Ad Widget .

ಚಲಿಸುತ್ತಿದ್ದ ಬಸ್ ಬೆಂಕಿ ಹತ್ತಿಕೊಂಡು ಭಸ್ಮ| ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ‌ ಭಾರೀ ಅನಾಹುತ

ಸಮಗ್ರ ನ್ಯೂಸ್: ಸಾರಿಗೆ ಬಸ್ ಚಾಲನೆಯ ವೇಳೆಯಲ್ಲಿ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಇಲ್ಲಿನ ನಗರ ಸಾರಿಗೆ ಬಸ್ ನಲ್ಲಿ ಬೆಂಕಿ ಕಂಡು ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿದ ಕೆಲವೇ ಕ್ಷಣಗಳಲ್ಲಿ ನಡುರಸ್ತೆಯಲ್ಲಿ ಬಸ್ ಧಗಧಗಿಸಿ ಹೊತ್ತಿ ಉರಿದಿದೆ. ದಾವಣಗೆರೆಯ ನಿಟ್ಟುವಳ್ಳಿಯ 60 ಅಡಿ ರಸ್ತೆಯಲ್ಲಿ ಇಂದು ನಗರ ಸಾರಿಗೆ ಬಸ್ಸಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Ad Widget . Ad Widget .

ಇದನ್ನು ಗಮನಿಸಿದ ಚಾಲಕ, ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಮುಂದಾಗಲಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.

Ad Widget . Ad Widget .

ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಇಡೀ ಬಸ್ ನಡು ರಸ್ತೆಯಲ್ಲೇ ಧಗಧಗಿಸಿ ಹೊತ್ತಿ ಉರಿದು ಬೆಂಕಿಗೆ ಆಹುತಿಯಾಗಿದೆ. ಹರಸಾಹಸ ಪಟ್ಟು ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ನಂದಿಸಿದ್ದಾರೆ.

ಈ ಬಸ್ ಸರಸ್ವತಿನಗರದಿಂದ ಹೋಂಡಾ ವೃತ್ತದವರೆಗೆ ಸಂಚರಿಸುತ್ತಿತ್ತು. ಈ ವೇಳೆಯಲ್ಲೇ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಹೊತ್ತಿ ಉರಿದು ಹೋಗಿದೆ.

Leave a Comment

Your email address will not be published. Required fields are marked *