Ad Widget .

ಮಂಗಳೂರು: ರಾಜ್ಯಮಟ್ಟದ ಭಾವೈಕ್ಯತಾ ಸಮ್ಮಿಲನ -ಕವಿಗೋಷ್ಠಿ | ವಿಧಾನ ಸಭಾಧ್ಯಕ್ಷರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಭಾವೈಕ್ಯತಾ ಪರಿಷತ್ ಆಯೋಜಿಸಿದ ಭಾವೈಕ್ಯತಾ ಸಮ್ಮಿಲನ ಸಮಾರಂಭವು ಜು.30 ರಂದು ಭಾನುವಾರ ಮಂಗಳೂರಿನ ಕಂಕನಾಡಿ ಜೆಪ್ಪು ಮರಿಯಾ ಸಭಾಂಗಣದಲ್ಲಿ ನಡೆಯಲಿದೆ. ಚಿತ್ರ ನಿರ್ದೇಶಕ, ಗಾಯಕ ಮತ್ತು ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳರವರು ಈ ಸಮಾರಂಭವನ್ನು ನೆರವೇರಿಸಲಿದ್ದಾರೆ.

Ad Widget . Ad Widget .

ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷರಾದ ಕೆ.ಎಂ.ಇಕ್ಬಾಲ್ ಬಾಳಿಲ ಅವರ ಅಧ್ಯಕ್ಷತೆಯಲ್ಲಿ ನಾಡಿನ ನೂರು ಕವಿಗಳ ಕವನ ವಾಚನ, ಸೌಹಾರ್ದ ಗೀತೆ ಬಿಡುಗಡೆ, ಚರ್ಚಾ ಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

Ad Widget . Ad Widget .

ಹವ್ಯಾಸಿ ಪತ್ರಕರ್ತ ಕೆ.ಎ. ಅಬ್ದುಲ್ ಅಝೀಝ್ ಪುಣಚ ಸಂದೇಶ ಭಾಷಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಆಗಮಿಸುವ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ 2023 ನೇ ಸಾಲಿನ “ಭಾವೈಕ್ಯತಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗುವದು.

ಇದೇ ಸಂದರ್ಭದಲ್ಲಿ ಸುಳ್ಯದ ಸಾಹಿತಿ ಜ್ಯೋತಿಷಿಗಳಾದ ಎಚ್ .ಭೀಮರಾವ್ ವಾಷ್ಠರ್ ಸಾಹಿತ್ಯ ರಚಿಸಿ ಹಾಡಿರುವ ಸೌಹಾರ್ದ ಸಂಗಮ ಎಂಬ ಭಾವೈಕ್ಯತಾ ಗೀತೆಯನ್ನು ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಬಿಡುಗಡೆ ಮಾಡಲಿದ್ದಾರೆ.

ವಿವಿಧ ಧರ್ಮಗಳ ಸಮ್ಮಿಲನದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕವಿಗೂ ಭಾವೈಕ್ಯತಾ ಕಾವ್ಯಸಿರಿ ಪ್ರಶಸ್ತಿ ನೀಡಿ ಸತ್ಕರಿಸಲಾಗುವುದು ಎಂದು ಕರ್ನಾಟಕ ಭಾವೈಕ್ಯತಾ ಪರಿಷತ್ ನ ಸಂಚಾಲಕ ಅಬೂಬಕರ್ ಅನಿಲಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Leave a Comment

Your email address will not be published. Required fields are marked *