ಕೊಡಗು: ರಸ್ತೆ ದಾಟುವ ವೇಳೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ಕಾಡಾನೆ!

ಸಮಗ್ರ ನ್ಯೂಸ್: ಹಾಡುಹಗಲೇ ಕಾಡಾನೆಯೊಂದು ಕೆಎಸ್ಆರ್ಟಿಸಿ ಬಸ್ ಅನ್ನು ಅಡ್ಡಗಟ್ಟಿ ಅಟ್ಟಿಸಿಕೊಂಡು ಬಂದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ದೆವರಪುರದಲ್ಲಿ ಜು.22 ರಂದು ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Ad Widget ... ..

ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ ಅನ್ನು ಕಾಡಾನೆ ಅಟ್ಟಿಸಿಕೊಂಡು ಬಂದ ದೃಶ್ಯವು ಪ್ರಯಾಣಿಕರೋರ್ವರ ಮೊಬೈಲ್​ನಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಂಡಂತೆ ಕಾಡಾನೆ ರಸ್ತೆ ದಾಟುತ್ತಿದ್ದರಿಂದ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ ನಿಲ್ಲಿಸಿದ್ದಾನೆ. ಆದರೆ, ಈ ವೇಳೆ ಆನೆ ಬಸ್ ಬಳಿಗೆ ಓಡೋಡಿ ಬಂದಿದ್ದು ಇದರಿಂದ ಗಾಬರಿಗೆ ಒಳಗಾದ ಚಾಲಕ ಮತ್ತು ಪ್ರಯಾಣಿಕರು ಒಂದು ಬಾರಿ ಸ್ತಬ್ಧರಾಗಿದ್ದಾರೆ.

Ad Widget

ಆದರೆ ಅದೃಷ್ಟ ಎಂಬಂತೆ ಬಸ್ಸಿನ ಬಳಿ ಬಂದ ಕಾಡಾನೆ ಹಾಗೆಯೇ ಹೊರಟುಹೋಗಿದೆ. ಮಾತ್ರವಲ್ಲದೆ, ಯಾವುದೇ ಹಾನಿಯನ್ನು ಮಾಡದೆ ಗಜರಾಜ ಅಲ್ಲಿಂದ ಕಾಡಿನತ್ತ ಮುಖಮಾಡಿದ್ದಾನೆ.

Leave a Comment

Your email address will not be published. Required fields are marked *