ಸಮಗ್ರ ನ್ಯೂಸ್: ಕನ್ನಡದಲ್ಲಿ ಬಿಡುಗಡೆಯಾಗಿ ಕೊನೆಗೆ ಪ್ಯಾನ್ ಇಂಡಿಯಾ ಮೂವಿ ಆಗಿ ತೆರೆ ಕಂಡ ಕಾಂತರ ಸಿನಿಮಾದಲ್ಲಿ ಒಂದು ಫನ್ನಿ ರೋಲ್ ನಲ್ಲಿ ಕಾಣಿಸಿಕೊಂಡಿರುವ ನಟ ದೀಪಕ್ ರೈ ಪಾಣಾಜೆ ಅವರು ಇದೀಗ ಧಾರಾವಾಹಿಗೆ ಕಾಲಿಡುತ್ತಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ’ಗಟ್ಟಿಮೇಳ’ದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ ದೀಪಕ್ ರೈ ಪಾಣಾಜೆ.ಪಾತ್ರ ಬಹಳ ದೊಡ್ಡದಲ್ಲದಿದ್ದರೂ ಬಹಳಷ್ಟು ಟ್ವಿಸ್ಟ್ ಗಳನ್ನು ಹೊಂದಿರುವ ಈ ಪಾತ್ರಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಒಬ್ಬ ಪೋಸ್ಟ್ ಮಾಸ್ಟರ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟ ತಮ್ಮ ಅಭಿನಯ ಹಾಗೂ ಪಾತ್ರದ ಪ್ರಾಮುಖ್ಯತೆಯ ಮೂಲಕ ಧಾರಾವಾಹಿ ಹೊಸ ಟ್ವಿಸ್ಟ್‌ಗಳನ್ನು ಕೊಡಲಿದ್ದಾರೆ.