Ad Widget .

ಸುಳ್ಯ: ಕೋಲ್ಚಾರಿನಲ್ಲಿ ಅಪಾಯಕಾರಿ ಮರಗಳ ತೆರವುಗೊಳಿಸಲು ತಹಶಿಲ್ದಾರ್ ಗೆ ಮನವಿ

ಸಮಗ್ರ ನ್ಯೂಸ್: ಸುಳ್ಯದಿಂದ ಕೋಲ್ಚಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಇರುವ ಸುಮಾರು 40 ರಷ್ಟು ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸದಂತೆ ಮುಂಜಾಗ್ರತಾ ಕಾರ್ಯವಾಗಬೇಕೆಂದು ಸುಳ್ಯ ತಹಶಿಲ್ದಾರವರಿಗೆ ಮನವಿ ಸಲ್ಲಿಸಲಾಯಿತು.

Ad Widget . Ad Widget .

ಈಗಾಗಲೇ ಸುರಿಯುತ್ತಿರುವ ವಿಪರೀತ ಮಳೆಗೆ ರಸ್ತೆಯ ಬದಿಯ ಮರ ಹಾಗೂ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಾಕಷ್ಟು ಮರಗಳು ರಸ್ತೆ ಮೇಲೆ ವಾಲಿಕೊಂಡಿದ್ದು ಬೀಳುವ ಸಾಧ್ಯತೆ ಹೆಚ್ಚಿದ್ದು ಹಾನಿ ಸಂಭವಿಸುವ ಮೊದಲು ಮುನ್ನೆಚ್ಚರಿಕೆ ವಹಿಸಿ ಸಂಬಂಧಪಟ್ಟ ಇಲಾಖೆಗೆ ಮರಗಳ ತೆರವಿಗೆ ಸೂಚಿಸಬೇಕಾಗಿ ಯುವ ನ್ಯಾಯವಾದಿ ಸತೀಶ್ ಕುಂಭಕೋಡು ಮನವಿ ಸಲ್ಲಿಸಿರುತ್ತಾರೆ.

Ad Widget . Ad Widget .

Leave a Comment

Your email address will not be published. Required fields are marked *