Ad Widget .

ರೈತಬಾಂಧವರೇ ಗಮನಿಸಿ| ಬೆಳೆವಿಮೆ ಪ್ರೀಮಿಯಂ ಪಾವತಿಗೆ ಜು.31 ಕೊನೆದಿನ| ಅಡಿಕೆ, ಕಾಳುಮೆಣಸಿಗೆ ಎಷ್ಟು ಮೊತ್ತ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

ಸಮಗ್ರ ನ್ಯೂಸ್: 2023 -24 ನೇ ಸಾಲಿನ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ದಕ್ಷಿಣ ಕನ್ನಡ ರೈತರಿಗೆ ಕೊನೆಗೂ ಅವಕಾಶ ದೊರೆತಿದೆ. ಈ ಕುರಿತ ಆದೇಶವನ್ನು ರಾಜ್ಯ ಸರಕಾರ ಜು.19 ರಂದು ಹೊರಡಿಸಿದೆ. ಜು.31 ಪ್ರೀಮಿಯಂ ಪಾವತಿಸಲು ಅಂತಿಮ ದಿನವಾಗಿದೆ.

Ad Widget . Ad Widget .

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಕಾರ್ಯ ರೂಪಕ್ಕೆ ಬಂದು 5 ವರ್ಷಗಳು ಸಂದಿದ್ದು, ಇಷ್ಟೂ ವರ್ಷಗಳಲ್ಲಿ ಜೂನ್‌ ತಿಂಗಳ ಆರಂಭದ ದಿನದಿಂದ ಜೂ ನ್‌ ತಿಂಗಳ ಅಂತ್ಯದವರೆಗೆ ಪ್ರೀಮಿಯಂ ಪಾವತಿಗೆ ಕಲ್ಪಿಸಿ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಬಾರಿ ಜುಲೈ ತಿಂಗಳ ಮಧ್ಯ ಭಾಗದವರೆಗೆ ಸರಕಾರ ಯಾವುದೇ ಅಧಿಸೂಚನೆ ಹೊರಡಿಸಿರಲಿಲ್ಲ . ಆದರೆ ಜೂನ್‌ ತಿಂಗಳಿನಲ್ಲಿ ಭತ್ತದ ಬೆಳೆ ಫಸಲ್‌ ಭಿಮಾ ಯೋಜನೆಯಡಿ ವಿಮಾ ಕಂತು ಪಾವತಿಸಲು ಸರಕಾರ ಆದೇಶ ಹೊರಡಿಸಿತ್ತು. ಇದರಿಂದ ಸಹಜವಾಗಿಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಟ ಪ್ರಮಾಣದಲ್ಲಿರುವ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದರು.

Ad Widget . Ad Widget .

ಆಡಿಕೆ ಬೆಳೆಗಾರರ ತಲ್ಲಣವನ್ನು ಗಮನಿಸಿದ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಈ ಕುರಿತು ಸಂಬಂದಪಟ್ಟ ಇಲಾಖೆಯಲ್ಲಿ ಮಾತನಾಡುವುದಾಗಿ ಭರವಸೆ ನೀಡಿದ್ದರು. ಬಳಿಕದ ದಿನಗಳಲ್ಲಿ ತೋಟಗಾರಿಕಾ ಇಲಾಖೆ ಸಚಿವ ರಾಜಣ್ಣ ಜತೆ ಮಾತನಾಡಿ ಶೀಘ್ರ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರು . ಇನ್ನೂ ವಿಧಾನಸಭೆಯಲ್ಲಿ ಕೂಡ ಈ ವಿಷಯವನ್ನು ಎತ್ತಿ ತಕ್ಷಣ ಸಮಸ್ಯೆ ಪರಿಹರಿಸುವಂತೆ ಸರಕಾರಕ್ಕೆ ಒತ್ತಾಯಿಸಿದ್ದರು.

ಮಾಜಿ ಶಾಸಕ ಸಂಜೀವ ಮಠಂದೂರು , ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕೂಡ ರೈತರಿಗೆ ಭರವಸೆಯ ನುಡಿಗಳನ್ನಾಡಿದ್ದರು. ಈ ನಡುವೆ ನಿನ್ನೆ ಸರಕಾರ ದಕ್ಷಿಣ ಕನ್ನಡ ಜಿಲ್ಲೆ ಸಂಬಂಧಿಸಿದಂತೆ ಅಡಿಕೆ ಮತ್ತು ಕಾಳು ಮೆಣಸನ್ನು ಬೆಳೆ ವಿಮೆ ಯೋಜನೆಯಡಿ ಸೇರಿಸಿ ಆದೇಶಿಸಿದೆ.

ಆಡಿಕೆಗೆ ಗರಿಷ್ಟ ವಿಮಾ ಮೊತ್ತ ಹೆಕ್ಟರಿಗೆ 128000 ಎಂದು ನಿಗದಿ ಪಡಿಸಲಾಗಿದ್ದು ಇದರಲ್ಲಿ ರೈತ ಪಾವತಿಸಬೇಕಾದ ಮೊತ್ತ ರೂ 6400 ಇನ್ನೂ ಕಾಳು ಮೆಣಸಿಗೆ ಹೆಕ್ಟರ್‌ ವೊಂದಕ್ಕೆ ಗರಿಷ್ಟ ಪ್ರೀಮಿಯಂ ಮೊತ್ತ 47000 ರೂಪಾಯಿ ಎಂದು ನಿಗದಿಪಡಿಸಲಾಗಿದ್ದು, ಅದರಲ್ಲಿ ರೈತ ಪಾವತಿಸಬೇಕಾದ ಮೊತ್ತ ರೂ 2350 ಆಗಿರುತ್ತದೆ.

Leave a Comment

Your email address will not be published. Required fields are marked *