Ad Widget .

ಎರಡೂವರೆ ತಿಂಗಳ ಮಗುವನ್ನು ಹೊಡೆದು ಕೊಂದ ತಂದೆ

ಸಮಗ್ರ ನ್ಯೂಸ್:ಎರಡೂವರೆ ತಿಂಗಳ ತನ್ನ ಕಂದನನ್ನು ಮಂಚದ ಮೇಲೆ ಹೊಡೆದು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಗುವನ್ನು ಹೊಡೆದ ರಭಸಕ್ಕೆ ಮಗು ಜೀವಾಂತ್ಯವನ್ನು ಕಂಡಿದೆ.

Ad Widget . Ad Widget .

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದೇ ವೇಳೆ ಕರುಳ ಕುಡಿಯನ್ನು ಕಳೆದುಕೊಂಡ ತಾಯಿಯ ಪರಿಸ್ಥಿತಿ ಹೇಳತೀರದು. ಪೊಲೀಸರು ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತಂದೆ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.

Ad Widget . Ad Widget .

ಈ ಘಟನೆಯು ಹತ್ರಾಸ್‌ನ ಸಾಸ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಖೇಡಾ ಫಿರೋಜ್‌ಪುರ ಗ್ರಾಮದಲ್ಲಿ ನಡೆದಿದೆ. ಇಲ್ಲಿ ವಾಸವಾಗಿರುವ ಯೋಗೇಶ್ ಕೂಲಿ ಕೆಲಸ ಮಾಡುತ್ತಿದ್ದು, ಸುಮಾರು ಮೂರು ವರ್ಷಗಳ ಹಿಂದೆ, ಮಾನ್ಸಿಂಗ್ ಗ್ರಾಮದ ನಾಗ್ಲಾ ನಿವಾಸಿ ಡಾಲಿ ಎಂಬಾಕೆಯನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಮೊದಲ ಮಗ ವಿರಾಟ್‌ಗೆ 2 ವರ್ಷ ಮತ್ತು ಕನ್ಹಯ್ಯಾಗೆ ಎರಡೂವರೆ ತಿಂಗಳು. ಯೋಗೇಶ್ ಮಾದಕ ವ್ಯಸನಿಯಾಗಿದ್ದು, ಈ ಕಾರಣದಿಂದ ಕುಟುಂಬದ ಎಲ್ಲರೊಂದಿಗೆ ಜಗಳವಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಘಟನೆಗೂ ಮುನ್ನ ಯೋಗೇಶ್ ಮದ್ಯದ ಅಮಲಿನಲ್ಲಿದ್ದ, ಈ ವೇಳೆ ದಂಪತಿಗಳ ನಡುವೆ ಜಗಳ ನಡೆದಿತ್ತು. ಅಷ್ಟರಲ್ಲಿ ಯೋಗೇಶ್ ತಾಳ್ಮೆ ಕಳೆದುಕೊಂಡು ಡಾಲಿಯ ಮಡಿಲಲ್ಲಿ ಮಲಗಿದ್ದ ಕನ್ಹಯ್ಯನನ್ನು ಎತ್ತಿ ಮಂಚದ ಮೇಲೆ ಎಸೆದಿದ್ದಾನೆ. ಇದರಿಂದ ಕನ್ಹಯ್ಯನ ತಲೆ ಹೋಗಿ ಮಂಚದ ಬದಿಗೆ ಬಡಿದಿದೆ. ಯೋಗೇಶ್‌ನ ಈ ಕೃತ್ಯ ಅರಿತ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ತನ್ನ ಸ್ವಂತ ಮಗನನ್ನು ಅಮಾನುಷವಾಗಿ ಕೊಲೆ ಮಾಡಿದಕ್ಕೆ ಆತನನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಯೋಗೇಶ್‌ ಓಡಿ ಹೋಗದಂತೆ ಗ್ರಾಮಸ್ಥರು ಹಗ್ಗದಿಂದ ಕಟ್ಟಿ ಹಾಕಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಯೋಗೇಶನನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *