ಸಮಗ್ರ ನ್ಯೂಸ್: ರಾಜ್ಯದ ರೈತಮಿತ್ರರು ಎಚ್ಚರವಾಗಿರಿ. ಹೈನುಗಾರರೇ ನೀವು ಈ ವಿಷವನ್ನು ತಪ್ಪದೆ ಓದಬೇಕು. ಈಗ ಹಲವಾರು ಜಾನುವಾರುಗಳಲ್ಲಿ ಒಟೈಟಿಸ್ ಕಾಯಿಲೆ ಹೈನುಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಹೈನುಗಾರರು ಎಚ್ಚರ ವಹಿಸದಿದ್ದರೆ ಜಾನುವಾರುಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ರೋಗ ಲಕ್ಷಣಗಳೇನು?
ಪ್ರಾರಂಭದಲ್ಲಿ ಹಸುವಿನ ಕಿವಿ ಸೋರಲು ಪ್ರಾರಂಭ ಆಗುತ್ತದೆ. ಬಳಿಕ ಅದಕ್ಕೆ ತಲೆ ನೋವು ಕಾಣಿಸಿಕೊಂಡು ಸೊರಗುತ್ತದೆ. ಇದಾದ ಮೇಲೆ ಮೂಗು, ಬಾಯಿ, ಕಿವಿ ಕೂಡ ಸೋರಲು ಪ್ರಾರಂಭ ಆಗುತ್ತದೆ. ಕಳೆದ ವರ್ಷ ಇದೇ ವೈರಲ್ ಕಾಯಿಲೆಯನ್ನು ವಿಜ್ಞಾನಿಗಳು MCF ಎಂದು ಕರೆದಿದ್ದರು. ಈ ಕಾಯಿಲೆಗೆ ನಿರ್ದಿಷ್ಟ ಔಷದ ಇಲ್ಲದೇ ರೈತರು ಪರದಾಡುತ್ತಿರುವುದು ಮಾತ್ರ ಸುಳ್ಳಲ್ಲ.
ಕಾಯಿಲೆ ಕಾಣಿಕೊಂಡಾಗ ರೈತರು ಏನುಮಾಡಬೇಕು?
ಮೇಲೆ ಹೇಳಿರುವ ರೋಗ ಲಕ್ಷಣಗಳು ನಿಮ್ಮ ಹಸುವಿನಲ್ಲೂ ಕಾಣಿಸಿಕೊಂಡರೆ ಏನು ಮಾಡಬೇಕು? ರೈತರು ಎಚ್ಚರ ವಹಿಸಬೇಕಾದ ಕ್ರಮಗಳು ಹೀಗಿವೆ:
*ಪಶು ವೈದ್ಯರು ಹೇಳುವಂತೆ, ಕಾಯಿಲೆ ಕಾಣಿಸಿಕೊಂಡಾಗ ಹಸುವನ್ನು ಪ್ರತ್ಯೇಕವಾಗಿ ಕಟ್ಟಿ ಹಾಕಬೇಕು. ವೈದ್ಯರಿಂದ ನಿರಂತರ ಚಿಕಿತ್ಸೆ ನೀಡಿಸಬೇಕು. ಹಸುವಿಗೆ ವೈದ್ಯರಿಂದ ಆಂಟಿ ಬಯೋಟೆಕ್, ಐವರ್ ಮೆಕ್ಟೀನ್ ಎಂಬ ಇಂಜೆಕ್ಷನ್ ಕೊಡಿಸಬೇಕು.
*ಇನ್ನು ಕಾಯಿಲೆ ಇರುವ ಹಸು ತಿಂದ ಆಹಾರ ಯಾವುದೇ ಕಾರಣಕ್ಕೂ ಇನ್ನೊಂದು ಹಸುವಿಗೆ ನೀಡಬಾರದು. ಇದರಿಂದ ಒಂದು ಹಸುವಿನಿಂದ ಇನ್ನೊಂದು ಹಸುವಿಗೆ ರೋಗ ಹರಡುವುದನ್ನು ತಪ್ಪಿಸಬಹುದು.
*ಸ್ವಲ್ಪ ಎಚ್ಚರ ತಪ್ಪಿದರೂ ರಾಸುಗಳ ಜೀವಕ್ಕೆ ಅಪಾಯವಿರುವ ಕಾರಣದಿಂದ ಹೈನುಗಾರರು ನಿರ್ಲಕ್ಷ್ಯ ಮಾಡದೇ ನಿಮ್ಮ ದನಕರುಗಳನ್ನು ಕಾಪಾಡಿಕೊಳ್ಳಿ.