ಸಮಗ್ರ ನ್ಯೂಸ್: ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿದ ಘಟನೆ ಪೆರುವಾಯಿಯ ಕೊಲ್ಲತಡ್ಕದಲ್ಲಿ ನಡೆದಿದೆ.
ಪೆರುವಾಯಿಯಿಂದ ಮಾಣಿಲ ಕಡೆ ಹೋಗುವ ರಸ್ತೆಯ ಕೊಲ್ಲತಡ್ಕ ಎಂಬಲ್ಲಿ ಯಾವುದೇ ಕಾರಣವಿಲ್ಲದೇ ವ್ಯವಸ್ಥಿತ ರೀತಿಯಲ್ಲಿ ಮೂರು ದಿನದ ಕೋಳಿ ಅಂಕ ಏರ್ಪಡಿಸಲಾಗಿತ್ತು. ಶೀಟ್ ಹಾಕಿ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಿ ಕೋಳಿ ಅಂಕ ಏರ್ಪಡಿಸಲಾಗಿದ್ದು, ಕೋಳಿ ಅಂಕದ ಆಮಂತ್ರಣ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಲೈಟ್ ಆಳವಡಿಸಿ ಹಗಲು-ರಾತ್ರಿ ನಡೆಯಬೇಕಿದ್ದ ಕೋಳಿ ಅಂಕಕ್ಕೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು ಕಾಲ್ಕಿತ್ತಿದ್ದಾರೆ.