕ್ಕೆ ಅಂಟಿಕೊಂಡ ಕಪ್ಪುಚುಕ್ಕೆ ಹೋಗಲಾಡಿಸಲು ಸಾಮೂಹಿಕ ಪ್ರಯತ್ನ ನಡೆಯಬೇಕು.

Leave a Comment

Your email address will not be published. Required fields are marked *