ಸಮಗ್ರ ನ್ಯೂಸ್: ನ್ಯಾಶನಲ್ ಯೂನಿಯನ್ ಓಫ್ ಸೀಫೆರರ್ ಓಫ್ ಇಂಡಿಯ(NUSI/ಭಾರತೀಯ ರಾಷ್ಟ್ರೀಯ ನಾವಿಕರ ಸಂಘ)ದ 23ನೇ ಶಾಖೆ ಮಂಗಳೂರಿನ ಕೂಳೂರಿನಲ್ಲಿ ಜು.19ರಂದು ಶುಭಾರಂಭ ಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಶ್ರೀ ಲೂಯಿಸ್ ಗೊಂಮಿಸ್(ವೈಸ್,ಪ್ರೆಸಿಡೆಂಟ್ NUSI)ರವರು ಭಾರತೀಯ ರಾಷ್ಟ್ರೀಯ ನಾವಿಕರ ಸಂಘ)ದ 23ನೇ ಶಾಖೆಯು ಕರಾವಳಿಯ ಮತ್ತು ಕರ್ನಾಟಕದ ನಾವಿಕರ ಯಶಸ್ಸಿನ ಒಂದು ಮೈಲಿಗಲ್ಲು ಮತ್ತು ಭಾರತದ ಅಂಡಮಾನ್- ನಿಕೋಬಾರ್ ಸಹಿತ ಕರಾವಳಿಯ ಎಲ್ಲಾ ರಾಜ್ಯಗಳಲ್ಲಿ ಭಾರತೀಯ ರಾಷ್ಟ್ರೀಯ ನಾವಿಕರ ಸಂಘ(NUSI) ತನ್ನ ಶಾಖೆಯನ್ನು ವಿಸ್ತರಿಸಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭೋದ್ ರಾಜ್ ಮಾತನಾಡಿ, ಭಾರತೀಯ ರಾಷ್ಟ್ರೀಯ ನಾವಿಕರ ಸಂಘ ನಾವಿಕರ ಶಕ್ತಿ ಮತ್ತು ಶಿಪ್ಪಿಂಗ್ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು.
ಮಿಲಿಂದ್ ಕಂಡಲ್ಗಾವಂಕರ್(ಜನರಲ್ ಸೆಕ್ರೆಟರಿ ಕಂ.ಟ್ರಶರರ್)ರವರು ಭಾರತೀಯ ರಾಷ್ಟ್ರೀಯ ನಾವಿಕರ ಸಂಘ(NUSI),ಕರಾವಳಿಯ ನಿವೃತ್ತಿ ಹೊಂದಿದ ಮತ್ತು ಇತರ ನಾವಿಕರ ಮತ್ತು ಅವರ ಕುಟುಂಬದ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುವ ಭರವಸೆ ನೀಡಿದರು
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭೋದ್ ರಾಜ್ ಸರ್ವೈಯರ್ ಕಂ.ಡ್ಯು.ಡೈರೆಕ್ಟರ್ ಜನರಲ್ ಓಫ್ ಶಿಪಿಂಗ್ ಭಾರತ ಸರ್ಕಾರ , ಶ್ರೀ ಮಿಲಿಂದ್ ಕಂಡಲ್ಗಾವಂಕರ್ (ಜನರಲ್ ಸೆಕ್ರೆಟರಿ ಕಂ.ಟ್ರಶರರ್ NUSI), ಸುನಿಲ್ ನಾಯರ್ (ಉಪ.ಜನರಲ್ ಸೆಕ್ರೆಟರಿ NUSI),ಮತ್ತು ದೀಪಾರಾಜ್ (ಬ್ರಾಂಚ್ ಕಾರ್ಯದರ್ಶಿ NUSI, ಮಂಗಳೂರು) ಉಪಸ್ಥಿತರಿದ್ದರು.
NUSI,ಭಾರತೀಯ ರಾಷ್ಟ್ರೀಯ ನಾವಿಕರ ಸಂಘ(NUSI)ವು ಕೇರಳದ ಕೊಚ್ಚಿ ಮತ್ತು ಕಲ್ಲಿಕೋಟೆ ಯ ಸಂಘ ಸದಸ್ಯರೊಂದಿಗೆ ಮೀಟಿಂಗ್ ನಡೆಸಿತು. ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಮತ್ತು ಇತರ ನಾವಿಕ ಸದಸ್ಯರು ಅವರ ಕುಟುಂಬದವರು ಮತ್ತು ಹೊರ ರಾಜ್ಯದ ನಾವಿಕ ಸದಸ್ಯರು ಉಪಸ್ಥಿತರಿದ್ದರು.