ಆಯುರ್ವೇದ ವೈದ್ಯರು ಈ ಬಳ್ಳಿಯನ್ನು ಅಮೃತ, ಗುಡೂಚಿ ಮುಂತಾದ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಕಿರುಬೆರಳಿನ ಗಾತ್ರದ ಆರು ಅಂಗುಲದಷ್ಟು ಉದ್ದದ ಕಾಂಡವನ್ನು ನೆಡುವುದರಿಂದ ಈ ಬಳ್ಳಿಯನ್ನು ಬೆಳೆಸಬಹುದು ಮತ್ತು ಇದನ್ನು ಕುಂಡಗಳಲ್ಲೂ ನೆಡಬಹುದಾಗಿದೆ.
ಇದರ ಬಳ್ಳಿಯನ್ನು ಕಾಂಪೌಂಡ್, ಮಾಳಿಗೆ, ಮರಗಳ ಮೇಲೆ ಹಬ್ಬಿಸಬಹುದು. ಎಲ್ಲಾ ಋತುಗಳಲ್ಲಿ ಬೆಳೆಸಬಹುದಾದ ಅಮೃತಬಳ್ಳಿಗೆ ಕಾಲ-ಕಾಲಕ್ಕೆ ನೀರು ನೈಸರ್ಗಿಕ ಗೊಬ್ಬರ ಅವಶ್ಯಕವಾಗಿದ್ದು, ಸಾಧಾರಣವಾಗಿ ಇದಕ್ಕೆ ರೋಗ ಬಾಧೆಯಿಲ್ಲ. ಈ ಎಲೆಗಳನ್ನು ಬಳಸುವಾಗ ಸಾಕಷ್ಟು ಬಳಿತಿರಬೇಕು.
ರುಚಿಯಲ್ಲಿ ಕಹಿ ಮತ್ತು ಒಗರಾಗಿರುವ ಈ ಬಳ್ಳಿಯ ಸೇವನೆಯು ಶರೀರಕ್ಕೆ ಬಲವನ್ನು ನೀಡುತ್ತದೆ. ಚರ್ಮದ ತೊಂದರೆಯನ್ನು ನಿವಾರಿಸುತ್ತದೆ. ಜ್ವರವನ್ನು ನೀಗಿಸಿ, ರಕ್ತಹೀನತೆಯನ್ನು ಹೋಗಳಾಡಿಸುತ್ತದೆ. ಕಾಮಾಲೆಗೆ ದಿವ್ಯೌಷಧವಾಗಿರುವ ಇದು ಮಧುಮೇಹಿಗಳಿಗೆ ಹಿತಕರಾವದೂದು.
ಎರಡರಿಂದ ಮೂರು ತಿಂಗಳ ಕಾಲ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಕಾಂಡದ ರಸವನ್ನು ಎರಡು ಚಮಚ ಜೇನುತುಪ್ಪದೊಡನೆ ಆಹಾರಕ್ಕೆ ಮುಂಚೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ನಾಲ್ಕು ಚಮಚ ರಸಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪ ಸೇರಿಸಿ ದಿನದಲ್ಲಿ ಮೂರು ಬಾರಿ ಸೇವಿಸುವುದರಿಂದ ಶೀತ, ಜ್ವರ, ಕೆಮ್ಮು, ನೆಗಡಿ ಎರಡು ಮೂರು ದಿನಗಳಲ್ಲಿ ಕಡಿಮೆಯಾಗುತ್ತದೆ. ಮಕ್ಕಳಿಗೆ ಕೊಡುವ ಸಮಯದಲ್ಲಿ ಇದರಲ್ಲಿ ಕಾಲು ಭಾಗದಲ್ಲಿ ಅರ್ಧ ಪ್ರಮಾಣ ಕೊಡುವುದು ಉತ್ತಮ.
ಮಧುಮೇಹ ರೋಗಿಗಳು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು ಗೇಣು ಉದ್ದದ ಅಮೃತಬಳ್ಳಿಯ ಕಾಂಡವನ್ನು ಚೆನ್ನಾಗಿ ಜಗಿದು ರಸವನ್ನು ಮಾತ್ರ ನುಂಗಬೇಕು. ಜಗಿಯಲಾಗದವರು ಮೂರು ಚಮಚ ರಸವನ್ನು ಸೇವಿಸಬಹುದು. ಇದರಿಂದ ಸಕ್ಕರೆ ಅಂಶ ಇಳಿದು, ಕೈ-ಕಾಲು ಉರಿ, ಸುಸ್ತು, ದೌರ್ಬಲ್ಯಗಳು ಕಡಿಮೆಯಾಗುತ್ತದೆ. ಚರ್ಮರೋಗಗಳು ಕಣ್ಮರೆಯಾಗುತ್ತದೆ.
ಮೂಲವ್ಯಾಧಿಗಳು ಮೂರು ಚಮಚ ರಸಕ್ಕೆ ಒಂದು ಲೋಟ ಮಜ್ಜಿಗೆ ಸೇರಿಸಿ ದಿನದಲ್ಲಿ ಎರಡು ಮೂರು ಬಾರಿ ಕುಡಿಯೂದರಿಂದ ರಕ್ತಸ್ರಾವ ನಿಲ್ಲುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ.
ಕಾಮಲೆ ಕಾಯಿಲೆ ಇದ್ದವರು ಈ ಬಳ್ಳಿಯ ನಾಲ್ಕು ಚಮಚ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಗ್ಗೆ ಆಹಾರಕ್ಕೆ ಮೊದಲು ಸೇವಿಸಬೇಕು ಸಪ್ಪೆ ಹಾಗೂ ದ್ರವಹಾರವನ್ನು ಬಳಸಬೇಕು. ಮತ್ತು ವಿಶ್ರಾಂತಿ ತೆಗೆದುಕೊಳ್ಳಬೇಕು. ಐದರಿಂದ ಏಳು ದಿನಗಳಲ್ಲಿ ರೋಗ ಗುಣವಾಗುತ್ತದೆ. ಇದರ ಸೇವನೆಗೆ ಮೊದಲು ವೈದ್ಯರ ಸಲಹೆ ಪಡೆಯುವುದು ಅವಶ್ಯಕ.