Ad Widget .

ಕೊಡಗು:ಮಾದಕ ವಸ್ತು ಮಾರಾಟ| 8 ಮಂದಿ ಬಂಧನ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ವ್ಯಾಪ್ತಿಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಟ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ರಶೀದ್(23) ಅರೇಕಾಡು, ಹೆಚ್.ಆರ್ ಸುದೀಶ್(23) ಒಂಟಿಯಾಂಗಡಿ, ಇಮ್ರಾನ್ ಖಾನ್(35) ಮೈಸೂರಿನ ಕೆಸಿಪಿ ಕಾಲೋನಿ, ಎಂ.ಪ್ರಕಾಶ್ (24) ಮುರ್ತಾಮುಡಿ, ಹೆಚ್.ಎಂ.ಶಾಂತಕುಮಾರ್(27) ಚೇರಂಬಾಂಣೆ, ಎಸ್.ಎಂ.ಸಜೀರ್(37) ಕಡಗದಾಳು, ಎಂ.ಇ.ನಿಯಾಜ್(35) ಕಡಗದಾಳು, ಇಮ್ರಾನ್ ಖಾನ್(46) ಮೈಸೂರಿನ ಶಾಂತಿನಗರ, ಮೊದಲಾದವರನ್ನು 1 ಕೆ.ಜಿ 243 ಗ್ರಾಂ ಗಾಂಜಾ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.

Ad Widget . Ad Widget . Ad Widget .

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಕಛೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ಬಿ.ಎಸ್.ಶಿವರುದ್ರಪ್ಪ, ಸಿಪಿಐ, ವಿರಾಜಪೇಟೆ ವೃತ್ತ ಮತ್ತು ಶ್ರೀ ಮಂಜುನಾಥ.ಸಿ.ಸಿ, ಪಿಎಸ್‌ಐ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಜು. 26ರಂದು ಕದನೂರು ನಾಪೋಕ್ಲು ರಸ್ತೆ ಜಂಕ್ಷನ್ ಬಳಿ ದಾಳಿ ನಡೆಸಿದ್ದಾರೆ.

ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ. ರಾಮರಾಜನ್, ಐಪಿಎಸ್ ಮತ್ತು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು.

Leave a Comment

Your email address will not be published. Required fields are marked *