Ad Widget .

ಸುಳ್ಯ: ನೆಟ್ವರ್ಕ್ ಸಮಸ್ಯೆಯಿಂದ ಹೈರಾಣಾದ ಕೊಲ್ಲಮೊಗ್ರ- ಹರಿಹರದ ಜನತೆ| ಎ.ಸಿ ನಿರ್ದೇಶನಕ್ಕೂ ಕ್ಯಾರೇ ಎನ್ನದ BSNL ಅಧಿಕಾರಿಗಳು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕೊಲ್ಲಮೊಗ್ರ- ಹರಿಹರ ಪಲ್ಲತ್ತಡ್ಕ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಜನರು ಹೈರಾಣಾಗಿದ್ದು, ಈ ಬಗ್ಗೆ BSNL ಅಧಿಕಾರಿಗಳಿಗೆ ಎ.ಸಿ ಮೂಲಕ ನಿರ್ದೇಶನ ನೀಡಿದರೂ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ.

Ad Widget . Ad Widget .

ಕೆಲ ದಿನಗಳಿಂದ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ಈ ಕುಂಭದ್ರೋಣ ಕೊಲ್ಲಮೊಗ್ರ- ಹರಿಹರ ಭಾಗದಲ್ಲಿ ಮಳೆಯಿಂದ ನೆರೆ ಬಂದು, ಕೊಲ್ಲಮೊಗ್ರದ, ಬೆಂಡೋಡಿ ಎಂಬಲ್ಲಿ ಸೇತುವೆ ಕೊಚ್ಚಿಹೋಗಿ 70 ಮನೆಗಳಿಗೆ ಸೇತುವೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಅಲ್ಲಿರುವ ಜನರ ಸಂಪರ್ಕಿಸುವುದೇ ಸಾಹಸ. ಇದರ ಜೊತೆಗೆ ವಿದ್ಯುತ್‌ ಸಮಸ್ಯೆ, ನೆಟ್ವರ್ಕ್ ಸಮಸ್ಯೆ ಕೂಡ ಉಂಟಾಗಿದೆ. ಈ ನೆಟ್ವರ್ಕ್ ಸಮಸ್ಯೆ ಸರಿಪಡಿಸುವ ಸಲುವಾಗಿ ಗ್ರಾಮಸ್ಥರು ಸೇರಿಕೊಂಡು BSNL ಅಧಿಕಾರಿಗಳ ಜೊತೆ ಮಾತನಾಡಿ ಟವರ್‌ ನಲ್ಲಿರುವ ಜನರೇಟರ್ ಅನ್ನು ಚಾಲೂ ಮಾಡಲು ಒಂದು ಬ್ಯಾಟರಿ ಬೇಕಾಗಿದೆ, ಇದಕ್ಕೆ ಬ್ಯಾಟರಿ ವ್ಯವಸ್ಥೆ ನಾವು ಮಾಡಿ ಕೊಡುತ್ತೇವೆ ನೀವು ಸಹಕರಿಸಿ ನೆಟ್ವರ್ಕ್‌ ವ್ಯವಸ್ಥೆ ಮಾಡಿಕೊಡಿ ಎಂದರೂ BSNL ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.

Ad Widget . Ad Widget .

ಈ ಕಾರಣ ಸ್ಥಳೀಯರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಅವರು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಗೆ ತಿಳಿಸಿದ್ದು, ಅವರು ಸುಳ್ಯ ತಹಶೀಲ್ದಾರ್‌ ಗೆ ಮಾಹಿತಿ ನೀಡಿ ಅವರ ಜೊತೆಗೆ ಜು.25ರಂದು ಕೊಲ್ಲಮೊಗ್ರ ಮತ್ತು ಹರಿಹರ ಪಲ್ಲತ್ತಡ್ಕದ ಬಳಿಯಿರುವ ಟವರ್ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಜನರ ಸಂಕಷ್ಟವನ್ನೂ ಅರಿತು ಬ್ಯಾಟರಿಯ ಹಣ ನೀಡುತ್ತೇವೆ ನೀವು ತಕ್ಷಣ ಬಂದು ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸಿ ಎಂದು BSNL ಅಧಿಕಾರಿಗಳಿಗೆ ಸ್ಥಳದಿಂದಲೇ ಕರೆಮಾಡಿ ಹೇಳಿದ್ದಾರೆ. ಈ ವೇಳೆ ಒಪ್ಪಿಕೊಂಡ BSNL ಅಧಿಕಾರಿಗಳು ಸಂಜೆ ಒಳಗಡೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಸಂಜೆಯಾದರೂ ಬರದ ಅವರು ಬಳಿಕ ಕರೆ ಮಾಡಿ ನಾವು ಹೇಗೆ ಅದನ್ನು ಹಾಕೋದು ನೀವೇ ಅದನ್ನು ಹಾಕಿ ಎಂದು ಕೊಲ್ಲಮೊಗ್ರದ ಸ್ಥಳೀಯರೊಬ್ಬರಿಗೆ ಕರೆ ಮಾಡಿ ಹೇಳಿದ್ದಾರೆ.

BSNL ಅಧಿಕಾರಿಗಳೇ…ನಿಮ್ಮಲ್ಲಿ ಬ್ಯಾಟರಿ ಖರೀದಿಸಿ ಅದನ್ನು ಸರಿಪಡಿಸಲು ಹಣ ಇಲ್ಲ, ಆದರೆ ಕೊಲ್ಲಮೊಗ್ರ ದ ಜನತೆ ಸಂಕಷ್ಟದಲ್ಲಿ ಇದ್ದರೂ ತಮ್ಮ ಕೈಯಿಂದ ಹಣ ಹಾಕಿ ಬ್ಯಾಟರಿ ವ್ಯವಸ್ಥೆ ಮಾಡುತ್ತೇವೆ ಎಂದರು, ಬಳಿಕ ಉಪವಿಭಾಗಾಧಿಕಾರಿ ಬಂದು ಹಣದ ವ್ಯವಸ್ಥೆ ಮಾಡುತ್ತೇವೆ ಅದನ್ನು ಒಂದು ಸರಿ ಪಡಿಸಿ ನೆಟ್ವರ್ಕ್ ಸಮಸ್ಯೆಯನ್ನು ಬಗೆ ಹರಿಸಿ ಎಂದರು. ಅದರೇ ನೀವು ಉಪವಿಭಾಗಾಧಿಕಾರಿ ಮಾತಿಗೂ ಬೆಲೆ ಕೊಡದೆ ನಿರ್ಲಕ್ಷ್ಯ ವಹಿಸಿದ್ದೀರ, ಅದಲ್ಲದೆ ಸಂಕಷ್ಟದಲ್ಲಿರುವ ಅ ಜನರ ಸಮಸ್ಯೆ ಅರ್ಥ ಅಗುದಿಲ್ವ, ನಿಮ್ಮಲ್ಲಿ ಅವರು ಕೇಳುತ್ತೀರುವುದು ಅದನ್ನು ಅಳವಡಿಸಿ ಕೊಡಿ ಅಂತ ನಿಮಗೆ ಅದು ಕೂಡ ನಿಮ್ಮಿಂದ ಸಾದ್ಯವಿಲ್ಲವೇ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *